AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆ ಮುಸ್ಲಿಂ ಧರ್ಮದವಳೆಂಬ ಕಾರಣಕ್ಕೆ ಪೂರಕ್ಕಲಿ ಕಲಾವಿದನಿಗೆ ನಿಷೇಧ ಹೇರಿದ ದೇವಸ್ಥಾನ

ಕಣ್ಣೂರಿನ ನಿವಾಸಿಯಾಗಿರುವ ಪೂರಕ್ಕಲಿ ನರ್ತಕ ವಿನೋದ್ ಪಣಿಕ್ಕರ್ ಅವರ ಮನೆಯಲ್ಲಿ ಮುಸ್ಲಿಂ ಮಹಿಳೆ ವಾಸವಾಗಿದ್ದಾರೆ ಎಂದು ಆರೋಪಿಸಿ ಕುಣಿಯಾನ್ ಭಗವತಿ ದೇವಸ್ಥಾನ ಸಮಿತಿಯು ಆ ಮನೆಯವರಿಗೆ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದೆ.

ಸೊಸೆ ಮುಸ್ಲಿಂ ಧರ್ಮದವಳೆಂಬ ಕಾರಣಕ್ಕೆ ಪೂರಕ್ಕಲಿ ಕಲಾವಿದನಿಗೆ ನಿಷೇಧ ಹೇರಿದ ದೇವಸ್ಥಾನ
ಪೂರಕ್ಕಳಿ ನೃತ್ಯ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 16, 2022 | 8:00 PM

Share

ತಿರುವನಂತಪುರಂ: ಕೇರಳದ ಮಲಬಾರ್‌ನಲ್ಲಿನ (Malabar) ದೇವಸ್ಥಾನದ ಅರ್ಚಕರೊಬ್ಬರ ಮಗ ಮುಸ್ಲಿಂ ಮಹಿಳೆಯನ್ನು ಮದುವೆಯಾದ ಆರೋಪದ ಮೇಲೆ ದೇವಸ್ಥಾನದ ಆಡಳಿತವು ಪೂರಕ್ಕಳಿ  (Poorakkali) ಕಲಾವಿದನಿಗೆ ದೇವಾಲಯಗಳಲ್ಲಿ ಪ್ರದರ್ಶನ ನೀಡುವುದನ್ನು ನಿಷೇಧಿಸಿದೆ. ಕಣ್ಣೂರಿನ ನಿವಾಸಿಯಾಗಿರುವ ಪೂರಕ್ಕಲಿ ನರ್ತಕ ವಿನೋದ್ ಪಣಿಕ್ಕರ್ ಅವರ ಮನೆಯಲ್ಲಿ ಮುಸ್ಲಿಂ ಮಹಿಳೆ ವಾಸವಾಗಿದ್ದಾರೆ ಎಂದು ಆರೋಪಿಸಿ ಕುಣಿಯಾನ್ ಭಗವತಿ ದೇವಸ್ಥಾನ ಸಮಿತಿಯು ಆ ಮನೆಯವರಿಗೆ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದೆ.

ಪೂರಕ್ಕಲಿ ಎಂಬುದು ಕೇರಳದ ಪೂರಂ ದೇವಸ್ಥಾನದ ಉತ್ಸವದ ಸಮಯದಲ್ಲಿ ನಡೆಸಲಾಗುವ ಸಾಂಪ್ರದಾಯಿಕ ನೃತ್ಯದ ಆಚರಣೆಯಾಗಿದೆ. ಪೂರಕ್ಕಲಿ ಕಲಾವಿದರಾಗಿರುವ ವಿನೋದ್ ಪಣಿಕ್ಕರ್ ಅವರ ಸೊಸೆ ಬೇರೆ ಧರ್ಮದವಳು ಎಂಬ ಕಾರಣಕ್ಕೆ ಅವರಿಗೆ ದೇವಸ್ಥಾನದಲ್ಲಿ ಪೂರಕ್ಕಲಿ ನೃತ್ಯ ಪ್ರದರ್ಶನ ಮಾಡದಂತೆ ನಿಷೇಧ ಹೇರಲಾಗಿದ್ದು, ಅವರ ಬದಲಾಗಿ ಮತ್ತೊಬ್ಬ ಕಲಾವಿದರನ್ನು ನೇಮಕ ಮಾಡಲಾಗಿದೆ.

ದೇವಸ್ಥಾನದಿಂದ ನನ್ನ ಮೇಲೆ ನಿಷೇಧ ಹೇರಿದರೂ ನಾನು ನನ್ನ ಸೊಸೆಯನ್ನು ತಿರಸ್ಕರಿಸುವುದಿಲ್ಲ ಎಂದು ಪಣಿಕ್ಕರ್ ಹೇಳಿದ್ದಾರೆ. ಅವರ ಮಗನಿಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಪಣಿಕ್ಕರ್ ಅವರು ಈ ಅವಧಿಯಲ್ಲಿ ವಿವಿಧ ದೇವಾಲಯಗಳಲ್ಲಿ ಪೂರಕ್ಕಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕಣ್ಣೂರಿನ ಕರಿವೆಲ್ಲೂರಿನ ದೇವಸ್ಥಾನ ಪಣಕ್ಕರ್ ಅವರಿಗೆ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ ನೀಡದಂತೆ ನಿಷೇಧ ಹೇರಿದೆ.

ನನ್ನ ಸೊಸೆ ಬೇರೆ ಧರ್ಮದವಳಾಗಿದ್ದು, ಆಕೆ ನನ್ನ ಮನೆಯಲ್ಲಿದ್ದಾಗ ನಾನು ಧಾರ್ಮಿಕ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಸಮಿತಿಯ ಸದಸ್ಯರು ನನಗೆ ಹೇಳಿದ್ದಾರೆ. ಆಚರಣೆಯ ಸಮಯದಲ್ಲಿ ಅವಳನ್ನು ಬೇರೆ ಮನೆಗೆ ಸ್ಥಳಾಂತರಿಸಿ ಅಥವಾ ನನ್ನ ಸೊಸೆಯನ್ನು ಬೇರೆ ಕಡೆಗೆ ಕಳುಹಿಸಿ ಎಂದು ಅವರು ನನಗೆ ಹೇಳಿದರು. ಆದರೆ, ನಾನು ಅದಕ್ಕೆ ಒಪ್ಪಲಿಲ್ಲ. ನನ್ನ ಸೊಸೆಯನ್ನು ನಾನೀಗಾಗಲೇ ಸ್ವೀಕರಿಸಿದ್ದೇನೆ. ಆಕೆಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪಣಿಕ್ಕರ್ ಹೇಳಿದ್ದಾರೆ.

ಅದೇ ರೀತಿ, ಆ ದೇವಸ್ಥಾನದ ಅಧಿಕಾರಿಗಳು ದೇವಸ್ಥಾನದ ಆಚರಣೆಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು. ಹಿಂದೂಗಳಲ್ಲದವರು ವಾಸಿಸುವ ಮನೆಯಿಂದ ಆಚರಣೆಗಳನ್ನು ನಡೆಸಲು ಅವಕಾಶವಿಲ್ಲ. ಆತನ ಮೇಲೆ ನಾವು ಯಾವುದೇ ನಿಷೇಧ ಹೇರಿಲ್ಲ. ನಾವು ಮುಂದಿಟ್ಟ ಪ್ರಸ್ತಾವನೆಯನ್ನು ಸ್ವೀಕರಿಸಲು ಅವರು ನಿರಾಕರಿಸಿದರು. ಹೀಗಾಗಿ, ಅವರ ಬದಲಾಗಿ ಬೇರೆಯವರಿಗೆ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಮವಸ್ತ್ರದ ಮೇಲೆ ಹಿಜಾಬ್​ ನಿಷೇಧ; ಸರ್ಕಾರಗಳ ಸುತ್ತೋಲೆ ಹರಿದು ಹಾಕಿ ಕೇರಳದಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಯುವತಿಯರು

Shocking News: ನಾಯಿ ಬೊಗಳುತ್ತದೆ ಎಂದು ಚಾಕುವಿನಿಂದ ಇರಿದು ಕೊಲೆ!