ಹಿಂದುತ್ವವನ್ನು ಐಸಿಸ್​​ಗೆ ಹೋಲಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್​ ಖುರ್ಷಿದ್​; ವಿವಾದ ಸೃಷ್ಟಿಸಿದ ಪುಸ್ತಕ

ಹಿಂದುತ್ವವನ್ನು ಐಸಿಸ್​​ಗೆ ಹೋಲಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್​ ಖುರ್ಷಿದ್​; ವಿವಾದ ಸೃಷ್ಟಿಸಿದ ಪುಸ್ತಕ
ಸಲ್ಮಾನ್​ ಖುರ್ಷಿದ್​

ಸನ್​ರೈಸ್​ ಓವರ್​ ಅಯೋಧ್ಯಾ ಪುಸ್ತಕದ ಸ್ಯಾಫ್ರನ್​ ಸ್ಕೈ ಎಂಬ ಅಧ್ಯಾಯದಲ್ಲಿ, ಪೇಜ್​ ನಂಬರ್​ 113ರಲ್ಲಿ ಖುರ್ಷಿದ್​ ಹಿಂದುತ್ವದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೊ ಹರಾಮ್​ಗೆ ಹೋಲಿಸಿದ್ದಾರೆ.

TV9kannada Web Team

| Edited By: Lakshmi Hegde

Nov 11, 2021 | 12:10 PM

ಹಿಂದುತ್ವಕ್ಕೆ ಅವಮಾನ ಮಾಡಿದ ಆರೋಪದಡಿ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ವಿರುದ್ಧ ದೆಹಲಿ  ಪೊಲೀಸರಿಗೆ ದೂರು ನೀಡಲಾಗಿದೆ. ಸಲ್ಮಾನ್​ ಖುರ್ಷಿದ್​ ಬರೆದಿರುವ ಸನ್​ರೈಸ್​ ಓವರ್​ ಅಯೋಧ್ಯಾ ಎಂಬ ಪುಸ್ತಕ ಬುಧವಾರ ಬಿಡುಗಡೆಯಾಗಿದೆ. ಅದರಲ್ಲಿ ಖುರ್ಷಿದ್​ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಸಿಲಾಗಿದೆ ಎಂದು ದೆಹಲಿ ಮೂಲದ ವಕೀಲ ವಿವೇಕ್​ ಜಾರ್ಜ್​ ದೂರು ನೀಡಿದ್ದಾರೆ. ಹಿಂದುತ್ವವನ್ನು ತುಂಬ ಕೀಳಾಗಿ ನೋಡಿದ್ದಾರೆ ಎಂದು ಆರೋಪಿಸಿರುವ ವಿವೇಕ್​ ಜಾರ್ಜ್​, ನೇರವಾಗಿ ದೆಹಲಿ ಪೊಲೀಸ್​ ಆಯುಕ್ತರಿಗೇ ದೂರು ನೀಡಿ, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. 

ಸನ್​ರೈಸ್​ ಓವರ್​ ಅಯೋಧ್ಯಾ ಪುಸ್ತಕದ ಸ್ಯಾಫ್ರನ್​ ಸ್ಕೈ ಎಂಬ ಅಧ್ಯಾಯದಲ್ಲಿ, ಪೇಜ್​ ನಂಬರ್​ 113ರಲ್ಲಿ ಖುರ್ಷಿದ್​ ಹಿಂದುತ್ವದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೊ ಹರಾಮ್​ಗೆ ಹೋಲಿಸಿದ್ದಾರೆ. ಹಿಂದಿನ ಋಷಿ-ಮುನಿಗಳು ಹೇಳಿದ್ದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂವಾದವನ್ನು ಈಗ ಪಕ್ಕಕ್ಕೆ ತಳ್ಳಲಾಗಿದೆ. ಹಿಂದುತ್ವದ ಪುರಾತನ ಕಲ್ಪನೆ ಈಗ ಉಳಿದಿಲ್ಲ. ಈಗೇನಿದ್ದರೂ ರಾಜಕೀಯ ದೃಷ್ಟಿಯಿಂದಲೇ ನೋಡಲಾಗುತ್ತಿದ್ದು, ಹಿಂದುತ್ವವೆಂಬುದು ಇಸ್ಲಾಂನ ಜಿಹಾದಿ ಗುಂಪುಗಳಾದ ಐಸಿಸ್​​ ಮತ್ತು ಬೋಕೋ ಹರಾಮ್​ಗೆ ಸಮಾನವಾಗಿದೆ ಎಂದು ಬರೆದಿದ್ದಾರೆ.   ಸಲ್ಮಾನ್​ ಖುರ್ಷಿದ್​ ವಿರುದ್ಧ ದೆಹಲಿ ಠಾಣೆಯಲ್ಲಿ ಕ್ರಿಮಿನಲ್​ ದೂರು ದಾಖಲಾಗಿದೆ.

ಬಿಜೆಪಿ ಖಂಡನೆ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಈ ಸಾಲುಗಳು ವಿವಾದ ಸೃಷ್ಟಿಸಿವೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಟ್ವೀಟ್​ ಮಾಡಿದ್ದು, ಕಾಂಗ್ರೆಸ್​ ನೈಜ ಮನಸ್ಥಿತಿಗೆ ಈ ಸಾಲುಗಳು ಸಾಕ್ಷಿ. ಐಸಿಸ್​ ಸಿದ್ಧಾಂತವನ್ನು ಹಿಂದುತ್ವದೊಂದಿಗೆ ಹೋಲಿಸುವ ಮೂಲಕ ಅದನ್ನೂ ಕಾನೂನು ಬದ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಬಿಜೆಪಿಯ ಹಿರಿಯ ನಾಯಕ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪುಸ್ತಕದ 113ನೇ ಪುಟವನ್ನು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ; ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ- ಸಿಎಂ ಬೊಮ್ಮಯಿ

Follow us on

Related Stories

Most Read Stories

Click on your DTH Provider to Add TV9 Kannada