G20 Summit: ನಾಯಕರ ಘೋಷಣೆಗೆ ಜಿ20 ಒಮ್ಮತ: ಪ್ರಧಾನಿ ಮೋದಿ

|

Updated on: Sep 09, 2023 | 4:40 PM

ನನಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ನಮ್ಮ ತಂಡದ ಕಠಿಣ ಪರಿಶ್ರಮದಿಂದಾಗಿ, ನವದೆಹಲಿ ಜಿ 20 ನಾಯಕರ ಶೃಂಗಸಭೆ ಘೋಷಣೆಯ ಬಗ್ಗೆ ಒಮ್ಮತ ವ್ಯಕ್ತವಾಗಿದೆ. ಈ ನಾಯಕತ್ವದ ಘೋಷಣೆಯನ್ನು ಅಳವಡಿಸಿಕೊಳ್ಳುವುದು ನನ್ನ ಪ್ರಸ್ತಾಪವಾಗಿದೆ. ನಾನು ಈ ಘೋಷಣೆಯನ್ನು ಅಳವಡಿಸಿಕೊಳ್ಳಿಸುವುದಾಗಿ ಘೋಷಿಸುತ್ತೇನೆ. ಈ ಸಂದರ್ಭದಲ್ಲಿ, ನಾನು ಅದಕ್ಕಾಗಿ ಶ್ರಮಿಸಿದ ಮತ್ತು ಅದನ್ನು ಸಾಧ್ಯವಾಗಿಸಿದ ನನ್ನ ಶೆರ್ಪಾ, ಸಚಿವರನ್ನು ಅಭಿನಂದಿಸುತ್ತೇನೆ ಎಂದ ಮೋದಿ

G20 Summit: ನಾಯಕರ ಘೋಷಣೆಗೆ ಜಿ20 ಒಮ್ಮತ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ದೆಹಲಿ ಸೆಪ್ಟೆಂಬರ್ 09: ನಾಯಕರ ಘೋಷಣೆಗೆ ಜಿ20 ಒಮ್ಮತವನ್ನು ಸ್ವೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ಎಲ್ಲಾ ತಂಡಗಳ ಕಠಿಣ ಪರಿಶ್ರಮದಿಂದ ನಾವು ಜಿ20 ನಾಯಕರ ಶೃಂಗಸಭೆಯ (G20 Summit) ಘೋಷಣೆಯ ಬಗ್ಗೆ ಒಮ್ಮತವನ್ನು ಪಡೆದಿದ್ದೇವೆ. ಈ ಘೋಷಣೆಯನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದ್ದೇವೆ ಎಂದು ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನನಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ನಮ್ಮ ತಂಡದ ಕಠಿಣ ಪರಿಶ್ರಮದಿಂದಾಗಿ, ನವದೆಹಲಿ ಜಿ 20 ನಾಯಕರ ಶೃಂಗಸಭೆ ಘೋಷಣೆಯ ಬಗ್ಗೆ ಒಮ್ಮತ ವ್ಯಕ್ತವಾಗಿದೆ. ಈ ನಾಯಕತ್ವದ ಘೋಷಣೆಯನ್ನು ಅಳವಡಿಸಿಕೊಳ್ಳುವುದು ನನ್ನ ಪ್ರಸ್ತಾಪವಾಗಿದೆ. ನಾನು ಈ ಘೋಷಣೆಯನ್ನು ಅಳವಡಿಸಿಕೊಳ್ಳಿಸುವುದಾಗಿ ಘೋಷಿಸುತ್ತೇನೆ. ಈ ಸಂದರ್ಭದಲ್ಲಿ, ನಾನು ಅದಕ್ಕಾಗಿ ಶ್ರಮಿಸಿದ ಮತ್ತು ಅದನ್ನು ಸಾಧ್ಯವಾಗಿಸಿದ ನನ್ನ ಶೆರ್ಪಾ, ಸಚಿವರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ G20 ಶೆರ್ಪಾ, ಅಮಿತಾಬ್ ಕಾಂತ್ ಅ   ನವದೆಹಲಿಯ ನಾಯಕರ ಘೋಷಣೆಯು “ಬಲವಾದ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, ಎಸ್ ಡಿಜಿ ಗಳ (ಸುಸ್ಥಿರ ಅಭಿವೃದ್ಧಿ ಗುರಿ) ಪ್ರಗತಿಯನ್ನು ವೇಗಗೊಳಿಸುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದಸ 21 ನೇ ಶತಮಾನದಲ್ಲಿ ಬಹುಪಕ್ಷೀಯ ಸಂಸ್ಥೆಗಳು ಮತ್ತು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸುವುದು ಮೊದಲಾದ ಇ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.


ನಾಯಕರ ಘೋಷಣೆಯ ಮೇಲೆ G20 ರಾಜ್ಯಗಳು ಒಮ್ಮತವನ್ನು ಹೇಗೆ ತಲುಪಿದವು ಎಂಬುದರ ಕುರಿತು ಯಾವುದೇ ವಿವರಗಳು ತಕ್ಷಣವೇ ಲಭ್ಯವಿಲ್ಲ, ವಿಶೇಷವಾಗಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಉಲ್ಲೇಖಿಸುವ ಪ್ಯಾರಾಗ್ರಾಫ್ ಬಗ್ಗೆ ಯಾವುದೇ ಮಾಹಿತಿ ಸದ್ಯ ಲಭ್ಯವಾಗಿಲ್ಲ.

ಇದನ್ನೂ ಓದಿ: ಜಿ20 ನಾಯಕರ ಘೋಷಣೆಯಲ್ಲಿ ಉಕ್ರೇನ್ ಬಿಕ್ಕಟ್ಟನ್ನು ವಿವರಿಸಲು ಹೊಸ ಪ್ಯಾರಾಗ್ರಾಫ್ ಪ್ರಸ್ತಾಪ ಮಾಡಿದ ಭಾರತ

ಘೋಷಣೆಗೆ ಒಮ್ಮತ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿಯವರ ಕಚೇರಿ, ನರೇಂದ್ರ ಮೋದಿಯರ ಅವರ ಮಾನವ ಕೇಂದ್ರಿತ ಜಾಗತೀಕರಣ ಮತ್ತು ಗ್ಲೋಬಲ್ ಸೌತ್ ಬಗ್ಗೆ ನಮ್ಮ ಕಾಳಜಿಗಳು ಅನುರಣನ ಮತ್ತು ಮನ್ನಣೆಯನ್ನು ಕಂಡುಕೊಂಡಿವೆ. ಅವರ ಸಹಕಾರ ಮತ್ತು ಬೆಂಬಲಕ್ಕಾಗಿ ಎಲ್ಲಾ G20 ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sat, 9 September 23