ಗಾಜಿಯಾಬಾದ್: ಪತಿ, ಆತನ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ಕೇಸ್​ ದಾಖಲಿಸಿ ಸಿಕ್ಕಿಬಿದ್ದ ಮಹಿಳೆ

ಪತಿ ಮತ್ತವರ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಮಹಿಳೆ ಮೊದಲು ತನ್ನ ಪತಿಯ ವಿರುದ್ಧ ಮತ್ತು ನಂತರ ಆತನ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲಿಸಿದ್ದಳು. ಪೊಲೀಸರ ಪ್ರಕಾರ, ಮಹಿಳೆ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಲವಾರು ಬಾರಿ ಪ್ರಕರಣ ದಾಖಲಿಸಿದ ನಂತರ, ಅವರು ತಮ್ಮ ಹೇಳಿಕೆಗಳಿಂದ ಹಿಂದೆ ಸರಿದಿದ್ದಳು.

ಗಾಜಿಯಾಬಾದ್: ಪತಿ,  ಆತನ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ಕೇಸ್​ ದಾಖಲಿಸಿ ಸಿಕ್ಕಿಬಿದ್ದ ಮಹಿಳೆ
ಮಹಿಳೆ
Image Credit source: NDTV

Updated on: Mar 01, 2025 | 1:48 PM

ಗಾಜಿಯಾಬಾದ್, ಮಾರ್ಚ್​ 1: ಪತಿ ಮತ್ತವರ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಮಹಿಳೆ ಮೊದಲು ತನ್ನ ಪತಿಯ ವಿರುದ್ಧ ಮತ್ತು ನಂತರ ಆತನ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲಿಸಿದ್ದಳು.
ಪೊಲೀಸರ ಪ್ರಕಾರ, ಮಹಿಳೆ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಲವಾರು ಬಾರಿ ಪ್ರಕರಣ ದಾಖಲಿಸಿದ ನಂತರ, ಅವರು ತಮ್ಮ ಹೇಳಿಕೆಗಳಿಂದ ಹಿಂದೆ ಸರಿದಿದ್ದಳು. ಇತ್ತೀಚೆಗೆ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ, ಪೊಲೀಸರು ಆರೋಪಗಳು ಸುಳ್ಳು ಎಂದು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ಪೊಲೀಸರು ಆ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಗಾಜಿಯಾಬಾದ್‌ನಲ್ಲಿ, ಕವಿ ನಗರ ಪೊಲೀಸ್ ಠಾಣೆಯ ಪೊಲೀಸರು ಜ್ಯೋತಿ ಸಾಗರ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ನಗರ ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮಹಿಳೆ ತನ್ನ ಪತಿಯ ವಿರುದ್ಧ ಜೂನ್ 2024 ರಲ್ಲಿ ಪ್ರಕರಣ ದಾಖಲಿಸಿದ್ದರು.
ಮತ್ತಷ್ಟು ಓದಿ: ಅದು ಸಮ್ಮತಿಯ ಲೈಂಗಿಕ ಕ್ರಿಯೆ, ಪುಣೆ ಅತ್ಯಾಚಾರ ಆರೋಪಿ ನ್ಯಾಯಾಲಯದಲ್ಲಿ ಶಾಕಿಂಗ್ ಹೇಳಿಕೆ
ತನ್ನ ಪತಿ ವಿಕಾಸ್ ತ್ಯಾಗಿ ಅವರ ಮಾವ ವಿಕ್ರಾಂತ್ ತ್ಯಾಗಿ ಮತ್ತು ದೀಪಕ್ ಚೌಹಾಣ್ ಅವರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿ ಮತ್ತೆ ಹೇಳಿಕೆ ಹಿಂಪಡೆದಿದ್ದಳು. ದೂರು ನೀಡಿದ ನಾಲ್ಕು ದಿನಗಳ ನಂತರ, ಮಹಿಳೆ ಮತ್ತೆ ಯಾವುದೇ ಕ್ರಮ ಕೈಗೊಳ್ಳದಂತೆ ವಿನಂತಿಸಿ ಅರ್ಜಿ ಸಲ್ಲಿಸಿದ್ದಳು.
ಇದಾದ ನಂತರ, ಜನವರಿ 23, 2025 ರಂದು, ಮಹಿಳೆ ಮತ್ತೆ ಪೊಲೀಸ್ ಆಯುಕ್ತರಿಗೆ ಪತ್ರವೊಂದನ್ನು ನೀಡಿದ್ದು, ಅದರಲ್ಲಿ ತನ್ನ ಪತಿ ವಿಕಾಸ್ ತ್ಯಾಗಿ ಅವರು ತಮ್ಮ ಮದುವೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಜನವರಿ 17, 2025 ರಂದು ವಿಕಾಸ್ ತ್ಯಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಸಿಗರೇಟಿನಿಂದ ಸುಟ್ಟು ಹಾಕಲು ಪ್ರಯತ್ನಿಸಿ, ತನ್ನ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಳು.
ಪೊಲೀಸರು ಮೊಬೈಲ್ ಕರೆ ವಿವರಗಳು ಮತ್ತು ಸಿಸಿಟಿವಿಗಳನ್ನು ನೋಡಿದಾಗ, ಮಹಿಳೆಯ ಆರೋಪಗಳು ಸುಳ್ಳು ಎಂದು ಬೆಳಕಿಗೆ ಬಂದಿತು. ಮಹಿಳೆಯೇ ರಾಸಾಯನಿಕಗಳನ್ನು ಬಳಸಿ ಸುಟ್ಟ ಗಾಯಗಳನ್ನು ತೋರಿಸಲು ಪ್ರಯತ್ನಿಸಿದ್ದಳು. ಅಲ್ಲದೆ, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರದ ಆರೋಪ ದೃಢಪಟ್ಟಿಲ್ಲ. ಅದಕ್ಕಾಗಿಯೇ ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ