ಬಯೋ ಬಬಲ್ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.. ಆರ್ಸಿಬಿ ಆಟಗಾರರಿಗೆ ಧನಶ್ರೀ ವರ್ಮಾ ಭಾವನಾತ್ಮಕ ವಿದಾಯ
ಧನಶ್ರೀ ತಮ್ಮ ಪತಿ ಚಹಲ್, ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಹಲವಾರು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅನ್ನು ಈಗ ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದ್ದು, ಆಟಗಾರರು ಆಯಾ ಬಯೋ ಬಬಲ್ ಬಿಡಲು ಪ್ರಾರಂಭಿಸಿದ್ದು ತಮ್ಮ ತಮ್ಮ ಕುಟುಂಬಗಳನ್ನು ಸೇರಿಕೊಳ್ಳುತ್ತಿದ್ದಾರೆ. ಬಯೋ ಬಬಲ್ನಲ್ಲಿ ಒಟ್ಟಿಗೆ ಹೆಚ್ಚು ಸಮಯ ಕಳೆದ ನಂತರ, ವಿದಾಯ ಹೇಳುವುದು ತುಂಬಾ ಕಷ್ಟ ಎಂಬುದು ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಹಂಚಿಕೊಂಡ ಚಿತ್ರಗಳಲ್ಲಿ ಇದು ಸಾಕಷ್ಟು ಸ್ಪಷ್ಟವಾಗಿದೆ. ಧನಶ್ರೀ ತಮ್ಮ ಪತಿ ಚಹಲ್, ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಹಲವಾರು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ದಿ 5 ಎಎಮ್ ಕ್ಲಬ್ ಎಂಬ ಅಡಿ ಬರಹ ನೀಡಿದಲ್ಲದೆ ಬಯೋ ಬಬಲ್ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾವೈರಸ್‌ಗೆ ತುತ್ತಾದ ಬಳಿಕ ಈ ನಿರ್ಧಾರ ಮಂಗಳವಾರ ನಡೆದ ತುರ್ತು ಸಭೆಯ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2021 ಅನ್ನು ಅಮಾನತುಗೊಳಿಸಲು ನಿರ್ಧರಿಸಿದ್ದು, ಇದರಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಮತ್ತು ಮಧ್ಯಸ್ಥಗಾರರ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದೆ.
ಐಪಿಎಲ್ ಬಯೋ-ಬಬಲ್‌ನ ಹಲವಾರು ಆಟಗಾರರು ಕೊರೊನಾವೈರಸ್‌ಗೆ ತುತ್ತಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವುದೇ ಆರ್‌ಸಿಬಿ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗದಿದ್ದರೂ, ಇಬ್ಬರು ಕೆಕೆಆರ್ ಆಟಗಾರರು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಲೀಗ್ ಪಂದ್ಯವನ್ನು ಸೋಮವಾರ ಮರು ನಿಗದಿಪಡಿಸಬೇಕಾಯಿತು.
ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ ಪಂದ್ಯಾವಳಿಯನ್ನು ಅಮಾನತುಗೊಳಿಸಿದಾಗ, ಆರ್‌ಸಿಬಿ ತಮ್ಮ ಏಳು ಲೀಗ್ ಪಂದ್ಯಗಳಲ್ಲಿ ಐದನ್ನು ಗೆದ್ದ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ದೆಹಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನ ಪಡೆದಿದೆ.
ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದ ನಂತರ, ಆರ್‌ಸಿಬಿ ತಮ್ಮ ಹಿಂದಿನ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿತು. ಹೀಗಾಗಿ ಪಾಯಿಂಟ್‌ಗಳ ಕೋಷ್ಟಕದಲ್ಲಿ 3ನೇ ಸ್ಥಾನಕ್ಕಿಳಿಯಿತು. ಒಂದೆರಡು ಹಿನ್ನಡೆಗಳ ಹೊರತಾಗಿಯೂ, ಆರ್ಸಿಬಿ ಈ ವರ್ಷ ಅತ್ಯಂತ ಸ್ಥಿರವಾದ ತಂಡಗಳಲ್ಲಿ ಒಂದಾಗಿದೆ, ಮತ್ತು ಏಳು ಪಂದ್ಯಗಳಿಂದ 10 ಅಂಕಗಳೊಂದಿಗೆ ಅವರು ನಾಕೌಟ್ ಹಂತಗಳಿಗೆ ಕನಿಷ್ಠ ಅರ್ಹತೆ ಪಡೆಯಲು ಪ್ರಬಲರಾಗಿದ್ದಾರೆ.