ದೆಹಲಿ ಸೆಪ್ಟೆಂಬರ್ 09: ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ (G20 Summit) ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ (German Chancellor Olaf Scholz) ಅವರು ಒಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಭಾಗವಹಿಸಿದ್ದಾರೆ. ಕಳೆದ ಶನಿವಾರ ಜಾಗಿಂಗ್ ಮಾಡುವಾಗ ಮುಖಕ್ಕೆ ಗಾಯವಾಗಿದ್ದು, ಆ ಗಾಯ ಮರೆ ಮಾಡಲು 65 ವರ್ಷದ ಸ್ಕೋಲ್ಜ್ ಈ ರೀತಿ ಐ ಪ್ಯಾಚ್ (Eye patch) ಧರಿಸಿದ್ದಾರೆ. ಅವರ ವಕ್ತಾರರ ಪ್ರಕಾರ ಸ್ಕೋಲ್ಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಂದಿನ ಕೆಲವು ದಿನಗಳವರೆಗೆ ಕಣ್ಣಿನ ಪ್ಯಾಚ್ ಅನ್ನು ಧರಿಸಬೇಕಾಗುತ್ತದೆ.
ಗಾಯಗಳಿದ್ದರೂ, ಸ್ಕೋಲ್ಜ್ ಅವರ ಆರೋಗ್ಯ ಉತ್ತಮ ಆಗಿದೆ ಎಂದು ಅವರ ವಕ್ತಾರ ಸ್ಟೆಫೆನ್ ಹೆಬೆಸ್ಟ್ರೀಟ್ ಸೋಮವಾರ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, ಜರ್ಮನ್ ಚಾನ್ಸೆಲರ್ Xನಲ್ಲಿ ತಮ್ಮ ಬಲಗಣ್ಣಿನ ಮೇಲೆ ದೊಡ್ಡ ಕಪ್ಪು ಪ್ಯಾಚ್ ಅನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಕಣ್ಣಿನ ಸುತ್ತವೂ ಕೆಂಪಗೆ ಗಾಯದ ಗುರುತೂ ಕಾಣಿಸುತ್ತಿತ್ತು,
#WATCH | G-20 in India: German Chancellor Olaf Scholz arrives at Bharat Mandapam, the venue for G 20 Summit in Delhi’s Pragati Maidan. pic.twitter.com/PkBvhCKWEO
— ANI (@ANI) September 9, 2023
ನಿಮ್ಮ ಹಾರೈಕೆಗೆ ಧನ್ಯವಾದಗಳು. ಅದು ಇರುವುದಕ್ಕಿಂತ ಕೆಟ್ಟದಾಗಿ ಕಾಣುತ್ತದೆ!” ಅವರು ತಮ್ಮ ಅಧಿಕೃತ ಖಾತೆಯಲ್ಲಿ ಫೋಟೊ ಜತೆ ಹೀಗೆ ಬರೆದಿದ್ದು,”ಮೀಮ್‌ಗಳನ್ನು ನೋಡಲು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
Wer den Schaden hat…
Bin gespannt auf die Memes. Danke für die guten Wünsche, sieht schlimmer aus, als es ist! pic.twitter.com/bB5INX8HnM— Bundeskanzler Olaf Scholz (@Bundeskanzler) September 4, 2023
ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ನವದೆಹಲಿಯಲ್ಲಿ ಜಿ20 ಶೃಂಗಸಭೆಗೆ ವಿಶ್ವ ನಾಯಕರನ್ನು ಅಭಿನಂದಿಸಿದರು. ಉಕ್ರೇನ್, ಹವಾಮಾನ ಬದಲಾವಣೆ ಮತ್ತು ಇತರ ವಿವಾದಾತ್ಮಕ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿರುವ ವಿಶ್ವ ನಾಯಕರಿಗೆ ಹಸ್ತಲಾಘವ ಮಾಡಿ ಆವರು ಆಲಿಂಗಿಸಿ ಬರ ಮಾಡಿಕೊಂಡರು.
1999 ರಲ್ಲಿ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ನಂತರ G20 ಪ್ರಪಂಚದ 20 ಪ್ರಮುಖ ರಾಷ್ಟ್ರಗಳ ಗುಂಪಾಗಿದ್ದು, ಗಡಿಗಳಲ್ಲಿ ಹರಡುವ ಬಿಕ್ಕಟ್ಟುಗಳನ್ನು ನಿಭಾಯಿಸಲು ಉತ್ತಮ ಅಂತರಾಷ್ಟ್ರೀಯ ಆರ್ಥಿಕ ಸಹಕಾರದ ಅಗತ್ಯವಿದೆ ಎಂದು ಹೇಳುತ್ತದೆ.
ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ