ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ (Salman Khurshid) ಕೆಲವು ದಿನಗಳ ಹಿಂದೆ ಅಯೋಧ್ಯೆ ತೀರ್ಪು ಕುರಿತು ಪುಸ್ತಕವೊಂದನ್ನು ಹೊರತಂದಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ‘ಸನ್‌ರೈಸ್ ಓವರ್ ಅಯೋಧ್ಯೆ’ ಪುಸ್ತಕದ (Sunrise Over Ayodhya Book) ಬಗ್ಗೆ ಹಲವರು ದಂಗೆದ್ದಿದ್ದಾರೆ. ಈ ಪರ-ವಿರೋಧದ ಹೇಳಿಕೆಗಳ ನಡುವೆ ನೈನಿತಾಲ್‌ನಲ್ಲಿರುವ ಸಲ್ಮಾನ್ ಖುರ್ಷಿದ್ ಅವರ ಮನೆಗೆ ಇಂದು ಕಲ್ಲು ಹೊಡೆದು, ಬೆಂಕಿ ಹಚ್ಚಿದ್ದಾರೆ. ತಮ್ಮ ಪುಸ್ತಕದಲ್ಲಿ ಹಿಂದುತ್ವದ ಕುರಿತು ಪ್ರಸ್ತಾವನೆ ಮಾಡಿದ್ದರಿಂದ ಸಲ್ಮಾನ್ ಖುರ್ಷಿದ್ ಭಾರೀ ವಿರೋಧ ಎದುರಿಸಿದ್ದರು.
ಅಯೋಧ್ಯೆ ತೀರ್ಪು ಹೊರಬೀಳಲು 100 ವರ್ಷಗಳು ಬೇಕಾಗುತ್ತದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದರೆ ಅಯೋಧ್ಯೆ ತೀರ್ಪು ಹೊರಬಿದ್ದ ನಂತರ ಜನರು ತೀರ್ಪಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆಯೇ ಅದರ ಬಗ್ಗೆ ನಾನಾ ರೀತಿಯಲ್ಲಿ ಮಾತಾಡಿಕೊಂಡರು. ಆ ಸಮಯದಲ್ಲಿ ತೀರ್ಪಿನ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯತೆ ಇತ್ತು. ಮೊದಲು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದೆ. ಈಗಾಗಲೇ ದೇಶದಲ್ಲಿ ಉದ್ಭವವಾಗಿರುವ ಧಾರ್ಮಿಕ ಸಂಧಿಗ್ಧತೆ ವಾತಾವರಣ ಇರುವುದರಿಂದ ಅದಕ್ಕೆ ಮುಲಾಮು ಹಚ್ಚಲು ಅಯೋಧ್ಯೆ ಕುರಿತು ಪುಸ್ತಕ ಬರೆದೆ ಎಂದು ಅವರು ಹೇಳಿದ್ದರು.
Uttarakhand: Some people vandalized residence of former Union Minister & Congress leader Salman Khurshid in Nainital today
“Rakesh Kapil & 20 others have been booked. Strict action will be taken against perpetrators,” says DGI (Kumaun) Neelesh Anand
(Pics: Khurshid’s FB page) pic.twitter.com/1gpQrioBxM
— ANI (@ANI) November 15, 2021
ಈ ಘಟನೆಯ ಬಗ್ಗೆ ಸಲ್ಮಾನ್ ಖುರ್ಷಿದ್ ಅವರೇ ಟ್ವಿಟ್ಟರ್ನಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಬರೆದಿರುವ ಪುಸ್ತಕದಲ್ಲಿ ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೊಕೊ ಹರಾಮ್‌ನೊಂದಿಗೆ ಹೋಲಿಸಲಾಗಿದೆ. ಹೀಗಾಗಿ, ಅವರ ಪುಸ್ತಕವನ್ನು ಪ್ರಕಟಿಸಿದಾಗಿನಿಂದ ವಿರೋಧ ಹೆಚ್ಚಾಗಿದೆ.
— Salman Khurshid (@salman7khurshid) November 15, 2021
ಈಗಾಗಲೇ ಹಿಂದುತ್ವದ ಕುರಿತು ಹೇಳಿಕೆ ನೀಡಿರುವ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಪ್ರಕಟಣೆ ಮತ್ತು ಮಾರಾಟವನ್ನು ನಿಲ್ಲಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಹಿಂದೂ ಪರರು ಅರ್ಜಿ ಸಲ್ಲಿಸಿದ್ದಾರೆ. ಪುಸ್ತಕದ 113ನೇ ಪುಟದಲ್ಲಿ ‘ದಿ ಕೇಸರಿ ಆಕಾಶ’ ಎಂಬ ಅಧ್ಯಾಯದಲ್ಲಿ ಹಿಂದೂ ಧರ್ಮವು ಹಿಂಸಾತ್ಮಕ, ಅಮಾನವೀಯ ಮತ್ತು ದಬ್ಬಾಳಿಕೆಯ ಧರ್ಮ ಎನ್ನಲಾಗಿದೆ. ತಮ್ಮ ಹೊಸ ಪುಸ್ತಕದಲ್ಲಿ ಹಿಂದುತ್ವ ಮತ್ತು ಐಸಿಸ್ ನಡುವೆ ಹೋಲಿಕೆ ಮಾಡಿದ್ದಕ್ಕೆ ಭಾರೀ ಆಕ್ರೋಶದ ನಡುವೆಯೇ ನೈನಿತಾಲ್‌ನಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಮನೆಯ ಮೇಲೆ ಇಂದು ಬೆಂಕಿ ಹಚ್ಚಿ, ಧ್ವಂಸಗೊಳಿಸಲಾಗಿದೆ.
ಇದನ್ನೂ ಓದಿ: ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ವಿವಾದಾತ್ಮಕ ಅಂಶ; ಪುಸ್ತಕ ನಿಷೇಧಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ