AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯುಯಾನ ಸಿಬ್ಬಂದಿಗೆ ಲಸಿಕೆ ನೀಡುವುದು ಆದ್ಯತೆಯಾಗಲಿ; ಕೇಂದ್ರ ಸಚಿವಾಲಯದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ

ವಿಮಾನಯಾನ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ವಾಯುಯಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಲಸಿಕೆ ಕೊಡಲು ಆಯಾ ರಾಜ್ಯ ಸರ್ಕಾರಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.

ವಾಯುಯಾನ ಸಿಬ್ಬಂದಿಗೆ ಲಸಿಕೆ ನೀಡುವುದು ಆದ್ಯತೆಯಾಗಲಿ; ಕೇಂದ್ರ ಸಚಿವಾಲಯದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Lakshmi Hegde
|

Updated on: May 06, 2021 | 4:56 PM

Share

ವಾಯುಯಾನ ಸಿಬ್ಬಂದಿಗೆ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಲಸಿಕೆ ನೀಡುವ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊವಿಡ್​ 19 ಉಲ್ಬಣಗೊಂಡ ಸಂದರ್ಭದಲ್ಲೂ ವಿಮಾನಯಾನ ಸಿಬ್ಬಂದಿ ಅವಿರತವಾಗಿ ಕೆಲಸ ಮಾಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅಷ್ಟೇ ಅಲ್ಲದೆ, ಔಷಧಿ, ವೈದ್ಯಕೀಯ ಉಪಕರಣಗಳು, ಲಸಿಕೆಗಳ ಸಾಗಣೆಯಲ್ಲೂ ವಿಮಾನಯಾನ ಸಿಬ್ಬಂದಿ ಶ್ರಮಿಸಿದ್ದಾರೆ.

ಹಾಗಾಗಿ ವಿಮಾನಯಾನ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ವಾಯುಯಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಲಸಿಕೆ ಕೊಡಲು ಆಯಾ ರಾಜ್ಯ ಸರ್ಕಾರಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಎಲ್ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದಿದ್ದಾರೆ. ಸದ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆ ಅಭಿಯಾನದಡಿ ಈ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಅನ್ವಯಿಸಬೇಕು. ಏರ್​​ಪೋರ್ಟ್​ಗಳಲ್ಲಿಯೇ ಲಸಿಕೆ ಬೂತ್​ ಸ್ಥಾಪಿಸುವ ಮೂಲಕ ವಾಯುಯಾನ ಸಿಬ್ಬಂದಿಗೆ ವೇಗವಾಗಿ ಲಸಿಕೆ ನೀಡಲು ಶುರುಮಾಡಬೇಕು. ಹಾಗಾಗಿ ವಿಮಾನನಿಲ್ದಾಣ ಆಡಳಿತಗಳು ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ, ಖಾಸಗಿ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಲಸಿಕೆ ಅಭಿಯಾನಕ್ಕೆ ಬೂತ್​ಗಳನ್ನು ಸ್ಥಾಪಿಸುವ ಏರ್​​ಪೋರ್ಟ್​ಗಳು ಸಿಬ್ಬಂದಿಗಾಗಿ ಕಾಯುವ ಸ್ಥಳ, ಹೆಲ್ಪ್​ಡೆಸ್ಕ್​, ಕುಡಿಯುವ ನೀರು, ವಾಶ್​ರೂಂ, ವೆಂಟಿಲೇಶನ್​ ಫ್ಯಾನ್​ಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ಮಾಹಾಮಾರಿಯ ಆರ್ಭಟ: ಇದು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದ ಕರುಳು ಕಿತ್ತು ಬರುವ ದೃಶ್ಯ

ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಕೊರೊನಾಗೆ ಬಲಿ