ಬಾಡಿಗೆ ಮನೆಯ ಬೆಡ್​ರೂಂ, ಬಾತ್​ರೂಂನಲ್ಲೂ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕನ ಮಗ, ಸಿಕ್ಕಿಬಿದ್ದಿದ್ಹೇಗೆ?

ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿನಿಯೊಬ್ಬಳು ದೆಹಲಿಗೆ ಬಂದಿದ್ದಳು. ಅಲ್ಲಿನ ಶಕರ್​ಪುರದಲ್ಲಿ ಬಾಡಿಗೆ ಮನೆಯೊಂದಕ್ಕೆ ಬಾಡಿಗೆಗೆಂದು ಹೋಗಿದ್ದಳು. ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆ ಮಾಲೀಕನ ಮಗ ವಾಸವಾಗಿದ್ದ. ಒಂದು ಬಾರಿ ಆಕೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುವಾಗ ಮನೆಯ ಕೀಗಳನ್ನು ಆತನಿಗೆ ಕೊಟ್ಟಿದ್ದಳು.

ಬಾಡಿಗೆ ಮನೆಯ ಬೆಡ್​ರೂಂ, ಬಾತ್​ರೂಂನಲ್ಲೂ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕನ ಮಗ, ಸಿಕ್ಕಿಬಿದ್ದಿದ್ಹೇಗೆ?
ಕ್ಯಾಮೆರಾ
Follow us
ನಯನಾ ರಾಜೀವ್
|

Updated on: Sep 25, 2024 | 10:51 AM

ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿನಿಯೊಬ್ಬಳು ದೆಹಲಿಗೆ ಬಂದಿದ್ದಳು. ಅಲ್ಲಿನ ಶಕರ್​ಪುರದಲ್ಲಿ  ಮನೆಯೊಂದಕ್ಕೆ ಬಾಡಿಗೆಗೆಂದು ಹೋಗಿದ್ದಳು. ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆ ಮಾಲೀಕನ ಮಗ ವಾಸವಾಗಿದ್ದ. ಒಂದು ಬಾರಿ ಆಕೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುವಾಗ ಮನೆಯ ಕೀಗಳನ್ನು ಆತನಿಗೆ ಕೊಟ್ಟಿದ್ದಳು. ವಾಪಸ್ ಬಂದಾಗ ತನ್ನ ವಾಟ್ಸಾಪ್​ ಬೇರೊಂದು ಲ್ಯಾಪ್​ಟಾಪ್​ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತು ದಂಗಾಗಿದ್ದಳು. ತಕ್ಷಣವೇ ಆಕೆ ಲಾಗ್​ಔಟ್ ಆಗಿದ್ದಳು.

ನಂತರ ಜಾಗೃತಳಾದ ಆಕೆ ತನ್ನ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂಬುದನ್ನು ಅರಿತಳು, ಯಾವುದೇ ಸಾಧನದ ಮೂಲಕ ತನ್ನ ಮೇಲೆ ನಿಗಾ ಇರಿಸಿರುಬಹುದು ಎಂದು ಕೊಠಡಿ ತುಂಬಾ ಹುಡುಕಾಟ ನಡೆಸಿದ್ದಾಳೆ. ಹೀಗಾಗಿ ಈ ವೇಳೆ ಕೊಠಡಿಯ ಬಾತ್ ರೂಂನ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮೆರಾ ಅಳವಡಿಸಿರುವುದು ಕಂಡು ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಮಹಿಳಾ ಸಬ್ ಇನ್ಸ್‌ಪೆಕ್ಟರ್ ನಿರುಪಮಾ ಅವರ ಮನೆಗೆ ಆಗಮಿಸಿ ಮತ್ತೆ ಮನೆಯನ್ನು ಹುಡುಕಿದಾಗ ಅವರ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಕೆಯ ಕೋಣೆಗೆ ಬೇರೆ ಯಾರಾದರೂ ಬಂದಿದ್ದಾರೆಯೇ ಎಂದು ಪೊಲೀಸರು ಕೇಳಿದಾಗ, ಅವಳು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಕೋಣೆಯ ಕೀಲಿಗಳನ್ನು ಮನೆ ಮಾಲೀಕನ ಮಗನಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾಳೆ. ಈ ವಿಚಾರವಾಗಿ ಕರಣ್​ ಎಂಬಾತನನ್ನು ವಿಚಾರಿಸಿದಾಗ, ಒಂದು ತಿಂಗಳ ಹಿಂದೆ ಆಕೆ ಮನೆಗೆ ಹೋಗಿದ್ದಾಗ, ಕೀಗಳನ್ನು ಕೊಟ್ಟಿದ್ದಳು, ಆ ಸಂದರ್ಭವನ್ನೇ ಬಳಸಿಕೊಂಡು ಹಿಡನ್ ಕ್ಯಾಮರಾಗಳನ್ನು ತಂದು ಬಾತ್​ರೂಂ ಹಾಗೂ ಕೋಣೆಯಲ್ಲಿ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: Viral: ಇದು ಡಿಜಿಟಲ್ ಇಂಡಿಯಾ ಕಣ್ರೀ; ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುತ್ತಾರೆ ಬೆಂಗಳೂರಿನ ಈ ಆಟೋ ಚಾಲಕ

ಆ ಕ್ಯಾಮರಾಗಳಲ್ಲಿ ಮೆಮೊರಿ ಚಿಪ್​ ಕೂಡ ಇತ್ತು, ಇದರಿಂದಾಗಿ ಆನ್​ಲೈನ್ ಮೂಲಕ ವೀಕ್ಷಿಸುತ್ತಿದ್ದ, ಚಿಪ್‌ಗಳನ್ನು ಪಡೆಯಲು ಆರೋಪಿ ಕರಣ್ ವಿದ್ಯುತ್ ರಿಪೇರಿ ಮಾಡುವ ನೆಪದಲ್ಲಿ ಆಕೆಯ ಕೋಣೆಗೆ ಹೋಗಲು ಪದೇ ಪದೇ ಕೀ ಕೇಳುತ್ತಿದ್ದ.ಇದರಿಂದ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ತನ್ನ ಲ್ಯಾಪ್‌ಟಾಪ್‌ಗೆ ವರ್ಗಾಯಿಸಬಹುದು.

ಲ್ಯಾಪ್‌ಟಾಪ್‌ಗಳಲ್ಲಿ ಇರಿಸಿದ್ದ ಸ್ಪೈ ಕ್ಯಾಮೆರಾ ಮತ್ತು ರೆಕಾರ್ಡ್ ಮಾಡಿದ ವಿಡಿಯೋ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆಯಡಿ ಅಂಗವಿಕಲ ವ್ಯಕ್ತಿಯಾಗಿರುವ 30 ವರ್ಷದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾನೂನಿನ ಪ್ರಕಾರ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್