ಕುಪ್ಪಂ: ತೆರದ ಬಾವಿಗೆ ಬಿದ್ದು ತಾಯಿ, ಮೂವರು ಮಕ್ಕಳು ಸೇರಿದಂತೆ ನಾಲ್ವರ ದುರ್ಮರಣ
ನೀರಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮೂವರು ನೀರು ಪಾಲಾಗಿದ್ದು, ಮುನಿಲಾಲ್ ಪ್ರಸಾದ್ ಎಂಬುವರ ಪತ್ನಿ ಮಕ್ಕಳು ಸೇರಿದಂತೆ ನಾಲ್ವರ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕುಪ್ಪಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೋಲಾರ: ನೀರಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮೂವರು ಮಕ್ಕಳು ಸಹ ತಾಯಿಯೊಂದಿಗೆ ನೀರು ಪಾಲಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂನಲ್ಲಿ ನಡೆದಿದೆ.
ಕೃಷ್ಣದಾಸನಪಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಂಪನಗಲ್ಲು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ರುಕ್ಮಿಣಿ ಭಾಯ್ (30) ಪುತ್ರಿಯರಾದ ಆರತಿ (8) ಕೀರ್ತಿ (6)ರಾಜೇಶ್ವರಿ (26) ಮೃತ ದುರ್ದೈವಿಗಳಾಗಿದ್ದಾರೆ.
ನೀರಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮೂವರು ನೀರು ಪಾಲಾಗಿದ್ದು, ಮುನಿಲಾಲ್ ಪ್ರಸಾದ್ ಎಂಬುವರ ಪತ್ನಿ ಮಕ್ಕಳು ಸೇರಿದಂತೆ ನಾಲ್ವರ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕುಪ್ಪಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ: ಪತಿ ರಾಕೇಶ್ ಪಾಟೀಲ್ ಸ್ಥಳದಲ್ಲೇ ಸಾವು