ಮುಂಬೈಗೆ ಬಂದಾಗ ಉದ್ಧವ್ ಠಾಕ್ರೆ ಮನೆ ಮಾತೋಶ್ರೀಗೆ ಭೇಟಿ ನೀಡಲ್ಲ ದ್ರೌಪದಿ ಮುರ್ಮು

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುರ್ಮು ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.

ಮುಂಬೈಗೆ ಬಂದಾಗ ಉದ್ಧವ್ ಠಾಕ್ರೆ ಮನೆ ಮಾತೋಶ್ರೀಗೆ  ಭೇಟಿ ನೀಡಲ್ಲ ದ್ರೌಪದಿ ಮುರ್ಮು
ಉದ್ಧವ್ ಠಾಕ್ರೆ-ದ್ರೌಪದಿ ಮುರ್ಮು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 14, 2022 | 3:51 PM

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ (Droupadi Murmu)  ಅವರು  ಗುರುವಾರ (ಇಂದು) ಮುಂಬೈಗೆ (Mumbai) ಬರಲಿದ್ದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ (Uddhav Thackeray)ಅವರ ಮನೆ ಮಾತೋಶ್ರೀಗೆ ಭೇಟಿ ನೀಡುವುದಿಲ್ಲ. ರಾಷ್ಟ್ರಪತಿ ಚುನಾವಣೆಗಾಗಿ ಮತಯಾಚಿಸಲು ಮುರ್ಮು ಮುಂಬೈಗೆ ಬರಲಿದ್ದು ಉದ್ಧವ್ ಠಾಕ್ರೆ ಮನೆಗೆ ಭೇಟಿ ನೀಡುವುದಿಲ್ಲ. ಅದೇ ವೇಳೆ ಕಾಂಗ್ರೆಸ್ ಮತ್ತು ಎನ್​​ಸಿಪಿ ನಾಯಕನ್ನೂ ಭೇಟಿಯಾಗುವುದಿಲ್ಲ ಎಂದು ಬಿಜೆಪಿ ಹೇಳಿದೆ. ಈ ಎರಡೂ ಪಕ್ಷಗಳು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತಿವೆ. ಶಿವಸೇನಾ ಸಂಸದರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದು ಉದ್ಧವ್ ಠಾಕ್ರೆಯವರು ಮುರ್ಮು ಅವನ್ನು ಭೇಟಿಯಾಗಲು ಹೋಗುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಏನನ್ಮಧ್ಯೆ, ಮುರ್ಮು ಅವರು ಆಡಳಿತಾರೂಢ ಪಕ್ಷದ ಶಾಸಕ ಮತ್ತು ಸಂಸದರನ್ನು ಭೇಟಿಯಾಗಿ ಮತಯಾಚಿಸಿಲಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುರ್ಮು ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷ ಮುರ್ಮು ಅವರನ್ನು ಬೆಂಬಲಿಸುವುದಾಗಿ ಮಂಗಳವಾರ ಹೇಳಿದ್ದಾರೆ.

Published On - 3:51 pm, Thu, 14 July 22