ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕುವ ಕೇಂದ್ರದ ನಿರ್ಧಾರವನ್ನು ಈಶಾನ್ಯ ರಾಜ್ಯಗಳು ವಿರೋಧಿಸುತ್ತಿರುವುದೇಕೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮ್ಯಾನ್ಮಾರ್ ಜತೆಗಿನ ಮುಕ್ತ ಚಲನೆಯ ಒಪ್ಪಂದವನ್ನು ಅಧಿಕೃತವಾಗಿ ರದ್ದು ಮಾಡುವ ಪ್ರಸ್ತಾಪ ಮಾಡಿದ್ದು 1,643 ಕಿಮೀ ಉದ್ದರ ಗಡಿ ಬೇಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಂಗಳವಾರ ಹೇಳಿದ್ದಾರೆ.ಭಾರತ ಮ್ಯಾನ್ಮಾರ್‌ನೊಂದಿಗೆ 1,643-ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಇದು ನಾಲ್ಕು ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನ್ನು ಹಾದುಹೋಗುತ್ತದೆ.
ದೆಹಲಿ ಮಾರ್ಚ್ 02: ಮಿಜೋರಾಂನಲ್ಲಿನ ನಿರ್ಧಾರಗಳ ಬೆನ್ನಲ್ಲೇ ನಾಗಾಲ್ಯಾಂಡ್ ವಿಧಾನಸಭೆಯು(Nagaland Legislative Assembly) ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ (Indo-Myanmar border) ಬೇಲಿ ಹಾಕುವ ಮತ್ತು ಉಭಯ ದೇಶಗಳ ನಡುವಿನ ಮುಕ್ತ ಚಲನೆಯ ಒಪ್ಪಂದವನ್ನು (Free Movement Regime – FMR) ರದ್ದುಗೊಳಿಸುವ ತನ್ನ ಇತ್ತೀಚಿನ ಕ್ರಮವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ. ಭಾರತ ಮ್ಯಾನ್ಮಾರ್‌ನೊಂದಿಗೆ 1,643-ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಇದು ನಾಲ್ಕು ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನ್ನು ಹಾದುಹೋಗುತ್ತದೆ. ಮ್ಯಾನ್ಮಾರ್‌ನೊಂದಿಗೆ 215 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವ ನಾಗಾಲ್ಯಾಂಡ್, ಮಿಜೋರಾಂ ನಂತರ ಈ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎರಡನೇ ರಾಜ್ಯವಾಗಿದೆ. ಆಕ್ಟ್ ಈಸ್ಟ್ ನೀತಿಯ ಅಡಿಯಲ್ಲಿ 2018 ರಲ್ಲಿ ಪ್ರಾರಂಭಿಸಲಾದ ಎಫ್‌ಎಂಆರ್, ವೀಸಾ ಅಗತ್ಯವಿಲ್ಲದೇ 16 ಕಿಲೋಮೀಟರ್‌ಗಳವರೆಗೆ ಗಡಿಯಾಚೆಯ ಚಲನೆಯನ್ನು ಅನುಮತಿಸುತ್ತದೆ.
FMR ರದ್ದು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮ್ಯಾನ್ಮಾರ್ ಜತೆಗಿನ ಮುಕ್ತ ಚಲನೆಯ ಒಪ್ಪಂದವನ್ನು ಅಧಿಕೃತವಾಗಿ ರದ್ದು ಮಾಡುವ ಪ್ರಸ್ತಾಪ ಮಾಡಿದ್ದು 1,643 ಕಿಮೀ ಉದ್ದರ ಗಡಿ ಬೇಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಂಗಳವಾರ ಹೇಳಿದ್ದಾರೆ. ಈ ಕ್ರಮವು ಭಾರತದ ಆಂತರಿಕ ಭದ್ರತೆಯನ್ನು ಕಾಪಾಡುವುದು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಈಶಾನ್ಯ ರಾಜ್ಯಗಳ ಜನಸಂಖ್ಯಾ ಸಂಯೋಜನೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.
ನಮ್ಮ ಗಡಿಯನ್ನು ಸುರಕ್ಷಿತವಾಗಿರಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನೆಯ ಒಪ್ಪಂದ (ಎಫ್‌ಎಂಆರ್) ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ನಿರ್ಧರಿಸಿದೆ ಎಂದು ಶಾ ಹೇಳಿದ್ದಾರೆ.
ನಿಯಂತ್ರಣಕ್ಕಾಗಿ ನಾಗಾಲ್ಯಾಂಡ್‌ನ ಮನವಿ
ತನ್ನ ನಿರ್ಣಯದಲ್ಲಿ, ನಾಗಾಲ್ಯಾಂಡ್‌ನ 60 ಸದಸ್ಯರ ವಿಧಾನಸಭೆಯು ಗಡಿ ಪ್ರದೇಶಗಳ ನಿವಾಸಿಗಳನ್ನು ಸಂಪರ್ಕಿಸಿದ ನಂತರ ಗಡಿಯಾಚೆಗಿನ ಚಲನೆಗೆ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ನಿಯಮಾವಳಿಗಳನ್ನು ರೂಪಿಸುವಲ್ಲಿ ಗ್ರಾಮ ಸಭೆಯ ಅಧಿಕಾರಿಗಳನ್ನು ಒಳಗೊಳ್ಳುವ ಮಹತ್ವವನ್ನು ಅದು ಒತ್ತಿಹೇಳಿತು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ, ಟಿಎಂಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ
ಉಪಮುಖ್ಯಮಂತ್ರಿ ಯಾಂತುಂಗೋ ಪ್ಯಾಟನ್ ನಿರ್ಣಯ ಮಂಡಿಸಿದ್ದು ಅಂತರರಾಷ್ಟ್ರೀಯ ಗಡಿಯ ಎರಡೂ ಬದಿಗಳಲ್ಲಿ ವಾಸಿಸುವ ನಾಗಾ ಜನರು ಹಂಚಿಕೊಂಡಿರುವ ಆಳವಾದ ಐತಿಹಾಸಿಕ, ಸಾಮಾಜಿಕ, ಬುಡಕಟ್ಟು ಮತ್ತು ಆರ್ಥಿಕ ಸಂಪರ್ಕಗಳನ್ನು ಎತ್ತಿ ತೋರಿಸಿದರು. ಎಫ್‌ಎಂಆರ್ ರದ್ದು ಮತ್ತು ಗಡಿ ಬೇಲಿ ನಿರ್ಧಾರವು ಈ ಹಳೆಯ ಸಂಬಂಧಗಳನ್ನು ತೀವ್ರವಾಗಿ ಅಡ್ಡಿಪಡಿಸಬಹುದು ಎಂದು ಅಸೆಂಬ್ಲಿ ಕಳವಳ ವ್ಯಕ್ತಪಡಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sat, 2 March 24