ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ವಿವಾದಾತ್ಮಕ ಅಂಶ; ಪುಸ್ತಕ ನಿಷೇಧಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಅಯೋಧ್ಯಾ ಕುರಿತ ಕೃತಿ ನಿಷೇಧ ಮಾಡಬೇಕು. ಅಲ್ಲದೇ ಸಲ್ಮಾನ್ ಖುರ್ಷಿದ್ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ವಿವಾದಾತ್ಮಕ ಅಂಶ; ಪುಸ್ತಕ ನಿಷೇಧಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Follow us
TV9 Web
| Updated By: preethi shettigar

Updated on: Nov 15, 2021 | 3:13 PM

ಧಾರವಾಡ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಪುಸ್ತಕ ಬಿಡುಗಡೆ ಹಿನ್ನೆಲೆ ವಿವಾದಿತ ಪುಸ್ತಕ ನಿಷೇಧಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಅಯೋಧ್ಯಾ ಕುರಿತ ಕೃತಿ ನಿಷೇಧ ಮಾಡಬೇಕು. ಅಲ್ಲದೇ ಸಲ್ಮಾನ್ ಖುರ್ಷಿದ್(Salman Khurshid) ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಇಂದು (ನವೆಂಬರ್ 15) ಜಿಲ್ಲಾಧಿಕಾರಿ ಮೂಲಕ ಅಯೋಧ್ಯಾ ಕುರಿತ ಕೃತಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ರವಾನೆ ಮಾಡಿದ್ದಾರೆ.

ವಿವಾದ ಸೃಷ್ಟಿಸಿದ ಪುಸ್ತಕ ಹಿಂದುತ್ವಕ್ಕೆ ಅವಮಾನ ಮಾಡಿದ ಆರೋಪದಡಿ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ವಿರುದ್ಧ ದೆಹಲಿ  ಪೊಲೀಸರಿಗೆ ದೂರು ನೀಡಲಾಗಿದೆ. ಸಲ್ಮಾನ್​ ಖುರ್ಷಿದ್​ ಬರೆದಿರುವ ಸನ್​ರೈಸ್​ ಓವರ್​ ಅಯೋಧ್ಯಾ ಎಂಬ ಪುಸ್ತಕ ನವೆಂಬರ್​ 10 ರಂದು ಬಿಡುಗಡೆಯಾಗಿದೆ. ಅದರಲ್ಲಿ ಖುರ್ಷಿದ್​ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಸಿಲಾಗಿದೆ ಎಂದು ದೆಹಲಿ ಮೂಲದ ವಕೀಲ ವಿವೇಕ್​ ಜಾರ್ಜ್​ ದೂರು ನೀಡಿದ್ದಾರೆ. ಹಿಂದುತ್ವವನ್ನು ತುಂಬ ಕೀಳಾಗಿ ನೋಡಿದ್ದಾರೆ ಎಂದು ಆರೋಪಿಸಿರುವ ವಿವೇಕ್​ ಜಾರ್ಜ್, ನೇರವಾಗಿ ದೆಹಲಿ ಪೊಲೀಸ್​ ಆಯುಕ್ತರಿಗೇ ದೂರು ನೀಡಿ, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಸನ್​ರೈಸ್​ ಓವರ್​ ಅಯೋಧ್ಯಾ ಪುಸ್ತಕದ ಸ್ಯಾಫ್ರನ್​ ಸ್ಕೈ ಎಂಬ ಅಧ್ಯಾಯದಲ್ಲಿ, ಪೇಜ್​ ನಂಬರ್​ 113ರಲ್ಲಿ ಖುರ್ಷಿದ್​ ಹಿಂದುತ್ವದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೊ ಹರಾಮ್​ಗೆ ಹೋಲಿಸಿದ್ದಾರೆ. ಹಿಂದಿನ ಋಷಿ-ಮುನಿಗಳು ಹೇಳಿದ್ದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂವಾದವನ್ನು ಈಗ ಪಕ್ಕಕ್ಕೆ ತಳ್ಳಲಾಗಿದೆ. ಹಿಂದುತ್ವದ ಪುರಾತನ ಕಲ್ಪನೆ ಈಗ ಉಳಿದಿಲ್ಲ. ಈಗೇನಿದ್ದರೂ ರಾಜಕೀಯ ದೃಷ್ಟಿಯಿಂದಲೇ ನೋಡಲಾಗುತ್ತಿದ್ದು, ಹಿಂದುತ್ವವೆಂಬುದು ಇಸ್ಲಾಂನ ಜಿಹಾದಿ ಗುಂಪುಗಳಾದ ಐಸಿಸ್​​ ಮತ್ತು ಬೋಕೋ ಹರಾಮ್​ಗೆ ಸಮಾನವಾಗಿದೆ ಎಂದು ಬರೆದಿದ್ದಾರೆ.   ಸಲ್ಮಾನ್​ ಖುರ್ಷಿದ್​ ವಿರುದ್ಧ ದೆಹಲಿ ಠಾಣೆಯಲ್ಲಿ ಕ್ರಿಮಿನಲ್​ ದೂರು ದಾಖಲಾಗಿದೆ.

ಇದನ್ನೂ ಓದಿ: ಹಿಂದುತ್ವವನ್ನು ಐಸಿಸ್​​ಗೆ ಹೋಲಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್​ ಖುರ್ಷಿದ್​; ವಿವಾದ ಸೃಷ್ಟಿಸಿದ ಪುಸ್ತಕ

ಅವರಿಗದು ಉತ್ಪ್ರೇಕ್ಷೆ ಆಗಿರಬಹುದು, ನನಗಲ್ಲ: ಹಿಂದುತ್ವದ ಬಗ್ಗೆ ಗುಲಾಂ ನಬಿ ಆಜಾದ್‌ರ ಹೇಳಿಕೆಗೆ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯೆ