ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್‌ನಿಂದ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಹೊಸ ಬೆದರಿಕೆಯ ಬಂದಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಆರ್ಟಿಕಲ್ 370 ರದ್ದತಿಯ ನಂತರ ಚೊಚ್ಚಲ ಚುನಾವಣೆಗೆ ಮುಂದಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ಪಕ್ಷವು ಕಾಶ್ಮೀರಿ ಪಂಡಿತರನ್ನು ಬಲಿಪಶುಗಳು ಮಾಡುತ್ತಿದೆ ಎಂದು ಆರೋಪಿಸಿದರು .
ಇದು ಕೇವಲ ಚುನಾವಣಾ ಗಮಿಕ್ ಅಷ್ಟೇ, ಈ ವಿಷಯವನ್ನಿಟ್ಟುಕೊಂಡು ಕಾಶ್ಮೀರಿ ಪಂಡಿತರ ಮತ ಪಡೆಯಲು ಇದೆಲ್ಲಾ ನಾಟಕವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕಳೆದ ವರ್ಷದಿಂದ ನಾಗರಿಕ ದಾಳಿಗಳ ಹೆಚ್ಚಳದ ಕುರಿತು ಬಿಜೆಪಿ ಆಡಳಿತದ ಬಗ್ಗೆ ನಿರಂತರವಾಗಿ ಟೀಕಿಸುತ್ತಿರುವ ಅಬ್ದುಲ್ಲಾ, ಕಾಶ್ಮೀರಿ ಪಂಡಿತರ ಬೆದರಿಕೆಯನ್ನು ತಟಸ್ಥಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು.
ಮತ್ತಷ್ಟು ಓದಿ: ಕಾಶ್ಮೀರ ಪಂಡಿತರಿಗೆ ಭಯೋತ್ಪಾದರಿಂದ ಮತ್ತೆ ಜೀವ ಬೆದರಿಕೆ, ಹಿಟ್ ಲಿಸ್ಟ್ ಬಿಡುಗಡೆ
ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಸರ್ವಪಕ್ಷ ಸಭೆ ಕರೆಯಬೇಕು. ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡಲು ಸಾಧ್ಯವಾಗದಿದ್ದರೆ ಕುರಿಮರಿಗಳನ್ನು ಬಲಿ ಕೊಡಬೇಡಿ. ಕಾಶ್ಮೀರಿ ಪಂಡಿತ್ ನೌಕರರು ಕಣಿವೆಯಲ್ಲಿ ಮರಳಲು ಮತ್ತು ಕರ್ತವ್ಯವನ್ನು ಪುನರಾರಂಭಿಸಲು ಒತ್ತಾಯಿಸಬಾರದು ಎಂದು ಅವರು ಹೇಳಿದರು.
ಇತ್ತೀಚಿನ ವಾರಗಳಲ್ಲಿ, ಕೇಂದ್ರಾಡಳಿತ ಪ್ರದೇಶದ ಉಗ್ರಗಾಮಿ ಗುಂಪುಗಳು ಕಾಶ್ಮೀರಿ ಪಂಡಿತರ ವಿರುದ್ಧ ಹಿಂಸಾಚಾರವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿವೆ.
ಭಯೋತ್ಪಾದಕ ಸಂಘಟನೆಗಳಿಂದ ಮಾರಣಾಂತಿಕ ಬೆದರಿಕೆಗಳನ್ನು ಎದುರಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರು, ಸರ್ಕಾರಿ ನೌಕರರು ಕಾಶ್ಮೀರ ಕಣಿವೆಯಿಂದ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯ ಸದಾ ಸಂತ್ರಸ್ತರ ನಾಟಕವಾಡಿದೆ ಎಂದು ಕಿಡಿಕಾರಿರುವ ಲಷ್ಕರ್ ಎ ತೊಯ್ಬಾದ ಸೋದರ ಸಂಘಟನೆ ದಿ ರೆಸಿಸ್ಟೆನ್ಸ್ ಫೋರ್ಸ್ ಎಂದ ಉಗ್ರ ಸಂಘಟನೆ, ಪ್ರಧಾನಿ ಪ್ಯಾಕೇಜ್‌ನಡಿ ಸರ್ಕಾರಿ ಉದ್ಯೋಗ ಪಡೆದಿರುವ 6 ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಹಾಕಿದೆ. ಜೊತೆಗೆ ದೇಶದ್ರೋಹಿಗಳ ನೆತ್ತರು ಹರಿಸುವುದು ಖಚಿತ ಎಂದು ಎಚ್ಚರಿಸಿದೆ. ಈ ಕುರಿತು ಬೆದರಿಕೆ ಪತ್ರ ಪ್ರಕಟಿಸಿರುವ ಸಂಘಟನೆ, ಅದರಲ್ಲಿ 6 ಸರ್ಕಾರಿ ಉದ್ಯೋಗಿಗಳ ಹೆಸರನ್ನು ಪ್ರಕಟಿಸಿದೆ.
ಈ ಪಟ್ಟಿಯು ಪ್ರಧಾನಿ ಪ್ಯಾಕೇಜ್ ದೂತರಾಗಿರುವ ವಲಸಿಗ ಪಂಡಿತರ ಪರ ಸಹಾನುಭೂತಿ ಹೊಂದಿರುವವರ ಕಣ್ಣು ತೆರೆಸಬೇಕು. ಈ ವಲಸಿಗ ಕಾಶ್ಮೀರಿ ಪಂಡಿತರು 1990ರ ಸಮಯದಲ್ಲಿ ಗುಪ್ತಚರ ಬ್ಯೂರೋದ ಪರವಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕೇಂದ್ರ ಸರ್ಕಾರದ ದೂತರಂತೆ, ಸಂಘ ಪರಿವಾರದ ಅಜೆಂಡಾ ಜಾರಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ