ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಟಿಎಂಸಿಗೆ ಸೇರ್ಪಡೆ
Abhijit Mukherjee: ನನ್ನನ್ನು ಪ್ರಾಥಮಿಕ ಸದಸ್ಯತ್ವವನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಯಾವುದೇ ಗುಂಪು ಅಥವಾ ಸ್ಥಾನದಲ್ಲಿ ಸೇರಿಸಲಾಗಿಲ್ಲ. ಆದ್ದರಿಂದ, ನಾನು ಟಿಎಂಸಿಗೆ ಕಾರ್ಯಕರ್ತನಾಗಿ ಸೇರಿಕೊಂಡಿದ್ದೇನೆ ಮತ್ತು ಪಕ್ಷದ ಸೂಚನೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ ಅಭಿಜಿತ್ ಮುಖರ್ಜಿ.
ಕೊಲ್ಕತ್ತಾ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಸೋಮವಾರ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ಗೆ (TMC) ಸೇರಿದ್ದಾರೆ. ಟಿಎಂಸಿಗೆ ಸೇರಿದ ನಂತರ ಮಾತನಾಡಿದ ಅಭಿಜಿತ್ ಮುಖರ್ಜಿ, ನಾನು ಮಮತಾ ಬ್ಯಾನರ್ಜಿಯ ನಾಯಕತ್ವದ ಗುಣಗಳ ಬಗ್ಗೆ ಸಂಪೂರ್ಣ ನಂಬಿಕೆ ಹೊಂದಿದ್ದೇನೆ ಎಂದು ಹೇಳಿದರು. “ಮಮತಾ ಬ್ಯಾನರ್ಜಿ ಬಿಜೆಪಿಯ ಇತ್ತೀಚಿನ ಕೋಮು ಅಲೆ ನಿಲ್ಲಿಸಿದ ರೀತಿ, ಭವಿಷ್ಯದಲ್ಲಿ ಇತರರ ಬೆಂಬಲದೊಂದಿಗೆ, ಇಡೀ ದೇಶದಲ್ಲಿಯೂ ಸಹ ಅವರು ಅದೇ ರೀತಿ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನನ್ನನ್ನು ಪ್ರಾಥಮಿಕ ಸದಸ್ಯತ್ವವನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಯಾವುದೇ ಗುಂಪು ಅಥವಾ ಸ್ಥಾನದಲ್ಲಿ ಸೇರಿಸಲಾಗಿಲ್ಲ. ಆದ್ದರಿಂದ, ನಾನು ಟಿಎಂಸಿಗೆ ಕಾರ್ಯಕರ್ತನಾಗಿ ಸೇರಿಕೊಂಡಿದ್ದೇನೆ ಮತ್ತು ಪಕ್ಷದ ಸೂಚನೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಸಮಗ್ರತೆ ಮತ್ತು ಜಾತ್ಯತೀತತೆಯನ್ನು ಕಾಪಾಡಿಕೊಳ್ಳಲು ನಾನು ಕೆಲಸ ಮಾಡುತ್ತೇನೆ ಎಂದು ಅಭಿಜಿತ್ ಮುಖರ್ಜಿ ಹೇಳಿದ್ದಾರೆ
Abhijit Mukherjee, son of former President Pranab Mukherjee, joins Trinamool Congress
Read @ANI Story | https://t.co/BXzbZogVAK pic.twitter.com/odZL6qQf8D
— ANI Digital (@ani_digital) July 5, 2021
ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಸಂಸದರೂ ಆಗಿರುವ ಮುಖರ್ಜಿ ಅವರು ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಕಲಿ ವ್ಯಾಕ್ಸಿನೇಷನ್ ಪ್ರಕರಣದ ಬಗ್ಗೆ ಟ್ವಿಟರ್ನಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಜೂನ್ 25 ರಂದು ಮುಖರ್ಜಿ ಅವರು ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾನರ್ಜಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು ” ಐಎಎಸ್ ಅಧಿಕಾರಿ ದೇಬಂಜನ್ ದೇಬ್ ಹೆಸರಿನಲ್ಲಿ ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್ ಪ್ರಕರಣದಲ್ಲಿ ದೀದಿಯನ್ನು ದೂಷಿಸುವವರು ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮೊದಲಾದ ಹಗರಣಗಳಿಗಾಗಿ ಮೋದಿ ಜಿ ಅವರನ್ನು ದೂಷಿಸಬೇಕು. ಆದ್ದರಿಂದ ಪಶ್ಚಿಮ ಬಂಗಾಳ ಸರ್ಕಾರವನ್ನು ವೈಯಕ್ತಿಕ ಕೃತ್ಯಕ್ಕೆ ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದರು.
ಸಿಪಿಐ (ಎಂ) ನ ಮುಜಾಫರ್ ಹುಸೇನ್ ಅವರನ್ನು ಸೋಲಿಸಿ ಮುಖರ್ಜಿ ಅವರು 2012 ರ ಜಂಗೀಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ 2,536 ಮತಗಳಿಂದ ಜಯಗಳಿಸಿದ್ದರು. ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿ ಆಯ್ಕೆಯಾದ ನಂತರ ತೆರವು ಗೊಂಡಿದ್ದ ಸ್ಥಾನದಲ್ಲಿ ಅಭಿಜಿತ್ ಸ್ಪರ್ಧಿಸಿದ್ದರು. 2014 ರಲ್ಲಿ ಮರು ಆಯ್ಕೆಯಾದರು ಆದರೆ ಅಂತಿಮವಾಗಿ 2019 ರಲ್ಲಿ ಟಿಎಂಸಿಯ ಖಲೀಲೂರ್ ರಹಮಾನ್ ಎದುರು ಪರಾಭವಗೊಂಡರು.
To fight against BJP in Bengal. I have no position now and neither am I going to get anything immediately: Abhijit Mukherjee, son of former President Pranab Mukherjee on joining TMC pic.twitter.com/H0lVtNFz6G
— ANI (@ANI) July 5, 2021
ಕೋಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದ ಮುಖರ್ಜಿ, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಮಾರುತಿ ಉದ್ಯೋಗ್ ಲಿಮಿಟೆಡ್ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಂತಹ ಸಂಸ್ಥೆಗಳಿಗೆ ಕಾರ್ಪೊರೇಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Abhijit Mukherjee ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲಿದ್ದಾರೆ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ