ನವದೆಹಲಿ: ಹಿರಿಯ ವಕೀಲ ಮತ್ತು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (Shanti Bhushan) ಅವರು ಇಂದು(ಜನವರಿ 31) ನಿಧನರಾಗಿದ್ದಾರೆ. 97ನೇ ವಯಸ್ಸಿನ ಶಾಂತಿ ಭೂಷಣ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಅವರು ಫೇಮಸ್ ವಕೀಲರು ಸಹ ಆಗಿದ್ದರು.
Former Law Minister and Senior Advocate Shanti Bhushan passes away.
(File pic) pic.twitter.com/UY2irnYAx5
— ANI (@ANI) January 31, 2023
1980ರಲ್ಲಿ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಎನ್ನುವ ಪ್ರಸಿದ್ಧ ಎನ್‌ಜಿಒ ಸ್ಥಾಪಿಸಿದ್ದರು, ಇನ್ನು 2018 ರಲ್ಲಿ ಅವರು ‘ಮಾಸ್ಟರ್ ಆಫ್ ರೋಸ್ಟರ್’ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ 1977 ರಿಂದ 1979 ರವರೆಗೆ ಭಾರತದ ಕಾನೂನು ಸಚಿವರಾಗಿದ್ದರು.