ಜಿ20 ನಾಯಕರ ಘೋಷಣೆಯಲ್ಲಿ ಉಕ್ರೇನ್ ಬಿಕ್ಕಟ್ಟನ್ನು ವಿವರಿಸಲು ಹೊಸ ಪ್ಯಾರಾಗ್ರಾಫ್ ಪ್ರಸ್ತಾಪ ಮಾಡಿದ ಭಾರತ

ಉಕ್ರೇನ್ ಬಿಕ್ಕಟ್ಟಿನ ಪ್ಯಾರಾಗ್ರಾಫ್​​ನಲ್ಲಿ, ಈ ಸಮಸ್ಯೆಯನ್ನು "ಉಕ್ರೇನ್ ನಲ್ಲಿ ಯುದ್ಧ" ಅಥವಾ "ಉಕ್ರೇನ್ ವಿರುದ್ಧದ ಯುದ್ಧ" ಎಂದು ಉಲ್ಲೇಖಿಸಬೇಕೆ ಎಂಬುದರ ಕುರಿತು ಭಿನ್ನಾಭಿಪ್ರಾಯಗಳಿವೆ. G20 ಒಮ್ಮತದ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಒಬ್ಬ ಸದಸ್ಯನ ಆಕ್ಷೇಪಣೆಗಳು ಒಪ್ಪಂದಕ್ಕೆ ಅಡ್ಡಿಯಾಗಬಹುದು ಎಂದು ವಿಷಯದ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ

ಜಿ20 ನಾಯಕರ ಘೋಷಣೆಯಲ್ಲಿ ಉಕ್ರೇನ್ ಬಿಕ್ಕಟ್ಟನ್ನು ವಿವರಿಸಲು ಹೊಸ ಪ್ಯಾರಾಗ್ರಾಫ್ ಪ್ರಸ್ತಾಪ ಮಾಡಿದ ಭಾರತ
G20 ಶೃಂಗಸಭೆಯಲ್ಲಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 09, 2023 | 4:13 PM

ದೆಹಲಿ ಸೆಪ್ಟೆಂಬರ್ 09: ಜಿ20 ನಾಯಕರ (G20 Summit) ಘೋಷಣೆಯಲ್ಲಿ ಉಕ್ರೇನ್  ಬಿಕ್ಕಟ್ಟನ್ನು (Ukraine crisis) ಉಲ್ಲೇಖಿಸಲು ಹೊಸ ಪಠ್ಯವನ್ನು ಜಿ20 ಸದಸ್ಯ ರಾಷ್ಟ್ರಗಳ ನಡುವೆ ಭಾರತವು (India) ಶನಿವಾರ ಪ್ರಸಾರ ಮಾಡಿದೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಮಾತನಾಡುವ ಪ್ರಯತ್ನ ಇದಾಗಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಶುಕ್ರವಾರ ಸಿದ್ಧಪಡಿಸಲಾದ ಘೋಷಣೆಯ ಕರಡು ಪ್ರತಿಯನ್ನು ಹೆಚ್ಚಿನ G20 ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರಲ್ಲಿ”ಭೌಗೋಳಿಕ ರಾಜಕೀಯ ಪರಿಸ್ಥಿತಿ” ಅಥವಾ ಉಕ್ರೇನ್ ಬಿಕ್ಕಟ್ಟಿನ ಪ್ಯಾರಾಗ್ರಾಫ್ ಅನ್ನು ಖಾಲಿ ಬಿಟ್ಟಿದೆ ಎಂದು G20 ಸದಸ್ಯ ರಾಷ್ಟ್ರ ಮತ್ತು G7 ಸದಸ್ಯ ರಾಷ್ಟ್ರದ ಜನರು ಹೇಳಿದ್ದಾರೆ.

G20 ರಾಜ್ಯಗಳ ಸಮಾಲೋಚಕರು ಕರಡು ಪ್ರತಿಯಲ್ಲಿ 75 ಇತರ ಪ್ಯಾರಾಗಳಲ್ಲಿನ ವಿಷಯಗಳನ್ನು ಒಪ್ಪಿದ್ದಾರೆ. ಇದರಲ್ಲಿ ಹವಾಮಾನ ಪರಿವರ್ತನೆಗೆ ಹಣಕಾಸು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಸುಧಾರಣೆ ಮತ್ತು ಕ್ರಿಪ್ಟೋಕರೆನ್ಸಿಯ ನಿಯಂತ್ರಣದಂತಹ ವಿಷಯಗಳು ಸೇರಿವೆ ಎಂದು ಮೂಲಗಳು ಹೇಳಿವೆ.

ಶೆರ್ಪಾಗಳು ಅಥವಾ G20 ನಾಯಕರ ವೈಯಕ್ತಿಕ ಪ್ರತಿನಿಧಿಗಳು ಗುರುವಾರ ಮತ್ತು ಶುಕ್ರವಾರದಂದು ಹಲವಾರು ಅಧಿವೇಶನಗಳ ಹೊರತಾಗಿಯೂ ಉಕ್ರೇನ್‌ ಬಿಕ್ಕಟ್ಟಿನ ಪ್ಯಾರಾಗ್ರಾಫ್‌ನಲ್ಲಿ ಒಪ್ಪಂದವನ್ನು ತಲುಪಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 6 ರಂದು ಮಾನೇಸರ್‌ನಲ್ಲಿ ನಾಲ್ಕನೇ ಮತ್ತು ಅಂತಿಮ ಶೆರ್ಪಾಗಳ ಸಭೆಯ ಮುಕ್ತಾಯದ ನಂತರ ಈ ಅಧಿವೇಶನಗಳನ್ನು ನಡೆಸಲಾಯಿತು.

ಭಾರತ ಈ (ಶನಿವಾರ) ಬೆಳಿಗ್ಗೆ ಉಕ್ರೇನ್ ವಿಷಯದ ಕರಡು ಪ್ಯಾರಾಗ್ರಾಫ್ ಅನ್ನು ಇತರ G20 ಸದಸ್ಯರ ನಡುವೆ ಪ್ರಸಾರ ಮಾಡಿತು. ಇದನ್ನು ಈಗ ಇತರ ರಾಜ್ಯಗಳು ಪರಿಗಣಿಸುತ್ತಿವೆ. ಕೆಲವು ದೇಶಗಳಿಗೆ ಇದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿ7 ರಾಷ್ಟ್ರದ ನಾಯಕರೊಬ್ಬರು ಹೇಳಿದ್ದಾರೆ. ಈ ಚರ್ಚೆಗಳನ್ನು “ಕಠಿಣ” ಎಂದು ವಿವರಿಸಿದ್ದು ,ಈ ಕರಡು ನಾಯಕರ ಘೋಷಣೆಯ ಮೇಲೆ ಒಮ್ಮತವನ್ನು ಹಿಡಿದಿಟ್ಟುಕೊಳ್ಳುವ ಪಮುಖ ವಿಷಯವಾಗಿ ಉಕ್ರೇನ್ ಬಿಕ್ಕಟ್ಟು ಉಳಿದಿದೆ ಎಂದು ಅವರು ಹೇಳಿದ್ದಾರೆ.

ಶೃಂಗಸಭೆಯ ಯಶಸ್ವಿ ಮುಕ್ತಾಯವನ್ನು ಖಚಿತಪಡಿಸಿಕೊಳ್ಳಲು ಕರಡು ಪ್ಯಾರಾಗ್ರಾಫ್ ಅನ್ನು ಎಲ್ಲಾ ರಾಷ್ಟ್ರಗಳು ಅಂಗೀಕರಿಸುವಂತೆ ಭಾರತದ ಕಡೆಯವರು ಒತ್ತಾಯಿಸಿದ್ದಾರೆ, ಆದರೆ ಚರ್ಚೆಗಳನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು  ಹೇಳಿವೆ.

ಇದನ್ನೂ ಓದಿ:  G20 summit: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ

ಉಕ್ರೇನ್ ಬಿಕ್ಕಟ್ಟಿನ ಪ್ಯಾರಾಗ್ರಾಫ್​​ನಲ್ಲಿ, ಈ ಸಮಸ್ಯೆಯನ್ನು “ಉಕ್ರೇನ್ ನಲ್ಲಿ ಯುದ್ಧ” ಅಥವಾ “ಉಕ್ರೇನ್ ವಿರುದ್ಧದ ಯುದ್ಧ” ಎಂದು ಉಲ್ಲೇಖಿಸಬೇಕೆ ಎಂಬುದರ ಕುರಿತು ಭಿನ್ನಾಭಿಪ್ರಾಯಗಳಿವೆ. G20 ಒಮ್ಮತದ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಒಬ್ಬ ಸದಸ್ಯನ ಆಕ್ಷೇಪಣೆಗಳು ಒಪ್ಪಂದಕ್ಕೆ ಅಡ್ಡಿಯಾಗಬಹುದು ಎಂದು ವಿಷಯದ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ

ಮತ್ತೊಂದು ಬೆಳವಣಿಗೆಯಲ್ಲಿ, 2026 ರಲ್ಲಿ ಜಿ 20 ನ ಅಧ್ಯಕ್ಷ ಸ್ಥಾನವನ್ನು ಯುಎಸ್ ಹೊಂದಿರುವ ಪಠ್ಯದಲ್ಲಿನ ಉಲ್ಲೇಖದ ವಿರುದ್ಧ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಕರಡು ಘೋಷಣೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಯಾವುದೇ ಉಲ್ಲೇಖದ ಬಗ್ಗೆ ರಷ್ಯಾ ಮತ್ತು ಚೀನಾಗೆ ಆಕ್ಷೇಪವಿದೆ. ನೆಲದ ಮೇಲಿನ ಪರಿಸ್ಥಿತಿ ಬದಲಾಗಿರುವುದರಿಂದ ಉಕ್ರೇನ್ ಬಿಕ್ಕಟ್ಟನ್ನು ಉಲ್ಲೇಖಿಸಲು ಕಳೆದ ವರ್ಷದ ಜಿ 20 ಶೃಂಗಸಭೆಯಲ್ಲಿ ನಾಯಕರ ಘೋಷಣೆಯಲ್ಲಿ ಬಳಸಲಾದ ಪಠ್ಯವನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದೆ. ಅದೇ ವೇಳೆ G20 ಒಂದು ಆರ್ಥಿಕ ವೇದಿಕೆಯಾಗಿದೆ. ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ತೆಗೆದುಕೊಳ್ಳಬಾರದು ಎಂಬ ಆಧಾರದ ಮೇಲೆ ಉಕ್ರೇನ್ ಯುದ್ಧದ ಯಾವುದೇ ಉಲ್ಲೇಖವನ್ನು ಚೀನಾ ವಿರೋಧಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Sat, 9 September 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು