LAC ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾಕ್ಕೆ ಅವಕಾಶ ನೀಡುವುದಿಲ್ಲ: ಜೈಶಂಕರ್
ವಾಸ್ತವಿಕ ಗಡಿ ನಿಯಂತ್ರಣ ರೇಖೆ(LAC)ಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾಗೆ ಭಾರತ ಬಿಡುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ(LAC)ಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾಗೆ ಭಾರತ ಬಿಡುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ನಿಯೋಜಿಸಲಾದ ಭಾರತೀಯ ಸೇನೆಯ ಪಾತ್ರದ ಬಗ್ಗೆ ಮಾತನಾಡಿದರು.
ಇಂದು, ಚೀನಾದ ಗಡಿಯಲ್ಲಿ ನಾವು ಎಂದಿಗೂ ಹೊಂದಿರದ ಸೇನೆಯ ನಿಯೋಜನೆ ಮಾಡಿದ್ದೇವೆ. ಚೀನಾದ ಆಕ್ರಮಣವನ್ನು ಎದುರಿಸಲು ಸೇನೆಯನ್ನು ಸಿದ್ಧಪಡಿಸಲಾಗಿದೆ, ಏಕಪಕ್ಷೀಯವಾಗಿ LAC ಅನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಕೈಗೂಡದಂತೆ ಮಾಡಲು ಸೇನೆಯನ್ನು ನಿಯೋಜಿಸಲಾಗಿದೆ.
ಮತ್ತಷ್ಟು ಓದಿ: ಚೀನಾದ ಜತೆಗಿನ ಗಡಿ ಪರಿಸ್ಥಿತಿ ಕುರಿತು ಕೇಂದ್ರದ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ LAC ಉದ್ದಕ್ಕೂ ಇರುವ ಪ್ರದೇಶವು ಸೂಕ್ಷ್ಮ ವಲಯವಾಗಿದ್ದು, 2006ರಿಂದ ಭಾರತ ಮತ್ತು ಚೀನಾ ಸೇನೆ ಗಸ್ತು ತಿರುಗುತ್ತಲೇ ಇವೆ. ಆದರೆ 2022ರ ಡಿಸೆಂಬರ್ 9 ರಂದು ಚೀನೀ ಸೈನಿಕರು ತವಾಂಗ್ ಸೆಕ್ಟರ್‌ನಲ್ಲಿ LAC ಬಳಿ ಪ್ರವೇಶಸಿದ್ದರು. ಇದರಿಂದ ಕೋಪಗೊಂಡ ಭಾರತೀಯ ಸೈನಿಕರು ಮುನ್ನುಗ್ಗಿದ್ದರು.
ಈ ವೇಳೆ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿತ್ತು, ಭಾರತೀಯ ಸೈನಿಕರು ಚೀನಾ ಸೈನಿಕರ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿದ್ದರು. ಜೂನ್ 15, 2020ರ ಘಟನೆಯ ನಂತರ ಮೊದಲ ಬಾರಿಗೆ ನಡೆದ ಘರ್ಷಣೆ ಇದಾಗಿದೆ. 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ PLA ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ