ತರಕಾರಿ ಖರೀದಿಸಲು ಹೋದ ಬಾಲಕಿಯನ್ನು ಅಪಹರಿಸಿ, ವಾರಗಳ ಕಾಲ ಅತ್ಯಾಚಾರ

ತರಕಾರಿ(Vegetables) ಖರೀದಿಸಲು ಹೋದ ಬಾಲಕಿಯನ್ನು ಅಪಹರಿಸಿ, ವಾರಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಏಪ್ರಿಲ್ 26 ರ ಸಂಜೆ, 13 ವರ್ಷದ ಬಾಲಕಿಯೊಬ್ಬಳು ತರಕಾರಿ ಖರೀದಿಸಲು ಹೊರಗೆ ಹೋಗಿದ್ದಳು. ಅವಳು ಸ್ವಲ್ಪ ದೂರ ನಡೆದುಕೊಂಡು ಹೋದಾಗ, ಒಂದು ಕಾರು ಬಂದು ನಿಂತಿತು.

ತರಕಾರಿ ಖರೀದಿಸಲು ಹೋದ ಬಾಲಕಿಯನ್ನು ಅಪಹರಿಸಿ, ವಾರಗಳ ಕಾಲ ಅತ್ಯಾಚಾರ
ಕ್ರೈಂ
Image Credit source: NDTV

Updated on: May 06, 2025 | 12:28 PM

ಉತ್ತರ ಪ್ರದೇಶ, ಮೇ 06: ತರಕಾರಿ(Vegetables) ಖರೀದಿಸಲು ಹೋದ ಬಾಲಕಿಯನ್ನು ಅಪಹರಿಸಿ, ವಾರಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 26 ರ ಸಂಜೆ, 13 ವರ್ಷದ ಬಾಲಕಿಯೊಬ್ಬಳು ತರಕಾರಿ ಖರೀದಿಸಲು ಹೊರಗೆ ಹೋಗಿದ್ದಳು. ಅವಳು ಸ್ವಲ್ಪ ದೂರ ನಡೆದುಕೊಂಡು ಹೋದಾಗ, ಒಂದು ಕಾರು ಬಂದು ನಿಂತಿತು.

ಒಳಗೆ ಕುಳಿತಿದ್ದ ವ್ಯಕ್ತಿ ಯಾವುದೋ ವಿಳಾಸದ ಬಗ್ಗೆ ವಿಚಾರಿಸಿದ್ದಾನೆ. ಆಕೆ ಇನ್ನೇನು ಆತನಿಗೆ ವಿಳಾಸದ ಬಗ್ಗೆ ಹೇಳಬೇಕು ಎನ್ನುವಾಗ ಬಲವಂತವಾಗಿ ಎಳೆದು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಸ್ವಲ್ಪ ದೂರ ಹೋದ ನಂತರ, ಅವನು ಒಂದು ಮೆಡಿಕಲ್ ಸ್ಟೋರ್‌ನಲ್ಲಿ ಕಾರನ್ನು ನಿಲ್ಲಿಸಿ, ಅಲ್ಲಿ ನೀರಿನ ಬಾಟಲಿ ಮತ್ತು ಕೆಲವು ಔಷಧಿಗಳನ್ನು ಖರೀದಿಸಿ, ಅದನ್ನು ನೀರಿಗೆ ಬೆರೆಸಿದ್ದ, ಆತ ತನಗೆ ಔಷಧಿ ಬೆರೆಸಿದ ನೀರನ್ನು ಕುಡಿಯಲು ಒತ್ತಾಯಿಸಿದ್ದ ಎಂದು ಬಾಲಕಿ ಹೇಳಿದ್ದಾಳೆ.

ಶೀಘ್ರದಲ್ಲೇ ಆಕೆ ಪ್ರಜ್ಞೆ ತಪ್ಪಿದ್ದಳು, ಹೋಟೆಲ್​ಗೆ ಕರೆದೊಯ್ದಿದ್ದ, ಅಲ್ಲಿ ನನಗೆ ರೇಷ್ಮಾ ಎಂಬ ಹುಡುಗಿಯ ನಕಲಿ ಐಡಿ ನೀಡಿ ಅದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದ. ಸಹಿ ಹಾಕಿಲ್ಲವೆಂದರೆ ಮುಂದೂ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದ್ದಾಗಿ ಆಕೆ ತಿಳಿಸಿದ್ದಾಳೆ.

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ

ಮತ್ತಷ್ಟು ಓದಿ: ಕಣ್ಮುಚ್ಚಿ ಬಿಡುವಷ್ಟರಲ್ಲೇ ಕೊಚ್ವಿ ಕೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ

ಆರೋಪಿ ವಿಷ್ಣು ತನ್ನ ಸಹಚರ ನಾರಾಯಣ್‌ಗೆ ಕರೆ ಮಾಡಿ ಇಬ್ಬರೂ ಸೇರಿ ಬಾಲಕಿಯನ್ನು ದಾರಿ ಮಧ್ಯದಲ್ಲಿ ಇಳಿಸಿದರು. ಮತ್ತೊಬ್ಬ ವ್ಯಕ್ತಿ ಸಂಜಯ್ ಅವಳನ್ನು ಎತ್ತಿಕೊಂಡು ತನ್ನ ಮನೆಗೆ ಕರೆದೊಯ್ದಿದ್ದಾನೆ. ಆತ ತಂಪು ಪಾನೀಯ ಕೊಟ್ಟ ನಂತರ ತಲೆ ತಿರುಗಿಬಿದ್ದಿದ್ದಳು. ಮರುದಿನ ಬೆಳಿಗ್ಗೆ ಎಚ್ಚರಗೊಂಡು ನನ್ನ ಫೋನ್ ಕೇಳಿದೆ. ಅಲ್ಲಿಂದ ಅವನು ಆತ ತನ್ನ ಸಹೋದರನ ಮನೆಗೆ ಕರೆದೊಯ್ದು ತನ್ನ ಸಹೋದರನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ.

ಹುಡುಗಿಯ ತಂದೆ ತನ್ನ ಹೆಂಡತಿ ಮತ್ತು ಮಗನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಅವರ ಮಗಳು ತನ್ನ ಅಜ್ಜಿಯರೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದಾಳೆ. ತಮ್ಮ ಮಗಳು ಏಪ್ರಿಲ್ 26 ರಂದು ಕಾಣೆಯಾಗಿದ್ದಳು ಮತ್ತು ಮೇ 1 ರಂದು ಮಾತ್ರ ಪತ್ತೆಯಾಗಿದ್ದಳು, ಅಷ್ಟು ದಿನಗಳ ಕಾಲ ಆಕೆಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರವೆಸಗಲಾಗಿದೆ ಎಂದು ಆಕೆಯ ತಾಯಿ ಹೇಳಿದ್ದಾರೆ. ಮೇ 1 ರಂದು ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ