ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಸಂದೇಶ

| Updated By: ರಶ್ಮಿ ಕಲ್ಲಕಟ್ಟ

Updated on: Mar 16, 2022 | 8:27 PM

ಆಟ ಇನ್ನೂ ಮುಗಿದಿಲ್ಲ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಮಾಜವಾದಿ ಪಕ್ಷದಂತಹ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಸಂದೇಶ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ದೇಶದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಇತ್ತೀಚಿನ ಗೆಲುವು ಸಾಧಿಸಿದ್ದರೂ, ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ (Presidential Polls) ಗೆಲುವು ಸಾಧಿಸುವುದು ಪಕ್ಷಕ್ಕೆ ಸುಲಭವಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಹೇಳಿದ್ದಾರೆ. “ಆಟ ಇನ್ನೂ ಮುಗಿದಿಲ್ಲ” ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ದೇಶದಲ್ಲಿ ಒಟ್ಟು ಶಾಸಕರ ಅರ್ಧದಷ್ಟು ಶಾಸಕರನ್ನು ಹೊಂದಿಲ್ಲದವರು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸಮಾಜವಾದಿ ಪಕ್ಷದಂತಹ ಪಕ್ಷಗಳು ಪ್ರಬಲವಾಗಿರುವುದರಿಂದ ದೊಡ್ಡದಾಗಿ ಮಾತನಾಡಬಾರದು ಎಂದು ಹೇಳಿದರು.  “ಈ ಬಾರಿ ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅಷ್ಟು ಸುಲಭವಲ್ಲ. ಅವರು ದೇಶದ ಒಟ್ಟು ಶಾಸಕರ ಅರ್ಧದಷ್ಟು ಶಾಸಕರನ್ನು ಹೊಂದಿಲ್ಲ. ವಿರೋಧ ಪಕ್ಷಗಳು ಒಟ್ಟಾಗಿ ರಾಷ್ಟ್ರದಾದ್ಯಂತ ಹೆಚ್ಚು ಶಾಸಕರನ್ನು ಹೊಂದಿವೆ,” ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು. “ಆಟ ಇನ್ನೂ ಮುಗಿದಿಲ್ಲ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಮಾಜವಾದಿ ಪಕ್ಷದಂತಹ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿವೆ” ಎಂದು ಮಮತಾ ಹೇಳಿದರು. ಸಂಸತ್​​ನ ಚುನಾಯಿತ ಸದಸ್ಯರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳನ್ನು ಒಳಗೊಂಡಿರುವ ಎಲೆಕ್ಟೋರಲ್ ಕಾಲೇಜ್ ಮೂಲಕ ಪರೋಕ್ಷವಾಗಿ ರಾಷ್ಟ್ರಪತಿ ಚುನಾವಣೆಗಳನ್ನು ನಡೆಸಲಾಗುತ್ತದೆ.

1971 ರಲ್ಲಿ ರಾಜ್ಯದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವ ಸೂತ್ರದ ಮೂಲಕ ರಾಜ್ಯ ಶಾಸಕಾಂಗಗಳಿಂದ ಪ್ರತಿ ಮತದಾರನ ಮತಗಳ ಸಂಖ್ಯೆ ಮತ್ತು ಮೌಲ್ಯವನ್ನು ರೂಪಿಸಲಾಗಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಾಳಯವನ್ನು ಎದುರಿಸಲು ಬಿಜೆಪಿ ವಿರೋಧಿ ರಂಗವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವಬ್ಯಾನರ್ಜಿ, ದೇಶವು ಕೇಂದ್ರದಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಿದೆ ಎಂದು ಹೇಳಿದರು.

ಗೃಹ ವ್ಯವಹಾರಗಳ ಬಜೆಟ್ ಚರ್ಚೆಯಲ್ಲಿ ಮಾತನಾಡುವಾಗ ಮಮತಾ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ರಾಜ್ಯ ಪೊಲೀಸರನ್ನು ಶ್ಲಾಘಿಸಿದರು ಮತ್ತು ರಾಜಕೀಯ ಹಿಂಸಾಚಾರದ ಆರೋಪಗಳನ್ನು “ವಿರೋಧ ಪಕ್ಷ ಹರಡಿದ ಸುಳ್ಳುಗಳು” ಎಂದು ತಳ್ಳಿಹಾಕಿದರು.

ಕಾಂಗ್ರೆಸ್ ಮತ್ತು ತೃಣಮೂಲದ ಇಬ್ಬರು ಕೌನ್ಸಿಲರ್‌ಗಳ ಇತ್ತೀಚಿನ ಹತ್ಯೆಗಳನ್ನು ಖಂಡಿಸಿದ ಬ್ಯಾನರ್ಜಿ, ಪೊಲೀಸರು ವಿಷಯಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳ ರಾಜಕೀಯ ಸಂಬಂಧವನ್ನು ಪರಿಗಣಿಸದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಮರ್ಕಝ್ ನಿಜಾಮುದ್ದೀನ್ ಮಸೀದಿಯನ್ನು ಪುನಃ ತೆರೆಯಲು ಅನುಮತಿ ನೀಡಿದ ದೆಹಲಿ ಪೊಲೀಸ್