AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರಿಗದು ಉತ್ಪ್ರೇಕ್ಷೆ ಆಗಿರಬಹುದು, ನನಗಲ್ಲ: ಹಿಂದುತ್ವದ ಬಗ್ಗೆ ಗುಲಾಂ ನಬಿ ಆಜಾದ್‌ರ ಹೇಳಿಕೆಗೆ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯೆ

Salman Khurshid ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್  ಅಯೋಧ್ಯೆ ಬಗ್ಗೆ ಬರೆದ ಪುಸ್ತಕದಲ್ಲಿ "ಹಿಂದುತ್ವ"ವನ್ನು ಮೂಲಭೂತ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಸಿದ್ದಕ್ಕೆ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಗುಡುಗಿದ್ದಾರೆ.

ಅವರಿಗದು ಉತ್ಪ್ರೇಕ್ಷೆ ಆಗಿರಬಹುದು, ನನಗಲ್ಲ: ಹಿಂದುತ್ವದ ಬಗ್ಗೆ ಗುಲಾಂ ನಬಿ ಆಜಾದ್‌ರ ಹೇಳಿಕೆಗೆ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯೆ
ಸಲ್ಮಾನ್ ಖುರ್ಷಿದ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 12, 2021 | 1:49 PM

Share

ದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ಅವರು ತಾವು ಹೇಳಿರುವ ‘ಹಿಂದುತ್ವ’ದ  ವಿಚಾರದ ನಿಲುವಿಗೆ ಬದ್ಧರಾಗಿ ನಿಂತಿದ್ದಾರೆ. ಖುರ್ಷಿದ್ ಅವರ ಹೊಸ ಪುಸ್ತಕ ಸನ್ ರೈಸ್ ಓವರ್ ಅಯೋಧ್ಯಾ: ನೇಷನ್ ಹುಡ್ ಇನ್ ಅವರ್ ಟೈಮ್ಸ್ ( Sunrise Over Ayodhya: Nationhood in Our Times) ಹೊಸ ವಿವಾದವನ್ನು ಹುಟ್ಟುಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಖುರ್ಷಿದ್  ಹೊಸ ಪುಸ್ತಕದಲ್ಲಿ ಅವರ ಹೇಳಿಕೆ ಹಿಂದುತ್ವದ ಬಗ್ಗೆ ಮತ್ತು ಹಿಂದೂ ಧರ್ಮದ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಯೋಧ್ಯೆಯ ಕುರಿತಾದ ತಮ್ಮ ಹೊಸ ಪುಸ್ತಕದಲ್ಲಿ ಖುರ್ಷಿದ್ ಬರೆದಿರುವುದನ್ನು ಒಪ್ಪುವುದಿಲ್ಲ. ಹಿಂದುತ್ವವನ್ನು(Hindutva)  ಐಎಸ್ಐಎಸ್ (ISIS) ಮತ್ತು ಬೊಕೊ ಹರಾಮ್‌ನೊಂದಿಗೆ (Boko Haram) ಹೋಲಿಸುವುದು ಉತ್ಪ್ರೇಕ್ಷೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖುರ್ಷಿದ್, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದು ಅವರಿಗೆ ಉತ್ಪ್ರೇಕ್ಷೆ ಎನಿಸಬಹುದು, ನನಗೆ ಉತ್ಪ್ರೇಕ್ಷೆ ಎನಿಸುವುದಿಲ್ಲ ಎಂದಿದ್ದಾರೆ. ಖುರ್ಷಿದ್ ಅವರ ಹಿಂದುತ್ವದ ನಿಲುವನ್ನು ನಾನು ಒಪ್ಪುವುದಿಲ್ಲ. ಹಿಂದುತ್ವವನ್ನು ಐಎಸ್ಐಎಸ್ ಮತ್ತು ಜಿಹಾದಿಸ್ಟ್ ಇಸ್ಲಾಂನೊಂದಿಗೆ ಹೋಲಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಉತ್ಪ್ರೇಕ್ಷೆ ಎಂದು ಭಾವಿಸುತ್ತೇನೆ ಗುಲಾಂ ನಬಿ ಆಜಾದ್ ಹೇಳಿದ್ದರು.

“ನಾನು ಅವರನ್ನು (ಆಜಾದ್) ವಾದದಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಅವರು ಅದನ್ನು ಯಾವುದೇ ಗಂಭೀರವಾದ ಚಿಂತನೆಯಿಲ್ಲದ ಸಾಂದರ್ಭಿಕ ಕ್ಷಣದಲ್ಲಿ ಹೇಳಿರಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಅವರ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ಅವರು ಹಿರಿಯ ವ್ಯಕ್ತಿ, ಆದರೆ ಇದು ನನ್ನ ಮನಸ್ಸನ್ನು ಬದಲಾಯಿಸುವುದಿಲ್ಲ ಎಂದು ಖುರ್ಷಿದ್ ಹೇಳಿದ್ದಾರೆ.

ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಂಡ ಖುರ್ಷಿದ್ ಅವರು ಧರ್ಮವನ್ನು ವಿರೂಪಗೊಳಿಸುವುದರ ಬಗ್ಗೆ ತಮ್ಮ ಹೋಲಿಕೆಯನ್ನು ವಿವರಿಸಿದರು. “ನಾನು ಈ ಹುಡುಗರನ್ನು ಭಯೋತ್ಪಾದಕರು ಎಂದು ಕರೆದಿಲ್ಲ, ಅವರು ಧರ್ಮವನ್ನು ವಿರೂಪಗೊಳಿಸುವುದರಲ್ಲಿ ಸಮಾನರು ಎಂದು  ಹೇಳಿದ್ದೇನೆ. ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಂಡ ಖುರ್ಷಿದ್ ಅವರು ಧರ್ಮವನ್ನು ವಿರೂಪಗೊಳಿಸುವುದರ ಬಗ್ಗೆ ತಮ್ಮ ಹೋಲಿಕೆಯನ್ನು ವಿವರಿಸಿದರು. “ನಾನು ಈ ಹುಡುಗರನ್ನು ಭಯೋತ್ಪಾದಕರು ಎಂದು ಕರೆದಿಲ್ಲ, ಅವರು ಧರ್ಮವನ್ನು ವಿರೂಪಗೊಳಿಸುವುದರಲ್ಲಿ ಸಮಾನರು ಎಂದು ನಾನು ಹೇಳಿದ್ದೇನೆ. ಹಿಂದುತ್ವ ಏನು ಮಾಡಿದೆ, ಅದು ಸನಾತನ ಧರ್ಮ ಮತ್ತು ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ .ಅದು ಬೊಕೊ ಹರಾಮ್ ಮತ್ತು ಆ ರೀತಿಯ ಇತರ ಸಂಘಟನೆಗಳಂತೆ ದೃಢವಾದ, ಆಕ್ರಮಣಕಾರಿ ಸ್ಥಾನವನ್ನು ಪಡೆದುಕೊಂಡಿದೆ ಎಂದು ಖುರ್ಷಿದ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

“ಹಿಂದುತ್ವಕ್ಕೆ ಹೋಲುವ ಬೇರೆ ಯಾರನ್ನೂ ನಾನು ಹುಡುಕಲು ಸಾಧ್ಯವಾಗಲಿಲ್ಲ. ಅವರು ಅವುಗಳನ್ನು ಹೋಲುತ್ತಾರೆ ಎಂದು ನಾನು ಹೇಳಿದೆ, ಅಷ್ಟೆ, ಹಿಂದೂ ಧರ್ಮಕ್ಕೂ ಏನೂ ಸಂಬಂಧವಿಲ್ಲ. ಹಿಂದುತ್ವವು ಅದರ ಪ್ರತಿಪಾದಕರು ಚಿತ್ರಿಸಿರುವಂತೆ ಧರ್ಮವನ್ನು ವಿರೂಪಗೊಳಿಸುತ್ತಿದೆ” ಎಂದು ಅವರು ಹೇಳಿದರು.

ಹೊಸದಾಗಿ ಬಿಡುಗಡೆಯಾದ ಪುಸ್ತಕದಲ್ಲಿ ‘The Saffron Sky’ ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ ಖುರ್ಷಿದ್ ಈ ರೀತಿ ಬರೆದಿದ್ದಾರೆ. “ಸನಾತನ ಧರ್ಮ ಮತ್ತು ಋಷಿಗಳು ಮತ್ತು ಸಂತರಿಗೆ ತಿಳಿದಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ದೃಢವಾದ ಆವೃತ್ತಿಯಿಂದ ಪಕ್ಕಕ್ಕೆ ತಳ್ಳಲಾಯಿತು. ಎಲ್ಲಾ ರಾಜಕೀಯ ಆವೃತ್ತಿಗಳಂತೆಯೇ ಇದು ಜಿಹಾದಿ ಇಸ್ಲಾಂ ಸಂಘಟನೆಗಳಾದ ಐಎಸ್ಐಎಸ್ ಮತ್ತು ಬೊಕೊ ಹರಾಮ್‌ನಂತೆ ಇದೆ  ಎಂದಿದ್ದಾರೆ.

ಖುರ್ಷಿದ್ ಹೇಳಿಕೆ ವಿರುದ್ಧ ಇಬ್ಬರು ವಕೀಲರು ದೂರು ಸಲ್ಲಿಸಿದ್ದು, ಬಿಜೆಪಿ ನಾಯಕರು ಖುರ್ಷಿದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಖುರ್ಷಿದ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತಮ್ಮ ‘ಗೋತ್ರ’ (ಕುಲ) ಬಹಿರಂಗಪಡಿಸಲು ಮತ್ತು ತಾವು ಹಿಂದೂಗಳು ಎಂದು ಪ್ರತಿಪಾದಿಸಲು ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಸಚಿವರು ಹೇಳಿದರು.

ಗುಲಾಂ ನಬಿ ಆಜಾದ್ ಜಿ-23 ನಾಯಕ (23 ಬಂಡಾಯ ಕಾಂಗ್ರೆಸ್ ನಾಯಕರ ಗುಂಪು) ಮತ್ತು ಸಲ್ಮಾನ್ ಖುರ್ಷಿದ್ ಗಾಂಧಿಗಳಿಗೆ ಹತ್ತಿರವಾಗಿರುವುದರಿಂದ, ಖುರ್ಷಿದ್ ಗಾಂಧಿಗಳನ್ನು ಪ್ರತಿಧ್ವನಿಸುತ್ತಿದ್ದಾರೆ ಎಂದು ಭಾವಿಸುವುದು ನ್ಯಾಯೋಚಿತವಾಗಿದೆ ಎಂದು ಬಿಜೆಪಿಯ ಅಮಿತ್ ಮಾಳವಿಯಾ ಹೇಳಿದ್ದಾರೆ.

ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ನಿಷೇಧಿಸುತ್ತೇವೆ: ಮಧ್ಯಪ್ರದೇಶ ಸಚಿವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್  ಅಯೋಧ್ಯೆ ಬಗ್ಗೆ ಬರೆದ ಪುಸ್ತಕದಲ್ಲಿ “ಹಿಂದುತ್ವ”ವನ್ನು ಮೂಲಭೂತ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಸಿದ್ದಕ್ಕೆ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಗುಡುಗಿದ್ದಾರೆ. ಮಿಶ್ರಾ ಅವರು ಖುರ್ಷಿದ್ ಅವರ ಹೊಸ ಪುಸ್ತಕವನ್ನು “ಖಂಡನೀಯ” ಎಂದು ಕರೆದಿದ್ದು “ಹಿಂದೂಗಳನ್ನು ವಿಭಜಿಸಲು ಅಥವಾ ನಮ್ಮ ದೇಶವನ್ನು ವಿಭಜಿಸಲಿರುವ ಅವಕಾಶವನ್ನು ಖುರ್ಷಿದ್ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

“ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ಖಂಡನೀಯ. ಹಿಂದೂಗಳನ್ನು ಜಾತಿಗಳಾಗಿ ವಿಭಜಿಸಲು ಅಥವಾ ನಮ್ಮ ಜಿಲ್ಲೆಯನ್ನು ವಿಭಜಿಸಲಿರುವ ಅವಕಾಶವನ್ನು ಅವರು ಬಿಡುವುದಿಲ್ಲ. ಭಾರತ್ ತೇರೇ ಟುಕ್ಡೇ ಟುಕ್ಡೇ ಹೋಂಗೇ ಎಂದು ಹೇಳಿದವರ ಬಳಿಗೆ ರಾಹುಲ್ ಗಾಂಧಿ ಮೊದಲು ಹೋದರಲ್ಲವೇ? ಸಲ್ಮಾನ್ ಖುರ್ಷಿದ್ ಅದೇ ಕಾರ್ಯಸೂಚಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಮಿಶ್ರಾ ಹೇಳಿದ್ದಾರೆ.

“(ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ) ಕಮಲ್ ನಾಥ್ ಅವರು ಏನು ಹೇಳಿದರು – ‘ಇದು ‘ಮಹಾನ್ ಭಾರತವಲ್ಲ ಬದ್ನಾಮ್ ಭಾರತ್ (ಮಹಾನ್ ದೇಶವಲ್ಲ ಆದರೆ ಕುಖ್ಯಾತವಾಗಿದೆ)’. ಇದು ಅದೇ ಚಿಂತನೆಯ ಪ್ರಕ್ರಿಯೆಯ ಒಂದು ಭಾಗವಾಗಿದೆ. ಅವರು ಹಿಂದೂಗಳು ವಿಭಜನೆ ಆಗಬೇಕೆಂದು ಬಯಸುತ್ತಾರೆ. ಇದು ನಮ್ಮ ನಂಬಿಕೆಯ ಮೇಲೆ ದಾಳಿ ಮಾಡುವ ವಿಧಾನವಾಗಿದೆ, ಸುಪ್ರೀಂಕೋರ್ಟ್ ‘ಹಿಂದುತ್ವ’ ಒಂದು ಜೀವನ ವಿಧಾನ ಎಂದು ಹೇಳಿದೆ. ಹಾಗಾದರೆ ಪ್ರಶ್ನಿಸಲು ಏನಿದೆ?” ಎಂದು ಮಿಶ್ರಾ ಕೇಳಿದ್ದಾರೆ.

ಮುಂದಿನ ವರ್ಷ ರಾಜಕೀಯವಾಗಿ ಪ್ರಮುಖವಾದ ಉತ್ತರ ಪ್ರದೇಶ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ಸೇರಿದಂತೆ ಏಳು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಮುಸ್ಲಿಂ ಮತಗಳನ್ನು ಪಡೆಯಲು “ಕೋಮು ರಾಜಕೀಯ” ಆಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಂಗ್ರೆಸ್ ವಿರುದ್ಧ ದಾಳಿ ಮಾಡಿದೆ.ಮಿಶ್ರಾ ಅವರು ಪುಸ್ತಕವನ್ನು “ಆಕ್ಷೇಪಾರ್ಹ” ಎಂದು ಹೇಳಿದ್ದು “ನಾನು ಮಧ್ಯಪ್ರದೇಶದ ಕಾನೂನು ತಜ್ಞರನ್ನು ಸಂಪರ್ಕಿಸಿ ಮತ್ತು ರಾಜ್ಯದಲ್ಲಿ ಈ ಪುಸ್ತಕವನ್ನು ನಿಷೇಧಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: 1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!