ಆಫ್ರಿಕಾ ಖಂಡದ ಅತೀ ಎತ್ತರದ ಮೌಂಟ್ ಕಿಲಿಮಾಂಜರೋ ಪರ್ವತ ಶಿಖರ ಏರುವ ಮೂಲಕ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಗೀತಾ ಸಮೋಟಾ ಹೊಸ ಸಾಹಸ ಮೆರೆದಿದ್ದಾರೆ. ಆಫ್ರಿಕಾದ ತಾಂಜಾನಿಯಾದಲ್ಲಿರುವ ಈ ಶಿಖರವನ್ನು ಅತೀ ವೇಗವಾಗಿ ಏರಿದ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಗೀತಾ ಸಮೋಟಾ ನಿರ್ಮಿಸಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಕೇಂದ್ರ ಭದ್ರತಾ ಪಡೆಯ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 16 ಸಾವಿರ ಅಡಿ ಎತ್ತರಕ್ಕೇರಿದ ಗೀತಾ ಸಮೋಟಾ ಭಾರತದ ತ್ರಿವರ್ಣ ಪಾತಾಕೆಯನ್ನು ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು.
ಮೌಂಟ್ ಕಿಲಿಮಾಂಜರೋ ಪರ್ವತ ಶಿಖರ ಮೂರು ಜ್ವಾಲಾಮುಖಿ ಶಂಕುಗಳನ್ನು ಹೊಂದಿದೆ. ಇದು ವಿಶ್ವದ ಅತಿ ಎತ್ತರದ ಏಕೈಕ ಮುಕ್ತ ಪರ್ವತ ಎಂಬುದು ವಿಶೇಷ. ಇದರ ಎತ್ತರ ಸಮುದ್ರ ಮಟ್ಟದಿಂದ 5,895 ಮೀಟರ್. ಹಾಗೆಯೇ ಭೂಮಿಯಿಂದ ಇದರ ತುತ್ತ ತುದಿಯನ್ನು ಕ್ರಮಿಸಬೇಕಿದ್ದರೆ 16,100 ಅಡಿ ಏರಬೇಕು. ಈ ಸಾಹಸವನ್ನು ಮಾಡಿರುವ ಗೀತಾ ಸಮೋಟಾ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಧ್ವಜ ಹಾಗೂ ಭಾರತದ ತ್ರಿವರ್ಣ ಪಾತಾಕೆಯನ್ನು ಹಾರಿಸಿ ಸಾಧನೆ ಮೆರೆದರು.
Believe in yourself and let the world mark your achievements. Power of #women illuminated on “The Roof of Africa” @mountkilimanjaro ???.Proud Indian and CISF Girl??✈️Jai Hind!!!! #AzadiKaAmritMahotsav#IndiaAt75@CISFHQrs @PMOIndia @RajCMO @KirenRijiju @ianuragthakur @SachinPilot pic.twitter.com/d3wrK8HPt0
— Geeta Samota (@geeta_samota) September 11, 2021
ಈ ಹಿಂದೆ ಇದೇ ಶಿಖರವನ್ನು ಆಂಧ್ರಪ್ರದೇಶದ ಒಂಬತ್ತು ವರ್ಷದ ಹುಡುಗಿ ಕಡಪಾಲ ರಿತ್ವಿಕಾ ಶ್ರೀ ಏರಿ ಸಾಹಸ ಮೆರೆದಿದ್ದರು. ಅಲ್ಲದೆ ಕಿಲಿಮಂಜಾರೊ ಪರ್ವತವನ್ನು ಏರಿದ ಏಷ್ಯಾದ ಕಿರಿಯ ಹುಡುಗಿ ಎಂಬ ದಾಖಲೆ ರಿತ್ವಿಕಾ ಹೆಸರಿನಲ್ಲಿದೆ. ಕಿಲಿಮಂಜಾರೊ ಶಿಖರವನ್ನು ಭೂಮಿಯ ಮೇಲಿನ ನಾಲ್ಕನೇ ಅತ್ಯಂತ ಪ್ರಮುಖ ಸ್ಥಳ ಎಂದು ಪರಿಗಣಿಸಲಾಗುತ್ತದೆ . ಇದು ಕಿಲಿಮಂಜಾರೊ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದ್ದು, ವಿಶ್ವ ಚಾರಣ ಪ್ರಿಯರ ಪ್ರಮುಖ ತಾಣವಾಗಿದೆ. ಓಝೋನ್ ಪದರ ಬಿರುಕು ಬಿಡುತ್ತಿರುವ ಹಿನ್ನೆಲೆಯಲ್ಲಿ 2050 ರ ವೇಳೆ ಪರ್ವತದ ಸೌಂದರ್ಯವಾಗಿರುವ ಮಂಜುಗಡ್ಡೆಗಳು ಹಾಗೂ ಹಿಮನದಿಗಳು ಕಣ್ಮರೆಯಾಗಲಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಎಚ್ಚರಿಸಿದೆ.
ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(Geeta Samota Becomes Fastest Indian To Scale Mt Kilimanjaro)