TSRTC Bus: ಉಚಿತ ಬಸ್ ಪ್ರಯಾಣದ ಎಫೆಕ್ಟ್! ಆ ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿಬಿಟ್ಟ, ಯಾಕೆ ಗೊತ್ತಾ?

ಈ ಮಧ್ಯೆ, ಬಸ್ಸಿನಿಂದ ಇಳಿದ ಅಜೀಂ ಖಾನ್ ಮತ್ತೊಂದು ಖಾಸಗಿ ವಾಹನದಲ್ಲಿ ಆರ್ ಟಿಸಿ ಬಸ್ಸನ್ನು ಹಿಂಬಾಲಿಸಿ ಆದಿಲಾಬಾದ್ ಗಡಿ ತಲುಪಿದಾಗ ಕಂಡಕ್ಟರ್ ಜೊತೆ ಮತ್ತೊಮ್ಮೆ ವಾಗ್ವಾದಕ್ಕಿಳಿದಿದ್ದಾರೆ. ಸಹ ಪ್ರಯಾಣಿಕರ ಮಾತು ಕೇಳದೆ ಅಜೀಂ ಗಲಾಟೆ ಮಾಡಿದ್ದಾರೆ. ಮತ್ತೆ ಯಾಕೆ ಹತ್ತುತ್ತೀರಿ ಎಂದು ಕಂಡಕ್ಟರ್ ನಿಲ್ಲಿಸಿದಾಗ ಸಿಟ್ಟಿಗೆದ್ದ ಅಜೀಂ ಕಂಡಕ್ಟರ್ ಕೆನ್ನೆಗೆ ಕಚ್ಚಿ ಓಡಿ ಹೋಗಿದ್ದಾನೆ!

TSRTC Bus: ಉಚಿತ ಬಸ್ ಪ್ರಯಾಣದ ಎಫೆಕ್ಟ್! ಆ ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿಬಿಟ್ಟ, ಯಾಕೆ ಗೊತ್ತಾ?
ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿರುವುದು ಹೀಗೆ
Follow us
ಸಾಧು ಶ್ರೀನಾಥ್​
|

Updated on: Dec 22, 2023 | 1:20 PM

ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಅಲ್ಲಿನ ನೂತನ ಕಾಂಗ್ರೆಸ್ ಸರಕಾರ ತಂದಿರುವ ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದೆ. ಆದರೆ ದಿನನಿತ್ಯ ನಾನಾ ಸಮಸ್ಯೆಗಳೂ ತರುತ್ತಿದೆ. ಬಸ್‌ಗಳಲ್ಲಿ ಸೀಟು ಇಲ್ಲದ್ದಕ್ಕೆ ಜಗಳವಾಡುವುದು ಮಾಮೂಲಿಯಾಗಿದೆ. ಈಗ ಅಂತಹದ್ದೊಂದು ಜಗಳ ಬಸ್ ಕಂಡಕ್ಟರ್‌ಗೆ ಕಷ್ಟ ತಂದಿಟ್ಟಿದೆ. ಬಸ್ಸಿನಲ್ಲಿ ಸೀಟು ಸಿಗದ ಕೋಪದಲ್ಲಿ ಪ್ರಯಾಣಿಕರೊಬ್ಬರು ಕಂಡಕ್ಟರ್ ಕೆನ್ನೆಗೆ ಕಚ್ಚಿರುವ ಘಟನೆ ಆದಿಲಾಬಾದ್-ಮಹಾರಾಷ್ಟ್ರ ಗಡಿಯಲ್ಲಿ ನಡೆದಿದೆ. ಟಿಕೆಟ್ ತೆಗೆದುಕೊಂಡ ನಂತರ ನಿಂತು ಪ್ರಯಾಣಿಸಬೇಕಾ ಎಂದು ರೊಚ್ಚಿಗೆದ್ದ ಪ್ರಯಾಣಿಕರೊಬ್ಬರು ಆರ್ ಟಿಸಿ ಕಂಡಕ್ಟರ್ ಜೊತೆ ಜಗಳಕ್ಕೆ ಇಳಿದಿದ್ದಾರೆ. ಹಣ ವಾಪಸ್​ ನೀಡುವಂತೆ ಒತ್ತಾಯಿಸಿದ್ದಾರೆ. ಶೋಚನೀಯವೆಂದರೆ ಕಂಡಕ್ಟರ್ ಹಣ ಹಿಂತಿರುಗಿಸಿದರೂ ಆತನ ಮೇಲೆ ಪ್ರಯಾಣಿಕ ದಾಳಿ ಮಾಡಿದ್ದಾನೆ.

ಆದಿಲಾಬಾದ್ ಡಿಪೋಗೆ ಸೇರಿದ ಆರ್ ಟಿಸಿ ಬಸ್ ಮಹಾರಾಷ್ಟ್ರದ ಗಡಿಭಾಗದ ಪಂಡ್ರಕವಾಡಕ್ಕೆ ಹೋಗುತ್ತಿತ್ತು. ಮಹಾರಾಷ್ಟ್ರದ ಗಡಿಯಲ್ಲಿ ಬೋರಿ ಬಸ್ ನಿಲ್ದಾಣದಲ್ಲಿ ಹಸ್ನಾಪುರದ ಅಜೀಂ ಖಾನ್ ಎಂಬ ವ್ಯಕ್ತಿ ಬಸ್ ಹತ್ತಿ ಆದಿಲಾಬಾದ್‌ಗೆ ಟಿಕೆಟ್ ತೆಗೆದುಕೊಂಡಿದ್ದಾನೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಆತನಿಗೆ ಸೀಟು ಸಿಗಲಿಲ್ಲ. ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ… ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸೀಟು ಕಲ್ಪಿಸಲಾಗಿದೆ. ಅದನ್ನು ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಪುರುಷ ಪ್ರಯಾಣಿಕ ಹಣ ಕೊಟ್ಟು ಪ್ರಯಾಣಿಸುತ್ತಿರುವ ನನಗೆ ಸೀಟು ಕೊಡದೆ, ತಡೆದಿದ್ದೀಯ. ಅವರು ಮಾತ್ರ ಸೀಟಿನಲ್ಲಿ ಕುಳಿತಿದ್ದಾರೆ ಎಂದು ಕಂಡಕ್ಟರ್ ಎನ್.ಎ. ಖಾನ್ ಜೊತೆ ಪ್ರಯಾಣಿಕ ಅಜೀಂ ಖಾನ್ ಜಗಳವಾಡಿದ್ದಾರೆ.

Also Read: ಡೀಸಲ್ ಇಲ್ಲದೇ ಅರ್ಧ ದಾರಿಯಲ್ಲೇ ನಿಂತ ಬಸ್! ಡೀಸಲ್ ಹಾಕಿಸದಷ್ಟು ಲಾಸ್ ಮಾಡಿಕೊಂಡಿದೆಯಾ KSRTC?

ಈ ಮಧ್ಯೆ, ಬಸ್ಸಿನಿಂದ ಇಳಿದ ಅಜೀಂ ಖಾನ್ ಮತ್ತೊಂದು ಖಾಸಗಿ ವಾಹನದಲ್ಲಿ ಆರ್ ಟಿಸಿ ಬಸ್ಸನ್ನು ಹಿಂಬಾಲಿಸಿ ಆದಿಲಾಬಾದ್ ಗಡಿ ತಲುಪಿದಾಗ ಕಂಡಕ್ಟರ್ ಜೊತೆ ಮತ್ತೊಮ್ಮೆ ವಾಗ್ವಾದಕ್ಕಿಳಿದಿದ್ದಾರೆ. ಸಹ ಪ್ರಯಾಣಿಕರ ಮಾತು ಕೇಳದೆ ಅಜೀಂ ಖಾನ್ ಗಲಾಟೆ ಮಾಡಿದ್ದಾರೆ. ಮತ್ತೆ ಯಾಕೆ ಹತ್ತುತ್ತೀರಿ ಎಂದು ಕಂಡಕ್ಟರ್ ನಿಲ್ಲಿಸಿದಾಗ ಸಿಟ್ಟಿಗೆದ್ದ ಅಜೀಂ ಖಾನ್ ಕಂಡಕ್ಟರ್ ಕೆನ್ನೆಗೆ ಕಚ್ಚಿ ಓಡಿ ಹೋಗಿದ್ದಾನೆ!

ಬಸ್ಸು ಅದಿಲಾಬಾದ್ ತಲುಪಿದಾಗ, ಕಂಡಕ್ಟರ್ ಎನ್.ಎ. ಖಾನ್ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರನ್ನೂ ಸಂಪರ್ಕಿಸಿದ್ದಾರೆ. ದೂರನ್ನು ಸ್ವೀಕರಿಸಿದ ಟೂ ಟೌನ್​​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ