ಗಾಲಿ ಕುರ್ಚಿಗಾಗಿ 30 ನಿಮಿಷ ಕಾಯಬೇಕಾಗಿ ಬಂತು; ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಖುಷ್ಬೂ
ಡಿಯರ್ ಏರ್ ಇಂಡಿಯಾ (Air India) ಮೊಣಕಾಲಿನ ಗಾಯದ ಪ್ರಯಾಣಿಕರನ್ನು ಕರೆದೊಯ್ಯಲು ನಿಮ್ಮಲ್ಲಿ ಗಾಲಿಕುರ್ಚಿ ಇಲ್ಲ. ಅವರು ಇನ್ನೊಬ್ಬರಿಂದ ಗಾಲಿಕುರ್ಚಿಯನ್ನು ಎರವಲು ಪಡೆಯುವ ಮೊದಲು ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯಿತು
ಚೆನ್ನೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿಗಾಗಿ ಕಾಯುವಂತೆ ಮಾಡಲಾಗಿದೆ ಎಂದು ನಟಿ, ರಾಜಕಾರಣಿ ಖುಷ್ಬೂ ಸುಂದರ್ (Khushbu Sundar) ಟ್ವಿಟರ್‌ನಲ್ಲಿ ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ತಾನು ಗಾಲಿಕುರ್ಚಿಗಾಗಿ ವಿಮಾನ ನಿಲ್ದಾಣದಲ್ಲಿ ಅರ್ಧಗಂಟೆ ಕಾಯಬೇಕಾಗಿ ಬಂತು ಎಂದು ಹೇಳಿದ್ದಾರೆ. ಡಿಯರ್ ಏರ್ ಇಂಡಿಯಾ (Air India) ಮೊಣಕಾಲಿನ ಗಾಯದ ಪ್ರಯಾಣಿಕರನ್ನು ಕರೆದೊಯ್ಯಲು ನಿಮ್ಮಲ್ಲಿ ಗಾಲಿಕುರ್ಚಿ ಇಲ್ಲ. ಅವರು ಇನ್ನೊಬ್ಬರಿಂದ ಗಾಲಿಕುರ್ಚಿಯನ್ನು ಎರವಲು ಪಡೆಯುವ ಮೊದಲು ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯಿತು. ನೀವು ಉತ್ತಮವಾಗಿ ಮಾಡಬಹುದು ಎಂದು ನನಗೆ ಖಾತ್ರಿಯಿದೆ ಎಂದು ಏರ್ ಇಂಡಿಯಾಗೆ ಟ್ಯಾಗ್ ಮಾಡಿ ಖುಷ್ಬೂ ಟ್ವೀಟ್ ಮಾಡಿದ್ದಾರೆ.
ನಿಮಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ. “ಆತ್ಮೀಯ ಮೇಡಂ, ನಿಮಗಾದ ಅನುಭವಕ್ಕೆ ನಾವು ತುಂಬಾ ವಿಷಾದಿಸುತ್ತೇವೆ. ನಾವು ಇದನ್ನು ನಮ್ಮ ಚೆನ್ನೈ ವಿಮಾನ ನಿಲ್ದಾಣದ ತಂಡಕ್ಕೆ ತಿಳಿಸುತ್ತಿದ್ದೇವೆ ಎಂದು ಏರ್‌ಲೈನ್ ಟ್ವೀಟ್ ಮಾಡಿದೆ.
Dear @airindiain you do not have basic wheelchair to take a passenger with a knee injury. I had to wait for 30mnts at chennai airport with braces for my ligament tear before they could get a wheelchair borrowed from another airline to take me in. I am sure you can do better.
— KhushbuSundar (@khushsundar) January 31, 2023
ಕಳೆದ ವರ್ಷ ಎರಡು ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರೊಂದಿಗಿನ ಅಶಿಸ್ತಿನ ವರ್ತನೆಯ ಕನಿಷ್ಠ ಮೂರು ಘಟನೆಗಳ ನಡುವೆಯೇ ಖುಷ್ಬೂ ಸುಂದರ್ ಅವರ ಹೇಳಿಕೆಗಳು ಬಂದಿವೆ.
52 ವರ್ಷದ ಸುಂದರ್ ಅವರು ಅಕ್ಟೋಬರ್ 2020 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡಿಎಂಕೆಯ ಪದಾಧಿಕಾರಿಯೊಬ್ಬರು ತಮ್ಮ ವಿರುದ್ಧ ಮಾಡಿದ ಹೇಳಿಕೆಯ ಬಗ್ಗೆ ಕಿಡಿಕಾರಿದ್ದ ಖುಷ್ಬೂ, ಆ ವ್ಯಕ್ತಿಯವನ್ನು ವಜಾ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದರು.
ಡಿಎಂಕೆ ಕಾರ್ಯಾಧ್ಯಕ್ಷ ಸೈದಾಯಿ ಸಿದ್ದಿಕ್ ಹೇಳಿಕೆ ಬಗ್ಗೆ ಟ್ವೀಟ್ ಮಾಡಿದ್ದ ಖುಷ್ಬೂ, ನನ್ನ ಮುಖ್ಯಮಂತ್ರಿ (ಎಂಕೆ ಸ್ಟಾಲಿನ್) ನನ್ನ ಪರವಾಗಿ ನಿಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಏಕೆ ಮೌನವಾಗಿದ್ದಾರೆ? ಎಂದು ಖುಷ್ಬೂ ಪ್ರಶ್ನಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Tue, 31 January 23