AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಪ್ರತಿಭಟನೆಗಳ ಹಿಂದೆ ವಿದೇಶಿ ಜಾಲದ ಕೈವಾಡ? ಫಾಕ್ಸ್ ನ್ಯೂಸ್ ತನಿಖಾ ವರದಿಯ ವಿವರ ಇಲ್ಲಿದೆ

ಎರಡು ವಾರಗಳ ಹಿಂದೆ ದೆಹಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ, ಅಕ್ಟೋಬರ್ 17ರಂದು ಫ್ರಾನ್ಸ್‌ನಲ್ಲಿ ಜೀವನ ವೆಚ್ಚದ ಏರಿಕೆ ಹಾಗೂ ಶಾಲೆಗಳ ದುಸ್ಥಿತಿಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ನಡೆದ ಈ ಪ್ರದರ್ಶನಗಳು ಹಿಂಸಾತ್ಮಕ ತಿರುವು ಪಡೆದುಕೊಂಡು, ಮಳಿಗೆಗಳ ಧ್ವಂಸ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ದೃಶ್ಯಗಳು ವೈರಲ್ ಆಗಿದ್ದವು. ಮೇಲ್ನೋಟಕ್ಕೆ ಈ ಎರಡೂ ಪ್ರತಿಭಟನೆಗಳು ಸ್ವತಂತ್ರವಾದವು ಮತ್ತು ಯಾವುದೇ ಸಂಬಂಧವಿಲ್ಲದಂತೆ ಕಂಡಿದ್ದವು. ಆದರೆ, ಫಾಕ್ಸ್ ನ್ಯೂಸ್ ನಡೆಸಿದ ತನಿಖೆ ಬೇರೆಯೇ ಕತೆ ಹೇಳುತ್ತಿದೆ. ಈ ವರದಿಯಲ್ಲೇನಿದೆ? ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

ಭಾರತದ ಪ್ರತಿಭಟನೆಗಳ ಹಿಂದೆ ವಿದೇಶಿ ಜಾಲದ ಕೈವಾಡ? ಫಾಕ್ಸ್ ನ್ಯೂಸ್ ತನಿಖಾ ವರದಿಯ ವಿವರ ಇಲ್ಲಿದೆ
ಭಾರತದ ಪ್ರತಿಭಟನೆImage Credit source: PTI
ಸುಷ್ಮಾ ಚಕ್ರೆ
|

Updated on: Oct 22, 2026 | 4:38 PM

Share

ನವದೆಹಲಿ, ಅಕ್ಟೋಬರ್ 22: ಭಾರತ ಮತ್ತು ಫ್ರಾನ್ಸ್‌ಗಳಲ್ಲಿ ನಡೆಯುತ್ತಿರುವ ಧರಣಿ ಹಾಗೂ ಪ್ರತಿಭಟನೆಗಳ ಹಿಂದೆ ಬೃಹತ್ ಅಂತಾರಾಷ್ಟ್ರೀಯ ಜಾಲ ಕೆಲಸ ಮಾಡುತ್ತಿದೆ ಎಂದು ಫಾಕ್ಸ್ ನ್ಯೂಸ್ ಡಿಜಿಟಲ್ ತನಿಖಾ ವರದಿ ಬಹಿರಂಗಪಡಿಸಿದೆ. ಈ ವರದಿಯು ದೇಶಾದ್ಯಂತ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಫಾಕ್ಸ್ ನ್ಯೂಸ್‌ನ ತನಿಖಾ ವರದಿಯ ಪ್ರಕಾರ, ಕಮ್ಯುನಿಸ್ಟ್ ಹಾಗೂ ಇಸ್ಲಾಮಿಕ್ ಗುಂಪುಗಳು ಸೇರಿದಂತೆ 9 ದೇಶಗಳಲ್ಲಿ ಹರಡಿರುವ 101 ಪ್ರಭಾವಿ ಸಂಸ್ಥೆಗಳು ಸೇರಿ ಜಾಗತಿಕ ಮಟ್ಟದಲ್ಲಿ ಅರಾಜಕತೆ ಸೃಷ್ಟಿಸುವ ಮತ್ತು ಆಡಳಿತ ಬದಲಾವಣೆ ಮಾಡುವ ಅಜೆಂಡಾದ ಮೇಲೆ ಕಾರ್ಯನಿರ್ವಹಿಸುತ್ತಿವೆ.

ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ಗಲಭೆಗಳು ಹಾಗೂ ಭಾರತದಲ್ಲಿ ನೆರವೇರುತ್ತಿರುವ ಪ್ರತಿಭಟನೆಗಳ ನಡುವೆ ಒಂದೇ ರೀತಿಯ ಅಂತಾರಾಷ್ಟ್ರೀಯ ಜಾಲ ನೆರವು ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ರಾಹುಲ್-ಸೋನಿಯಾ ಗಾಂಧಿ ಭೇಟಿಯ ಕುರಿತು ಪ್ರಶ್ನೆ:

ಈ ವರದಿ ಹೊರಬಿದ್ದ ಬೆನ್ನಲ್ಲೇ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಿರಿಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು 2025ರ ಏಪ್ರಿಲ್ 10 ರಂದು ದೆಹಲಿಯ 10 ಜನಪಥ್‌ನಲ್ಲಿ ‘ಪ್ರೋಗ್ರೆಸಿವ್ ಇಂಟರ್ನ್ಯಾಷನಲ್’ ಪ್ರತಿನಿಧಿಗಳೊಂದಿಗೆ ನಡೆಸಿದ್ದ ಸಭೆಯ ಕುರಿತು ಆಡಳಿತಾರೂಢ ಬಿಜೆಪಿ ಸೇರಿದಂತೆ ಹಲವರು ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ಭಾರತದ ಆಂತರಿಕ ರಾಜಕೀಯ ವಿಷಯ: ವಿಶ್ವಸಂಸ್ಥೆ ತಜ್ಞರ ಟೀಕೆಗಳನ್ನು ತಳ್ಳಿಹಾಕಿದ ಮಾರ್ಕೊ ರುಬಿಯೊ

ಫಾಕ್ಸ್ ಮಾಧ್ಯಮದ ಪತ್ರಕರ್ತೆ ಅಸ್ರಾ ನೊಮಾನಿ ನಡೆಸಿದ ತನಿಖೆಯ ಪ್ರಕಾರ, ಕಮ್ಯುನಿಸ್ಟ್ ಮತ್ತು ಸೋಷಿಯಲಿಸ್ಟ್ ಸಂಘಟನೆಗಳು, ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಗುಂಪುಗಳು ಹಾಗೂ ಮಾಧ್ಯಮ ಜಾಲಗಳನ್ನು ಒಳಗೊಂಡ ಒಂದು ಅಂತಾರಾಷ್ಟ್ರೀಯ ಪ್ರತಿಭಟನಾ ಪರಿಸರ ವ್ಯವಸ್ಥೆಯು ಯುರೋಪ್ ಸೇರಿದಂತೆ ಭಾರತದಲ್ಲೂ ಪ್ರತಿಭಟನೆಗಳನ್ನು ಸಂಘಟಿಸುತ್ತಿದೆ ಮತ್ತು ಪ್ರಚೋದಿಸುತ್ತಿದೆ. ಫಾಕ್ಸ್ ನ್ಯೂಸ್‌ನ ತನಿಖಾ ವರದಿಯ ಪ್ರಕಾರ, ಯುರೋಪ್ ಹಾಗೂ ಅಮೆರಿಕ ಸೇರಿದಂತೆ ಒಟ್ಟು 9 ದೇಶಗಳಲ್ಲಿ ಹರಡಿರುವ 101 ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಪ್ರತಿಭಟನೆಗಳನ್ನು ವಿಸ್ತರಿಸಲು ಮತ್ತು ಸಂಘಟಿಸಲು ಪರಸ್ಪರ ಕೈಜೋಡಿಸಿವೆ.

ಫ್ರಾನ್ಸ್ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಗ್ರೀಸ್, ಬ್ರೆಜಿಲ್ ಮತ್ತು ಭಾರತದಂತಹ ದೇಶಗಳಲ್ಲೂ ಈ ಜಾಲವು ಹರಡಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಪ್ರತಿಭಟನೆಗಳನ್ನು ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಫ್ರಾನ್ಸ್‌ನ ಗಲಭೆಗಳು ಹಾಗೂ ಭಾರತದ ಯುವಜನರ ಪ್ರತಿಭಟನೆಗಳ ನಡುವಿನ ಕೊಂಡಿಯನ್ನು ಅಸ್ರಾ ನೊಮಾನಿ ತಮ್ಮ ವರದಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸ್‌ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರ ಸಂಘಟನೆಯಾದ ‘ಇಂಡಿಯನ್ ಅಲೈಯನ್ಸ್ ಪ್ಯಾರಿಸ್’ (IAP) ಎಂಬ ಗುಂಪು ಫ್ರೆಂಚ್ ಮತ್ತು ಭಾರತೀಯ ಪ್ರತಿಭಟನೆಗಳ ಸಂದೇಶಗಳನ್ನು ಜೋಡಿಸುವ ಪ್ರಮುಖ ಕೊಂಡಿಯಾಗಿದೆ ಎಂದು ವರದಿ ತಿಳಿಸಿದೆ.

ಈ ಸಂಘಟನೆಯು ಫ್ರಾನ್ಸ್‌ನಲ್ಲಿ ಪ್ರತಿಭಟನೆಗಳನ್ನು ಉತ್ತೇಜಿಸುವುದರ ಜೊತೆಗೆ, ಭಾರತದ ಪ್ರತಿಭಟನೆಗಳೊಂದಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.

ಬಿಜೆಪಿಯಿಂದ ಗಂಭೀರ ಆರೋಪ:

ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಪತ್ರಿಕಾಗೋಷ್ಠಿ ನಡೆಸಿ, “ಪ್ರೋಗ್ರೆಸಿವ್ ಇಂಟರ್ನ್ಯಾಷನಲ್ ಸಂಸ್ಥೆಯೊಂದಿಗೆ ಕಾಂಗ್ರೆಸ್ ನಾಯಕರು ಏಪ್ರಿಲ್ 10ರಂದು ನಡೆಸಿದ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯಿತು? ಮತ್ತು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಯಾವುದೇ ವಿದೇಶಿ ಒಪ್ಪಂದ ನಡೆದಿದೆಯೇ?” ಎಂದು ಬಹಿರಂಗಪಡಿಸುವಂತೆ ಕಾಂಗ್ರೆಸ್ ನಾಯಕತ್ವವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ತುಂಬಾ ಸುಸ್ತಾಗಿದೆಯಾ?’; ಎಸ್‌ಐಆರ್ ಪ್ರತಿಭಟನೆ ನಡುವೆ ವಿಯೆಟ್ನಾಮ್​ಗೆ ಹೊರಟ ರಾಹುಲ್ ಗಾಂಧಿಗೆ ಬಿಜೆಪಿ ಲೇವಡಿ

ಈ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾತನಾಡಿ, “ರಾಹುಲ್ ಗಾಂಧಿ ಅವರು ವಿದೇಶಗಳಿಗೆ ತೆರಳಿದಾಗಲೆಲ್ಲಾ ನೆವಿಲ್ಲೆ ರಾಯ್ ಸಿಂಘಮ್, ಇಲ್ಹಾನ್ ಒಮರ್, ರೋ ಖನ್ನಾ ಮತ್ತು ಸೊರೊಸ್ ಫೌಂಡೇಷನ್ ಸಿಂಡಿಕೇಟ್‌ಗಳೊಂದಿಗೆ ಸಂಪರ್ಕ ಹೊಂದುತ್ತಾರೆ ಎಂಬುದು ನನ್ನ ನೇರ ಆರೋಪವಾಗಿದೆ. ಅವರ ಪ್ರಚೋದನೆ ಮತ್ತು ಸೂಚನೆಯ ಮೇರೆಗೆ ರಾಹುಲ್ ಗಾಂಧಿ ಮತ್ತು ವಿವಿಧ ವಿಪಕ್ಷಗಳು ಸರ್ಕಾರದ ಬದಲಾವಣೆಗಾಗಿ ಯುವಕರನ್ನು ಒಟ್ಟುಗೂಡಿಸಿ ಪ್ರತಿಭಟನೆಗೆ ಪ್ರಚೋದಿಸುತ್ತಿವೆ. ನೆಹರೂ ಅವರ ಕಾಲದ ದೇಶವಿಭಜನೆಯಂತೆ, ಅವರು ಮತ್ತೊಮ್ಮೆ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ನೇಪಾಳ, ಶ್ರೀಲಂಕಾ ಅಥವಾ ಪಾಕಿಸ್ತಾನದಲ್ಲಿ ಕಂಡುಬಂದಂತಹ ಶೋಚನೀಯ ಪರಿಸ್ಥಿತಿಯನ್ನು ದೇಶದಲ್ಲಿ ಸೃಷ್ಟಿಸಿ, ರಾಷ್ಟ್ರವನ್ನು ವಿಭಜಿಸುವುದು ಅವರ ಗುರಿಯಾಗಿದೆ. ಆದರೆ ಇಡೀ ಜಗತ್ತು ಈಗ ಎಚ್ಚೆತ್ತುಕೊಂಡಿರುವುದರಿಂದ ಅವರ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಈ ವರದಿಗಳು ಅವರು ಅಂತಹ ದೇಶದ್ರೋಹಿಗಳೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತವೆ” ಎಂದು ಟೀಕಿಸಿದ್ದಾರೆ.

“ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ನಾವು ನೇರವಾಗಿ ಜನರ ಬಳಿಗೆ ಹೋಗುತ್ತೇವೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಜನರೇ ಸರ್ವೋಚ್ಚ. ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಅಪ್ರಸ್ತುತ ಸ್ಥಿತಿಗೆ ತಲುಪಿಸುವುದನ್ನು ನಾವು ಖಚಿತಪಡಿಸುತ್ತೇವೆ. ಈ ದಾಖಲೆಗಳನ್ನು ಜನರ ಮುಂದಿಟ್ಟಾಗ, ಕಾಂಗ್ರೆಸ್‌ನ ಯಾವುದೇ ನಾಯಕನಿಗೆ, ವಿಪಕ್ಷಗಳಿಗೆ ಅಥವಾ ಅವರನ್ನು ಬೆಂಬಲಿಸುವವರಿಗೆ ಜನರ ಮುಂದೆ ಮುಖ ತೋರಿಸಲು ಧೈರ್ಯವಿರುವುದಿಲ್ಲ. ಅವರ ಈ ಹೀನ ಕೃತ್ಯಕ್ಕಾಗಿ ಜನರು ಅವರನ್ನು ಪ್ರಶ್ನಿಸಬಹುದು” ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ