ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಕೊರೊನಾಗೆ ಬಲಿ
ಕೆಲವು ದಿನಗಳ ಹಿಂದೆ, ಕೊರೊನಾದಿಂದ ವೇದ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಕುಟುಂಬದ ಇನ್ನೊಬ್ಬ ಸದಸ್ಯರು ಈ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ವೈರಸ್‌ನಿಂದಾಗಿ ಪ್ರತಿದಿನ ಮನಸಿಗೆ ತುಂಬಾ ವೇದನೆ ತರುವ ಸುದ್ದಿಗಳು ಹೊರಬರುತ್ತಿವೆ. ಈಗ ಅದೇ ರೀತಿಯ ಸುದ್ದಿಯೊಂದು ಬಂದಿದ್ದು, ಭಾರತೀಯ ಕ್ರಿಕೆಟ್ನ ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ಕೊರೊನಾದಿಂದ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ, ಕೊರೊನಾದಿಂದ ವೇದ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಕುಟುಂಬದ ಇನ್ನೊಬ್ಬ ಸದಸ್ಯರು ಈ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ವೇದ ಸಹೋದರಿ ವತ್ಸಲಾ ಶಿವಕುಮಾರ್ ಕಳೆದ ಒಂದು ತಿಂಗಳಿನಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ವೇದಾ ಅವರ ಕೋಚ್ ಇರ್ಫಾನ್ ಸೈತ್ ಅವರು ವತ್ಸಲಾ ಸಾವಿನ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಏಪ್ರಿಲ್ 24 ರಂದು ವೇದಾ ಅವರ ತಾಯಿಯ ಸಾವಿನ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಆ ಸಮಯದಲ್ಲಿ ತನ್ನ ಸಹೋದರಿಯ ಚೇತರಿಕೆಗಾಗಿ ಪ್ರಾರ್ಥಿಸುವಂತೆ ಜನರನ್ನು ಕೇಳಿಕೊಂಡಿದ್ದರು. ಆದರೆ ಜನರ ಪ್ರಾರ್ಥನೆ ಪಲಿಸಲಿಲ್ಲ. ತಾಯಿಯ ನಿಧನಕ್ಕೆ ಸಂಬಂಧಿಸಿದಂತೆ ಬಂದ ಸಂದೇಶಗಳಿಗೆ ಎಲ್ಲ ಜನರಿಗೆ ಧನ್ಯವಾದಗಳು. ಕುಟುಂಬದಲ್ಲಿ ತಾಯಿಯಿಲ್ಲದಿರುವುದು ಏನು ಎಂದು ನೀವು ಎಲ್ಲರೂ ಅರ್ಥಮಾಡಿಕೊಳ್ಳಬಹುದು. ನಾವು ಈಗ ನಮ್ಮ ತಂಗಿಗಾಗಿ ಪ್ರಾರ್ಥಿಸುತ್ತಿದ್ದೇವೆ. ನನ್ನ ಪರೀಕ್ಷೆ ನೆಗೆಟಿವ್ ಬಂದಿದೆ ಮತ್ತು ನೀವು ನಮ್ಮ ಗೌಪ್ಯತೆಯನ್ನು ಗೌರವಿಸಿದರೆ ಅದು ಚೆನ್ನಾಗಿರುತ್ತದೆ ಎಂದು ತಾಯಿಯ ನಿಧನದ ಬಗ್ಗೆ ವೇದ ಹೀಗೆ ಹೇಳಿದ್ದರು.
Appreciate all the messages I have received about the loss of my Amma. As you can imagine my family is lost without her. We now pray for my sister. I have tested negative & appreciate if you can respect our privacy. My thoughts & prayers go out to those going through the same!!
— Veda Krishnamurthy (@vedakmurthy08) April 24, 2021
ವೇದ ವೃತ್ತಿಜೀವನ ವೇದಾ ಕೃಷ್ಣಮೂರ್ತಿ ಇದುವರೆಗೆ ಭಾರತಕ್ಕಾಗಿ 48 ಏಕದಿನ ಪಂದ್ಯಗಳನ್ನು ಆಡಿದ್ದು, 25.90 ಸರಾಸರಿಯಲ್ಲಿ 829 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 76 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, 18.61 ಸರಾಸರಿಯಲ್ಲಿ 875 ರನ್ ಗಳಿಸಿದ್ದಾರೆ. 2020 ರ ಮಾರ್ಚ್ 8 ರಂದು ನಡೆದ ಟಿ 20 ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ವೇದಾ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದು, ಇದರಲ್ಲಿ ಆಸ್ಟ್ರೇಲಿಯಾ ಭಾರತವನ್ನು 85 ರನ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಭಾರತ ತಂಡ ಕೇವಲ 99 ರನ್‌ಗಳಿಗೆ ಆಲ್ಔಟಾಯಿತು.
ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಮೇಗನ್ ಪ್ರಮುಖ ಪಾತ್ರ ವಹಿಸಿ ಭಾರತವನ್ನು 99 ರನ್ಗೆ ಆಲ್ಔಟ್ ಮಾಡಿದ್ದರು. ಬಲಗೈ ವೇಗದ ಬೌಲರ್ ಕೇವಲ 3.1 ಓವರ್‌ಗಳಲ್ಲಿ 4 ವಿಕೆಟ್ ಪಡೆದರು. ಆ ಟಿ 20 ಫೈನಲ್‌ನಲ್ಲಿ ವೇದಾ ಕೃಷ್ಣಮೂರ್ತಿ 19 ಎಸೆತಗಳನ್ನು ಎದುರಿಸಿ 24 ರನ್ ಬಾರಿಸಿದ್ದರು.
Published On - 4:25 pm, Thu, 6 May 21