ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕುವವರಿಗೆ ಬೀಳುತ್ತೆ ಕೋಟಿಗಟ್ಟಲೆ ದಂಡ
ಈ ವರ್ಷ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು ಇನ್ಮುಂದೆ ಯಾರಾದರೂ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರೆ ಒಂದು ಕೋಟಿ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ಬೆದರಿಕೆ ಹಾಕುವ ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲಾಗುತ್ತದೆ. ಇದರೊಂದಿಗೆ 1 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು 2023 ರ ಏರ್‌ಕ್ರಾಫ್ಟ್ (ಭದ್ರತೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಕಲಿ ಕರೆಗಳ ವಿರುದ್ಧ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಈ ವರ್ಷ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು ಇನ್ಮುಂದೆ ಯಾರಾದರೂ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರೆ ಒಂದು ಕೋಟಿ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೆ ಬೆದರಿಕೆ ಹಾಕುವ ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲಾಗುತ್ತದೆ. ಇದರೊಂದಿಗೆ 1 ಲಕ್ಷ ರೂ.ನಿಂದ ಕೋಟಿವರೆಗೂ ದಂಡ ವಿಧಿಸಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು 2023 ರ ಏರ್‌ಕ್ರಾಫ್ಟ್ (ಭದ್ರತೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಕಲಿ ಕರೆಗಳ ವಿರುದ್ಧ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಕಾಲಕಾಲಕ್ಕೆ, ಇಂತಹ ವದಂತಿಗಳನ್ನು ಹರಡುವುದರಿಂದ, ಹಲವಾರು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಜನರಲ್ಲಿ ಭಯವನ್ನು ಸಹ ಸೃಷ್ಟಿಸುತ್ತದೆ. ಡಿಸೆಂಬರ್ 9 ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.ಏರ್‌ಕ್ರಾಫ್ಟ್ (ಸುರಕ್ಷತೆ) ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ, ಎರಡು ಕ್ರಮಗಳಿಗೆ ನಿಬಂಧನೆಯನ್ನು ಮಾಡಲಾಗಿದೆ.
ಮತ್ತಷ್ಟು ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 10 ಪ್ರಕರಣಗಳು ದಾಖಲು
ಡೈರೆಕ್ಟರ್ ಜನರಲ್ (BCAS) ಪ್ರಕಾರ, ಭದ್ರತೆಯ ಹಿತದೃಷ್ಟಿಯಿಂದ ಹಾಗೆ ಮಾಡುವುದು ಅವಶ್ಯಕ, ಇದರಿಂದಾಗಿ ಬೆದರಿಕೆ ಹಾಕುವ ಮುನ್ನ ತಮ್ಮ ಪರಿಸ್ಥಿತಿ ಮುಂದೇನಾಗಲಿದೆ ಎಂದು ಆಲೋಚಿಸಲೇಬೇಕು.
2024 ರಲ್ಲಿ ಮಾತ್ರ, ಸುಮಾರು 1,000 ಬೆದರಿಕೆಗಳು ವಿಮಾನ ಕಾರ್ಯಾಚರಣೆಯನ್ನು ಅಡ್ಡಿಪಡಿಸಿದ್ದವು. ಇದು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನಷ್ಟವನ್ನು ಉಂಟುಮಾಡಿತು ಮತ್ತು ಪ್ರಯಾಣಿಕರಿಗೆ ಗಮನಾರ್ಹ ಅನಾನುಕೂಲತೆಯನ್ನು ಉಂಟುಮಾಡಿತು.
ಈ ಸಮಸ್ಯೆಯನ್ನು ಪರಿಹರಿಸಲು, ಸುಳ್ಳು ಬೆದರಿಕೆಗಳನ್ನು ನೀಡುವಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಗಳು ಈಗ 1 ಲಕ್ಷದವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ತೀವ್ರ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ. 2024 ರ ಜನವರಿ ಮತ್ತು ನವೆಂಬರ್ ಮಧ್ಯದ ನಡುವೆ 994 ಘಟನೆಗಳು ವರದಿಯಾಗಿವೆ, 2022 ರ ಆಗಸ್ಟ್‌ನಿಂದ ಇಂತಹ 1,143 ಬೆದರಿಕೆಗಳು ಬಂದಿದ್ದವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ