Bank Holidays in March: ಬ್ಯಾಂಕ್ ಗ್ರಾಹಕರೇ ಗಮನಿಸಿ; ಮಾರ್ಚ್ 17ರಿಂದ 29ರವರೆಗೆ 7 ದಿನ ಬ್ಯಾಂಕ್ಗಳಿಗೆ ರಜೆ
ಬ್ಯಾಂಕ್ ರಜಾ ದಿನಗಳಲ್ಲಿ ಗ್ರಾಹಕರು ತಮ್ಮ ಪ್ರಮುಖ ಕೆಲಸವನ್ನು ಮುಗಿಸಲು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.
ನವದೆಹಲಿ: ಮಾರ್ಚ್ 17ರಿಂದ ಮಾರ್ಚ್ 29ರವರೆಗೆ 7 ದಿನಗಳ ಕಾಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (Banks) ಬಂದ್ ಆಗಲಿವೆ. ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ತಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಲು ಹೊರಡುವ ಮೊದಲು ಬ್ಯಾಂಕ್ ರಜೆಯ ದಿನಾಂಕಗಳನ್ನು ಗಮನಿಸುವುದು ಉತ್ತಮ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, ಮಾರ್ಚ್ 17ರಿಂದ 29ರ ನಡುವೆ ಐದು ದಿನ ರಜೆ ಇದೆ. ಕಾರ್ಮಿಕ ಸಂಘಟನೆಗಳ ಕರೆಗೆ ಮುಷ್ಕರದ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಎರಡು ಹೆಚ್ಚುವರಿ ದಿನಗಳು ಮುಚ್ಚಲ್ಪಡುತ್ತವೆ.
ಬ್ಯಾಂಕ್ ರಜಾ ದಿನಗಳಲ್ಲಿ ಗ್ರಾಹಕರು ತಮ್ಮ ಪ್ರಮುಖ ಕೆಲಸವನ್ನು ಮುಗಿಸಲು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು. ಇದಲ್ಲದೆ ಕೆಲವು ರಜಾ ದಿನಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸೀಮಿತವಾಗಿವೆ. ಅಂದರೆ ಖಾಸಗಿ ಸಾಲದಾತರ ಬ್ಯಾಂಕ್ ಶಾಖೆಗಳು ಈ ದಿನಗಳಲ್ಲಿ ತೆರೆದಿರುತ್ತವೆ.
ಹೋಲಿಕಾ ದಹನ್ ದಿನವಾದ್ದರಿಂದ ಮಾರ್ಚ್ 17ರಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ದೇಶದ ಹಲವು ಭಾಗಗಳಲ್ಲಿ ಹೋಳಿ ಅಥವಾ ಧುಲೇಟಿಗಾಗಿ ಮಾರ್ಚ್ 19ರಂದು ಬ್ಯಾಂಕ್ಗೆ ರಜೆ ಘೋಷಿಸಲಾಗಿದೆ. ಇದಲ್ಲದೆ, ಮಾರ್ಚ್ 20ರ ಭಾನುವಾರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಮುಂದಿನ ವಾರ ಅಂದರೆ ಮಾರ್ಚ್ 26 (ನಾಲ್ಕನೇ ಶನಿವಾರ) ಮತ್ತು ಮಾರ್ಚ್ 27 (ಭಾನುವಾರ) ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬ್ಯಾಂಕ್ ಮುಷ್ಕರದಿಂದಾಗಿ ಮಾರ್ಚ್ 28 ಮತ್ತು ಮಾರ್ಚ್ 29 ರಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮುಚ್ಚುವ ನಿರೀಕ್ಷೆಯಿದೆ.
ಇದನ್ನೂ ಓದಿ: BANK JOBS 2022: ಹಲವು ಬ್ಯಾಂಕ್ಗಳಲ್ಲಿದೆ ಉದ್ಯೋಗಾವಕಾಶ: ಇಲ್ಲಿದೆ ಸಂಪೂರ್ಣ ಮಾಹಿತಿ
ಅದ್ದೂರಿ ಮದುವೆಯಾಗಲು ಬ್ಯಾಂಕ್ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್!
Published On - 8:18 pm, Wed, 16 March 22