ನೋಯ್ಡಾ: ಶಿಕ್ಷಕಿಯರ ಶೌಚಾಲಯದೊಳಗೆ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನ ಬಂಧನ

ನೋಯ್ಡಾದ ಶಾಲೆಯೊಂದರ ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಶಿಕ್ಷಕಿಯರ ವಾಶ್​ರೂಮನ್​ ಬಲ್ಬ್​ ಸಾಕೆಟ್​ನಲ್ಲಿ ಸ್ಪೈ ಕ್ಯಾಮರಾವನ್ನು ಇಟ್ಟಿದ್ದ ಎನ್ನಲಾಗಿದೆ. ಆತ ತನ್ನ ಕಂಪ್ಯೂಟರ್​ ಹಾಗೂ ಮೊಬೈಲ್ ಮೂಲಕ ವಾಶ್​ರೂಂನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ. ಈ ಕುರಿತು ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನೋಯ್ಡಾ: ಶಿಕ್ಷಕಿಯರ ಶೌಚಾಲಯದೊಳಗೆ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನ ಬಂಧನ
Director
Follow us
ನಯನಾ ರಾಜೀವ್
|

Updated on: Dec 18, 2024 | 12:38 PM

ನೋಯ್ಡಾದ ಶಾಲೆಯೊಂದರ ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಶಿಕ್ಷಕಿಯರ ವಾಶ್​ರೂಮನ್​ ಬಲ್ಬ್​ ಸಾಕೆಟ್​ನಲ್ಲಿ ಸ್ಪೈ ಕ್ಯಾಮರಾವನ್ನು ಇಟ್ಟಿದ್ದ ಎನ್ನಲಾಗಿದೆ. ಆತ ತನ್ನ ಕಂಪ್ಯೂಟರ್​ ಹಾಗೂ ಮೊಬೈಲ್ ಮೂಲಕ ವಾಶ್​ರೂಂನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ. ಈ ಕುರಿತು ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಘಟನೆಯು ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ನಡೆದಿದೆ. ಡಿಸೆಂಬರ್ 10 ರಂದು ಶಿಕ್ಷಕಿಯೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಅಸಹಜವಾದದ್ದನ್ನು ಗಮನಿಸಿದರು. ಹೋಲ್ಡರ್​ನಲ್ಲಿ ಮಸುಕಾದ ಬೆಳಕಿರುವುದನ್ನು ಗಮನಿಸಿದರು. ಅದು ಅನುಮಾನವನ್ನು ಹುಟ್ಟುಹಾಕಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸ್ಪೈ ಕ್ಯಾಮರಾ ಇರುವುದು ಕಂಡುಬಂದಿತ್ತು. ಕೂಡಲೇ ಶಾಲೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸಾಧನ ಇರುವುದನ್ನು ಖಚಿತಪಡಿಸಿದ್ದಾರೆ.

ಶಿಕ್ಷಕಿಯು ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಶಾಲೆಯ ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಆರೋಪಗಳನ್ನು ನಿರಾಕರಿಸಿದರು. ಸಹಾಯ್ ಅಥವಾ ಪಾರುಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಬಾಡಿಗೆ ಮನೆಯ ಬೆಡ್​ರೂಂ, ಬಾತ್​ರೂಂನಲ್ಲೂ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕನ ಮಗ, ಸಿಕ್ಕಿಬಿದ್ದಿದ್ಹೇಗೆ?

ಶಿಕ್ಷಕಿಯ ದೂರಿನ ಮೇರೆಗೆ ನೋಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಕಾರ್ಡ್​ ಮಾಡದೆಯೇ ಲೈವ್​ ಸ್ಟ್ರೀಮಿಂಗ್ ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ. ನಂತರ ಡೈರೆಕ್ಟರ್ ನವೀಶ್ ಸಹಾಯ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಸಹಾಯ್ ವಿಚಾರಣೆಯ ಸಮಯದಲ್ಲಿ ತಾನು ಆನ್‌ಲೈನ್‌ನಲ್ಲಿ ₹ 22,000 ಕ್ಕೆ ಸ್ಪೈ ಕ್ಯಾಮೆರಾವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ . ಸಾಧನವನ್ನು ನಿರ್ದಿಷ್ಟವಾಗಿ ಬಲ್ಬ್ ಹೋಲ್ಡರ್‌ನೊಳಗೆ ಮರೆಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾನ್ಯವಾಗಿ ಯಾರ ಕಣ್ಣಿಗೂ ಕಾಣಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಈ ಹಿಂದೆ ಶಾಲೆಯ ಶೌಚಾಲಯದಲ್ಲಿ ಇದೇ ರೀತಿಯ ಪತ್ತೇದಾರಿ ಕ್ಯಾಮೆರಾ ಸಿಕ್ಕಿತ್ತು ಇದು ಮೊದಲಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ. ಅದನ್ನು ಪಾರುಲ್​ಗೆ ಹಸ್ತಾಂತರಿಸಲಾಗಿತ್ತು ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ