ಪ್ರಧಾನಿ ಮೋದಿ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ; ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ- ಸಿಎಂ ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ; ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ- ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ. ಇದೇ ವೇಳೆ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

TV9kannada Web Team

| Edited By: sadhu srinath

Nov 11, 2021 | 12:57 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ. ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು 100 ದಿನದಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ. ಇದೇ ವೇಳೆ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ. 4 ಕಾರ್ಯಕ್ರಮಗಳಿಗೆ ಬರಲು ಆಹ್ವಾನಿಸಿದೆ. 2 ಕಾರ್ಯಕ್ರಮ ಮಾಡಿ ಬರುತ್ತೇನೆ. ಡಿಸೆಂಬರ್‌ನಲ್ಲಿ 2 ದಿನಾಂಕ ಕೊಟ್ರೆ ಬರುವುದಾಗಿ ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಟ್​ಕಾಯಿನ್​ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದ ಪ್ರಧಾನಿ ಮೋದಿ: ಇನ್ನು ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಬಿಟ್​ಕಾಯಿನ್​ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚೆಯಾಗಿಲ್ಲ, ನಾನೇ ಪ್ರಸ್ತಾಪಿಸಲು ಯತ್ನಿಸಿದಾಗ ಮೋದಿಯವರು ತಡೆದರು, ಬಿಟ್ ಕಾಯಿನ್ ಬಗ್ಗೆ ನನಗಿಂತ ಹೆಚ್ಚಿನ ಮಾಹಿತಿ ಅವರಿಗಿದೆ. ಇದೆಲ್ಲವೂ ಸಹಜ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

ಬೈಎಲೆಕ್ಷನ್‌ನಲ್ಲಿ ಒಂದರಲ್ಲಿ ಸೋಲು, ಒಂದರಲ್ಲಿ ಗೆಲುವು ಎಂದು ಪ್ರಧಾನಿಯವರ ಬಳಿ ಹೇಳಿದೆ. ಅದಕ್ಕೆ ಅವರು ಸೋಲು ಗೆಲುವು ಸಹಜ ಎಂದರು. ನಿಷ್ಠೆಯಿಂದ ಜನರ ಪರ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ ಎಂದರು.

100 ದಿನದಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಶ್ಲಾಘಿಸಿದ್ದಾರೆ. ರೈತರ ಮಕ್ಕಳಿಗೆ ಕೈಗೊಂಡ ಯೋಜನೆ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಟೆಂಡರ್‌ನಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆಯಿ್ಟ್ಟಿರುವ ಬಗ್ಗೆ ಶ್ಲಾಘಿಸಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಬಗ್ಗೆ ಮಾಹಿತಿ ನೀಡಿರುವೆ. ಅಮೃತ ಯೋಜನೆಗಳ ಬಗ್ಗೆಯೂ ವಿವರಣೆ ಕೊಟ್ಟಿದ್ದೇನೆ. ಅದರಲ್ಲಿ ಇನ್ನಷ್ಟು ಸುಧಾರಣೆ ಬಗ್ಗೆ ಅವರು ಸಲಹೆ ಹೇಳಿದ್ದಾರೆ. ಸ್ತ್ರೀ ಶಕ್ತಿ ಸಂಘಗಳಿಗೆ ಶಕ್ತಿ ತುಂಬುವ ಬಗ್ಗೆ ಚರ್ಚಿಸಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಯುವಜನತೆಯನ್ನು ಇದರಲ್ಲಿ ಹೆಚ್ಚಾಗಿ ಸೇರಿಸಿ ಎಂದಿದ್ದಾರೆ. ಒಳ್ಳೆ ಕೆಲಸವನ್ನು ಧೈರ್ಯವಾಗಿ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಸಿ ಎಂ ಬೊಮ್ಮಾಯಿ ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

(karnataka cm basavaraj bommai meets pm narendra modi in delhi and invites him to bangalore)

Follow us on

Related Stories

Most Read Stories

Click on your DTH Provider to Add TV9 Kannada