ಕರ್ನಾಟಕದ ಮಾಜಿ ಕಾರ್ಯದರ್ಶಿ ರತ್ನ ಪ್ರಭಾಗೆ ತಿರುಪತಿ ಲೋಕಸಭಾ ಮೀಸಲು ಟಿಕೆಟ್!

Tirupati Lok Sabha by-election Ratna Prabha: ವೈ ಎಸ್​ಆರ್​ ಕಾಂಗ್ರೆಸ್​ ಪಕ್ಷದಿಂದ ಫಿಸಿಯೋ ಥೆರಪಿಸ್ಟ್​ ಡಾ. ಎಂ ಗುರುಮೂರ್ತಿ ಮತ್ತು ಟಿಡಿಪಿಯಿಂದ ಮಾಜಿ ಕೇಂದ್ರ ಸಚಿವೆ ಪನಬಕ ಲಕ್ಷ್ಮೀ ಕಣದಲ್ಲಿದ್ದಾರೆ. ಸ್ಪರ್ಧೆ ತೀವ್ರವಾಗಿದ್ದು ಏಪ್ರಿಲ್​ 17 ಶನಿವಾರದಂದು ನಡೆಯುವ ಬೈ ಎಲೆಕ್ಷನ್​ನಲ್ಲಿ ತಿರುಪತಿ ತಿಮ್ಮಪ್ಪ ಮೇ 2ರಂದು ಮತ ಎಣಿಕೆ ದಿನ ಯಾರಿಗೆ ವಿಜಯೀಭವ ಅನ್ನುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ.

ಕರ್ನಾಟಕದ ಮಾಜಿ ಕಾರ್ಯದರ್ಶಿ ರತ್ನ ಪ್ರಭಾಗೆ ತಿರುಪತಿ ಲೋಕಸಭಾ ಮೀಸಲು ಟಿಕೆಟ್!
ಐಎಎಸ್ ಪ್ರಭಾವಳಿಯ ಕರ್ನಾಟಕದ ಮಾಜಿ ಕಾರ್ಯದರ್ಶಿ ರತ್ನ ಪ್ರಭಾಗೆ ತಿರುಪತಿ ಲೋಕಸಭಾ ಮೀಸಲು ಟಿಕೆಟ್!
Follow us
ಸಾಧು ಶ್ರೀನಾಥ್​
|

Updated on:Mar 27, 2021 | 1:18 PM

ತಿರುಪತಿ: ದೇಶದಲ್ಲೀಗ ಚುನಾವಣೆಗಳ ಪರ್ವ. ಬಿರುಬೇಸಿಗೆಯ ಮಧ್ಯೆ ಬಿರುಸಿನ ಚುನಾವಣಾ ಕಾವು ಅಲ್ಲಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್​ 17ರಂದು ತಿರುಪತಿ ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್​ ಘೋಷಣೆಯಾಗಿದೆ. ವಿಶೇಷ ಏನಂದ್ರೆ ಈ ಕ್ಷೇತ್ರದಿಂದ ಕರ್ನಾಟಕದ ನಂಟು ಹೊಂದಿರುವ ಕೆ ರತ್ನ ಪ್ರಭಾ ಅವರು ಸ್ಪರ್ಧಿಸುತ್ತಿದ್ದಾರೆ.

37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಕೆ ರತ್ನ ಪ್ರಭಾ ಅವರು ಜೂನ್ 2018ರಲ್ಲಿ ನಿವೃತ್ತಿ ಪಡೆದಿದ್ದರು. ಅದಾದ ಮರುವರ್ಷವೇ ಕಲಬುರ್ಗಿಯಲ್ಲಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರತ್ನ ಪ್ರಭಾ ಅವರ ಸೇವೆಯನ್ನು ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಶಂಸಿಸಿದ್ದರು. ತಮ್ಮ ಸೇವಾವಧಿಯಲ್ಲಿ ಪರಿಶಿಷ್ಠ ಜನಾಂಗದವರಿಗೆ (ಎಸ್​ಸಿ-ಎಸ್​ಟಿ) ಆಸರೆಯಾಗಿದ್ದ ದಲಿತ ಸಮಾಜದ ರತ್ನ ಪ್ರಭಾ ಅವರು ಅಪಾರ ಜನಮನ್ನಣೆ ಗಳಿಸಿದ್ದರು.

ಇದನ್ನೇ ಬಂಡವಾಳ ಮಾಡಿಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದ ರತ್ನ ಪ್ರಭಾ ಅವರು ಅಲ್ಲಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ನೆರೆಯ ಪೌರಾಣಿಕ ಕ್ಷೇತ್ರವಾದ ತಿರುಪತಿಯಿಂದ ಎಸ್​ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಟಿಕೆಟ್​ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ರತ್ನ ಪ್ರಭಾ ಅವರು ‘ಇದು ತಿರುಪತಿ ತಿಮ್ಮಪ್ಪ ದಯಪಾಲಿಸಿರುವ ವರ’ ಎಂದಿದ್ದಾರೆ.

ಮೂಲತಃ ಆಂಧ್ರದ ಪ್ರಕಾಶಂ ಜಿಲ್ಲೆಯ ರತ್ನ ಪ್ರಭಾ ಅವರು ಈ ಹಿಂದೆ ಆಂಧ್ರದಲ್ಲೂ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಕರ್ನಾಟಕ ಕೇಡರ್​ಗೆ ವಾಪಸಾಗಿದ್ದರು. ಇನ್ನು ರತ್ನ ಪ್ರಭಾ ಅವರ ಕುಟುಂಬದಲ್ಲಿ ಐಎಎಸ್ ಪ್ರಭಾವಳಿ ಹೇಗಿದೆಯೆಂದ್ರೆ ರತ್ನ ಪ್ರಭಾ ಅವರಪ್ಪ ಕೆ ಚಂದ್ರಯ್ಯ, ಪತಿ ವಿದ್ಯಾಸಾಗರ್ ಮತ್ತು ಸೋದರ ಪ್ರದೀಪ್​ ಚಂದ್ರ ಮೂವರೂ ಆಂಧ್ರ ಐಎಎಸ್ ಕೇಡರ್​ಗೆ ಸೇರಿದವರಾಗಿದ್ದಾರೆ.

ಈ ಹಿಂದೆ ತಿರುಪತಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೈ ಎಸ್​ಆರ್​ ಕಾಂಗ್ರೆಸ್​ ಪಕ್ಷದ ಬಲ್ಲಿ ದುರ್ಗಾ ಪ್ರಸಾದ್​ ರಾವ್​ ಅವರು ಕೋವಿಡ್​ ಸೋಂಕಿನಿಂದ ಕಳೆದ ಸೆಪ್ಟೆಂಬರ್​​ನಲ್ಲಿ ಅಕಾಲಿಕ ಮೃತ್ಯು ಕಂಡಿದ್ದರು. ಹಾಗಾಗಿ ಇಲ್ಲೀಗ ಉಪಚುನಾವಣೆ ಅನಿವಾರ್ಯವಾಗಿದೆ.

ತಿರುಪತಿ ಲೋಕಸಭಾ ಮೀಸಲು ಕ್ಷೇತ್ರದ ಮಹಿಮೆಯೋ ಎಂಬಂತೆ ಇಲ್ಲಿಂದ ಕಣಕ್ಕೆ ಇಳಿಯಲು ಹತ್ತಾರು ನಿವೃತ್ತ ಉನ್ನತಾಧಿಕಾರಿಗಳು ಭಾರಿ ಪೈಪೋಟಿ ನಡೆಸಿದ್ದರು. ಆದರೆ ಸ್ಥಳೀಯವಾಗಿ ಭಾರಿ ಪ್ರಭಾವ ಹೊಂದಿರುವ ನಟ ಪವನ್​ ಕಲ್ಯಾಣ್​ ಜೊತೆ ಕೈಜೋಡಿಸಿದ ಬಿಜೆಪಿ, ಜನ ಸೇನಾ ಮೈತ್ರಿಯೊಂದಿಗೆ ಸ್ಪರ್ಧೆಗೆ ಇಳಿದಿದೆ. ಈ ಮಧ್ಯೆ, ಇತರೆ ಪಕ್ಷಗಳು ಸಹ ಅಧಿಕಾರಿಗಳನ್ನೇ ಕಣಕ್ಕೆ ಇಳಿಸಿರುವುದು ಸೋಜಿಗವಾಗಿಯೇ ಇದೆ. ವೈ ಎಸ್​ಆರ್​ ಕಾಂಗ್ರೆಸ್​ ಪಕ್ಷದಿಂದ ಫಿಸಿಯೋ ಥೆರಪಿಸ್ಟ್​ ಡಾ. ಎಂ ಗುರುಮೂರ್ತಿ ಮತ್ತು ಟಿಡಿಪಿಯಿಂದ ಮಾಜಿ ಕೇಂದ್ರ ಸಚಿವೆ ಪನಬಕ ಲಕ್ಷ್ಮೀ ಕಣದಲ್ಲಿದ್ದಾರೆ. ಸ್ಪರ್ಧೆ ತೀವ್ರವಾಗಿದ್ದು ಏಪ್ರಿಲ್​ 17 ಶನಿವಾರದಂದು ನಡೆಯುವ ಬೈ ಎಲೆಕ್ಷನ್​ನಲ್ಲಿ ತಿರುಪತಿ ತಿಮ್ಮಪ್ಪ ಮೇ 2ರಂದು ಮತ ಎಣಿಕೆ ದಿನ ಯಾರಿಗೆ ವಿಜಯೀಭವ ಅನ್ನುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ.

Published On - 11:50 am, Fri, 26 March 21

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ