ಬೆಂಗಳೂರಿನಲ್ಲಿ ಅಪ್ಪ ನಾರಾಯಣ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ
ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್ ನಲ್ಲಿ ಐಸ್ ಕ್ರೀಂ ಸವಿಯುತ್ತಿರುವ ನಾರಾಯಣ ಮೂರ್ತಿ ಮತ್ತು ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶ್ರೀಮಂತರಾಗಿದ್ದರೂ, ಸಾಮಾನ್ಯ ಜನರಂತೆ ಹಮ್ಮು ಬಿಮ್ಮುಗಳಿಲ್ಲದೆ ಅಪ್ಪ - ಮಗಳು ಐಸ್ ಕ್ರೀಂ ತಿನ್ನುತ್ತಿರುವುದನ್ನು ನೋಡಿದಿರಾ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಫೆಬ್ರುವರಿ 13: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ(Narayana Murthy) ಮತ್ತು ಅವರ ಮಗಳು ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ (Akshata Murthy) ಅವರು ಸೋಮವಾರ ಬೆಂಗಳೂರಿನಲ್ಲಿ ಒಟ್ಟಿಗೆ ಕುಳಿತು ಐಸ್‌ಕ್ರೀಂ ಸವಿಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್‌ನಲ್ಲಿ (Corner House) ತಂದೆ-ಮಗಳು ಐಸ್ ಕ್ರೀಂ ಸವಿಯುತ್ತಿರುವ ಫೋಟೊ ಇದಾಗಿದೆ. ವರದಿಗಳ ಪ್ರಕಾರ, ಫೆಬ್ರವರಿ 10 ರಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಚಿತ್ರಾ ಬ್ಯಾನರ್ಜಿ ದಿವಾಕರುಣಿ ಬರೆದ “An Uncommon Love: The Early Life of Sudha and Narayana Murthy” ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರೊಂದಿಗಿನ ಮೊದಲ ಭೇಟಿಯ ಘಟನೆಗಳನ್ನು ಹಂಚಿಕೊಂಡರು. ದಂಪತಿಗಳು 1970 ರ ದಶಕದ ಆರಂಭದಲ್ಲಿ ಭೇಟಿಯಾದರು. ದಿವಾಕರುಣಿ ಅವರ ಪುಸ್ತಕವು ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಮದುವೆಗೆ ಮುನ್ನ ಇದ್ದ ಒಡನಾಟದ ಬಗ್ಗೆ ವಿವರವಾಗಿ ಹೇಳುತ್ತದೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು
ಅಕ್ಷತಾ ಮತ್ತು ನಾರಾಯಣ ಮೂರ್ತಿ ಅವರ ಫೋಟೊಗೆ ಕಾಮೆಂಟ್ ಮಾಡಿದ ಎಕ್ಸ್ ಬಳಕೆದಾರರೊಬ್ಬರು, “ಅಲ್ಲಿ ಜನರು ತುಂಬಿದ್ದರು…. ಅವರು ಸದ್ದಿಲ್ಲದೆ ಬಂದು ತಮ್ಮ ಐಸ್ ಕ್ರೀಂ ಖರೀದಿಸಿದರು . ಶ್ರೀಮಂತರಾದರೂ ಸರಳ ಜೀವನ. ಇದು ನಾರಾಯಣ ಮೂರ್ತಿಯವರು ಸಾಗಿಸುತ್ತಿರುವ ಹಿರಿಮೆ.” ಎಂದು ಬರೆದಿದ್ದಾರೆ.
Britain’s First Lady Akshata Murty with her Father Shri Narayan Murthy at Corner House in Jayanagar Bangaluru…🙂@RishiSunak pic.twitter.com/5O4IdyuLvK
— Adarsh Hegde (@adarshahgd) February 12, 2024
ಇನ್ನೊಬ್ಬ ಬಳಕೆದಾರರು “ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ತಮ್ಮ ತಂದೆ ನಾರಾಯಣ ಮೂರ್ತಿ ಅವರೊಂದಿಗೆ ಜಯನಗರ ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ..ಸರಳತೆಯ ಸೌಂದರ್ಯವೆಂದರೆ ಸರಳ, ನಿರಾಭರಣ ಮತ್ತು ಜಟಿಲವಲ್ಲದ ವಿಷಯಗಳಲ್ಲಿ ಸೌಂದರ್ಯವನ್ನು ಕಾಣಬಹುದು. ” ಎಂದಿದ್ದಾರೆ.
ಒಂದು ಐಕಾನಿಕ್ ಲವ್ ಸ್ಟೋರಿ
ಆನ್ ಅನ್ ಕಾಮಲ್ ಲವ್ ಪುಸ್ತಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯನ್ನು ಹೃದಯವನ್ನು ಸ್ಪರ್ಶಿಸುವ ರೀತಿಯಲ್ಲಿ ಮಾತ್ರವಲ್ಲದೆ ನಿಮ್ಮ ತಮಾಷೆಯ ಮೂಲಕವೂ ಕಚಗುಳಿಯಿಡುತ್ತದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
View this post on Instagram
ಪುಸ್ತಕದಲ್ಲಿ, ದಿವಾಕರುಣಿ ಅವರು ಮೂರ್ತಿ ದಂಪತಿ ಜೀವನದಿಂದ ಮಹತ್ವದ ಘಟನೆಗಳು ಮತ್ತು ಸಂಭಾಷಣೆಗಳನ್ನು ಸಂಕೀರ್ಣವಾಗಿ ಆಯ್ಕೆ ಮಾಡುತ್ತಾರೆ. ಎಚ್ಚರಿಕೆಯಿಂದ ಆಯ್ಕೆಮಾಡಿದ ಘಟನೆಗಳ ಮೂಲಕ, ಅನ್‌ಕಾಮನ್ ಲವ್ ಓದುಗರನ್ನು ವಿಭಿನ್ನ ಸಮಯ ಮತ್ತು ಸ್ಥಳಕ್ಕೆ ಸಾಗಿಸುವ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: ನಾರಾಯಣ ಮೂರ್ತಿ ವಾರದ 70 ಗಂಟೆ ಕೆಲಸ ಸಲಹೆಗೆ ಉದ್ಯಮಿ ವಿನೋದ್ ಖೋಸ್ಲಾ ಬೆಂಬಲ
“ಅನ್‌ಕಾಮನ್ ಲವ್” ಬರೆಯುವುದು ಒಂದು ಮೋಡಿಮಾಡುವ ಪ್ರಯಾಣವಾಗಿದೆ. ಮೂರ್ತಿಗಳು ತಮ್ಮ ಕಥೆಯನ್ನು ಮಾತ್ರವಲ್ಲದೆ ತಮ್ಮ ನಗುವನ್ನೂ ಹಂಚಿಕೊಂಡರು, ಈ ಪುಸ್ತಕವನ್ನು ಪ್ರೀತಿ, ಜೀವನ ಮತ್ತು ಉತ್ತಮ ಹಾಸ್ಯ ಪ್ರಜ್ಞೆಯ ಆಚರಣೆಯನ್ನಾಗಿ ಮಾಡಿದರು”ಎಂದು ಸಮಾರಂಭದಲ್ಲಿ ಮಾತನಾಡಿದ ದಿವಾಕರುಣಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ