Ashok chavan: ಬಿಜೆಪಿ ಸೇರಿದ ಅಶೋಕ್ ಚವಾಣ್
ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್, ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಮಂಗಳವಾರ ಮುಂಬೈ ಬಿಜೆಪಿ ಕಚೇರಿಯಲ್ಲಿ ಚವಾಣ್ ಪಕ್ಷಕ್ಕೆ ಸೇರಿದ್ದು ಅವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್ಸಿ ಅಮರ್ ರಾಜುರ್ಕರ್ ಕೂಡಾ ಬಿಜೆಪಿ ಸೇರಿದ್ದಾರೆ.
ಮಹಾರಾಷ್ಟ್ರದ (Maharashtra) ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್(Ashok Chavan) ಇಂದು(ಮಂಗಳವಾರ)ಬಿಜೆಪಿಗೆ ಸೇರಿದ್ದಾರೆ. ನಿನ್ನೆ ಅವರು ಕಾಂಗ್ರೆಸ್‌ಗೆ(Congress) ರಾಜೀನಾಮೆ ನೀಡಿದ್ದರು.ಮುಂಬೈ ಬಿಜೆಪಿ ಕಚೇರಿಯಲ್ಲಿ ಚವಾಣ್ ಪಕ್ಷಕ್ಕೆ ಸೇರಿದ್ದು ಅವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್ಸಿ ಅಮರ್ ರಾಜುರ್ಕರ್ ಕೂಡಾ ಬಿಜೆಪಿ ಸೇರಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಮುಂಬೈ ಬಿಜೆಪಿ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಿತು. ಫಡ್ನವಿಸ್ ಅವರು ಚವಾಣ್ ಅವರೊಂದಿಗೆ ಈ ಹಿಂದೆ ಮಾತನಾಡಿದಾಗ ಮಾಜಿ ಕಾಂಗ್ರೆಸ್ ನಾಯಕ ಅನೇಕ ದೊಡ್ಡ ಹುದ್ದೆಗಳನ್ನು ಹೊಂದಿರುವುದರಿಂದ ಯಾವುದೇ ದೊಡ್ಡ ಹುದ್ದೆಯನ್ನು ಬಯಸುವುದಿಲ್ಲ ಜನರಿಗಾಗಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಕೆಲಸದಲ್ಲಿ ನಾನು ಸೇರಲು ಬಯಸುತ್ತೇನೆ ಎಂದು ಹೇಳಿರುವುದಾಗಿ ಹೇಳಿದ್ದಾರೆ.
#WATCH | Former Maharashtra CM Ashok Chavan joins the BJP at the party’s office in Mumbai. He recently quit Congress.
Former Congress MLC Amar Rajurkar also joined the BJP. pic.twitter.com/2833wY76am
— ANI (@ANI) February 13, 2024
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡುವ ಇಚ್ಛೆಯೊಂದಿಗೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಯಾವುದೇ ಹುದ್ದೆ ಕೇಳದೇ ಷರತ್ತು ಇಲ್ಲದ ನಿರ್ಧಾರ ಇದು. ಸುದೀರ್ಘ 38 ವರ್ಷಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ ನನಗೆ ಇದು ಹೊಸ ಇನ್ನಿಂಗ್ಸ್ ಎಂದು ಅಶೋಕ್ ಚವಾಣ್ ಹೇಳಿದ್ದಾರೆ.
ಅಶೋಕ್ ಚವಾಣ್ ಅವರು ಬಿಜೆಪಿಯಿಂದ ರಾಜ್ಯಸಭಾ ನಾಮನಿರ್ದೇಶನ ಪಡೆಯುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ನಾಮಪತ್ರ ಸಲ್ಲಿಕೆಗೆ ಗಡುವು ಇರುವುದರಿಂದ, ಅಶೋಕ್ ಚವಾಣ್ ಅವರು ಕಾಂಗ್ರೆಸ್ ತೊರೆದ ಒಂದು ದಿನದ ನಂತರ ಆತುರದಿಂದ ಬಿಜೆಪಿಗೆ ಸೇರಬೇಕಾಯಿತು ಎಂದು ಊಹಿಸಲಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನ ಅಶೋಕ್ ಚವಾಣ್ ಅವರ ನಿರ್ಗಮನವು ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದೆ, ಏಕೆಂದರೆ ಪಕ್ಷವು ಈಗಾಗಲೇ ಪ್ರಮುಖ ಮತ್ತು ಪ್ರಭಾವಿ ನಾಯಕರಾದ ಮಿಲಿಂದ್ ದಿಯೋರಾ, ಬಾಬಾ ಸಿದ್ದಿಕ್ ಅವರನ್ನು ಕಳೆದುಕೊಂಡಿದೆ. ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ಶಿವಸೇನಾಗೆ ಮತ್ತು ಬಾಬಾ ಸಿದ್ದಿಕ್ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪ್ಪ ನಾರಾಯಣ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ಬ್ರಿಟನ್ನ ಪ್ರಥಮ ಮಹಿಳೆ ಅಕ್ಷತಾ
ಅಶೋಕ್ ಚವಾಣ್ ಅವರ ನಿರ್ಗಮನದ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈನ ಪ್ರಭಾವಿ ಮುಸ್ಲಿಂ ನಾಯಕ ಬಾಬಾ ಸಿದ್ದಿಕ್ ಇದು ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ. ಅಶೋಕ್ ಚವಾಣ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ನನಗೆ ಕರೆ ಬಂದಿತ್ತು.. “ಅಶೋಕ್ ಚವ್ಹಾಣ್ ನನಗೆ ಕರೆ ಮಾಡಿದ್ದು ನಾವು ಮುಂದಿನ ದಾರಿಯಲ್ಲಿ ನಾವು ಶೀಘ್ರದಲ್ಲೇ ಭೇಟಿಯಾಗಲಿದ್ದೇವೆ ಎಂದು ನಾನು ಅವರಿಗೆ ಹೇಳಿದೆ. ಹೆಚ್ಚು ಜನರು ಹೋಗುತ್ತಿದ್ದಾರೆ.ಏಕೆಂದರೆ ಒಬ್ಬ ವ್ಯಕ್ತಿಯು ಉಸಿರುಗಟ್ಟಿಸಿದಾಗ ಅವನು ದಾರಿ ಹುಡುಕಲು ಪ್ರಯತ್ನಿಸುತ್ತಾನೆ. ಇದು ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಅವರು ಎಚ್ಚರಗೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಸಿದ್ದಿಕ್ ಹೇಳಿದರು. ಹೊಸ ಎನ್‌ಸಿಪಿ ನಾಯಕ ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನು ಅಲ್ಲಿ ದಶಕಗಳನ್ನು ಕಳೆದೆ. ಆದರೆ ಪಕ್ಷವು ನನ್ನನ್ನು ಪರಿಮಳಕ್ಕಾಗಿ ಮಾತ್ರ ‘ಕರಿಬೇವಿನ ಎಲೆ’ಯಂತೆ ಬಳಸುತ್ತದೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Tue, 13 February 24