ಪೊಲೀಸ್ ಅಧಿಕಾರಿಯ ಪತಿ ವಾಹನಕ್ಕೆ ಗುದ್ದಿದ ಯುವಕ ಪ್ರಾಣ ಕಳೆದುಕೊಂಡ

ಹೈದ್ರಾಬಾದ್: ಎಸ್​ಐ ಕಿರುಕುಳ ತಾಳಲಾರದೆ ಕೆರೆಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಮುರುಳಿ, ವಿಜಯವಾಡದಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದ. ಹಗಲು ಕಾಲೇಜಲ್ಲಿ ಓದುತ್ತಾ ರಾತ್ರಿ ವೇಳೆ ಮುರುಳಿ ಟೀ ಸ್ಟಾಲ್ ನಡೆಸುತ್ತಿದ್ದ. ನಿನ್ನೆ ರಾತ್ರಿ ಬೈಕ್​ನಲ್ಲಿ ಮನೆಗೆ ಹೋಗುತ್ತಿದ್ದಾಗ ಮುರುಳಿಯ ಬೈಕ್ ಪಿಎಸ್​ವೈ ಪತಿಯ ವಾಹನಕ್ಕೆ ತಾಗಿದೆ. ಹೀಗಾಗಿ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಗನ್ನಾವರಂ ಮಹಿಳಾ ಪಿಎಸ್ಐ ನಾರಾಯಣಮ್ಮ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಕಿರುಕುಳ […]

ಪೊಲೀಸ್ ಅಧಿಕಾರಿಯ ಪತಿ ವಾಹನಕ್ಕೆ ಗುದ್ದಿದ ಯುವಕ ಪ್ರಾಣ ಕಳೆದುಕೊಂಡ
ಸಾಧು ಶ್ರೀನಾಥ್​

Updated on: Nov 18, 2019 | 5:43 PM

ಹೈದ್ರಾಬಾದ್: ಎಸ್​ಐ ಕಿರುಕುಳ ತಾಳಲಾರದೆ ಕೆರೆಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ ಮುರುಳಿ, ವಿಜಯವಾಡದಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದ. ಹಗಲು ಕಾಲೇಜಲ್ಲಿ ಓದುತ್ತಾ ರಾತ್ರಿ ವೇಳೆ ಮುರುಳಿ ಟೀ ಸ್ಟಾಲ್ ನಡೆಸುತ್ತಿದ್ದ. ನಿನ್ನೆ ರಾತ್ರಿ ಬೈಕ್​ನಲ್ಲಿ ಮನೆಗೆ ಹೋಗುತ್ತಿದ್ದಾಗ ಮುರುಳಿಯ ಬೈಕ್ ಪಿಎಸ್​ವೈ ಪತಿಯ ವಾಹನಕ್ಕೆ ತಾಗಿದೆ. ಹೀಗಾಗಿ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಗನ್ನಾವರಂ ಮಹಿಳಾ ಪಿಎಸ್ಐ ನಾರಾಯಣಮ್ಮ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಕಿರುಕುಳ ತಾಳಲಾರದೆ ಆತ್ಮಹತ್ಯೆ: 
ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದು ಮುರುಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೊದಲೇ ಸ್ನೇಹಿತರಿಗೆ ಫೋನ್ ಮಾಡಿ, ಆಡಿಯೋ ಕ್ಲಿಪ್ ಕಳುಹಿಸಿ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಇಂದು ಗನ್ನಾವರಂನ ಕೆರೆಯಲ್ಲಿ ವಿದ್ಯಾರ್ಥಿ ಮುರುಳಿ ಶವ ಪತ್ತೆಯಾಗಿದ್ದು, ಗನ್ನಾವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us