ಕಾರಿನ ಕೆಳಗೆ ಬಿದ್ದಿತ್ತು 4 ವರ್ಷದ ಬಾಲಕಿಯ ಶವ; ಚಿಕ್ಕಪ್ಪನಿಂದಲೇ ನಡೆಯಿತಾ ಅತ್ಯಾಚಾರ?

ಗಾಜಿಯಾಬಾದ್‌ನಲ್ಲಿ ಕಾರಿನ ಕೆಳಗೆ 4 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಆ ಬಾಲಕಿಯ ನಿಗೂಢ ಸಾವು ಸುತ್ತಮುತ್ತಲಿನ ಜನರನ್ನು ದಂಗಾಗಿಸಿದೆ. ಆಕೆಯ ಚಿಕ್ಕಪ್ಪನೇ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಏಪ್ರಿಲ್ 11ರಂದು ರಾತ್ರಿ 8 ಗಂಟೆ ಸುಮಾರಿಗೆ 80 ಅಡಿ ರಸ್ತೆಯಲ್ಲಿ ಕಾರಿನ ಕೆಳಗೆ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ತನಿಖೆ ಆರಂಭಿಸಲಾಗಿದೆ.

ಕಾರಿನ ಕೆಳಗೆ ಬಿದ್ದಿತ್ತು 4 ವರ್ಷದ ಬಾಲಕಿಯ ಶವ; ಚಿಕ್ಕಪ್ಪನಿಂದಲೇ ನಡೆಯಿತಾ ಅತ್ಯಾಚಾರ?
Child Death
Image Credit source: iStock

Updated on: Apr 13, 2026 | 8:51 PM

ಗಾಜಿಯಾಬಾದ್, ಏಪ್ರಿಲ್ 13: ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್‌ನಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ 4 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಇದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಅಪರಾಧದ ತನಿಖೆ ನಡೆಸುತ್ತಿದ್ದ ಪೊಲೀಸರು ಆಕೆಯ ಚಿಕ್ಕಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಅವರೇ ಈ ಘಟನೆಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ. ತಾನೇ ತನ್ನ ಅಣ್ಣನ ಮಗುವನ್ನು ಕೊಂದು ಅಮಾಯಕರಂತೆ ವರ್ತಿಸುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್ 11ರಂದು ರಾತ್ರಿ 8 ಗಂಟೆ ಸುಮಾರಿಗೆ 80 ಅಡಿ ರಸ್ತೆಯಲ್ಲಿ ಕಾರಿನ ಕೆಳಗೆ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ವಶಕ್ಕೆ ಪಡೆದ ನಂತರ ಈ ಘಟನೆಯ ತನಿಖೆ ಆರಂಭಿಸಲಾಯಿತು. ತನಿಖೆಯ ಸಮಯದಲ್ಲಿ ಈ ಘಟನೆಯ ಹಿಂದೆ ಮಗುವಿನ ಚಿಕ್ಕಪ್ಪ ಜಮೀಲ್ ಅಲಿಯಾಸ್ ಛೋಟು ಅವರ ಕೈವಾಡವಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಕಿ ಮೇಲೆ ಬಿಹಾರದ ಯುವಕನಿಂದ ಅತ್ಯಾಚಾರ, ದುಡಿಯಲು ಬಂದವನಿಂದ ನೀಚ ಕೃತ್ಯ

ಆರೋಪಿಯು ಒಂಟಿಯಾಗಿದ್ದ ಮಗುವನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗು ಮನೆಯಲ್ಲಿ ಒಂಟಿಯಾಗಿ ಇದ್ದುದರಿಂದ ಆರೋಪಿಯು ಪರಿಸ್ಥಿತಿಯ ಲಾಭ ಪಡೆದು ಅವಳನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ಆ ಹುಡುಗಿಯ ಶವವು ಕಾರಿನ ಅಡಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ನಂತರ ಆಕೆಯ ಕೊಲೆಗೂ ಮೊದಲು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಕೆಯ ಕುತ್ತಿಗೆ ಮತ್ತು ಗುಪ್ತಾಂಗಗಳಲ್ಲಿ ಗಾಯದ ಗುರುತುಗಳಿವೆ. ತಪ್ಪಿಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us