AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಈ ಸಲ ಕಪ್ ಮಿಸ್ಸಾಯ್ತು.. RCB ಅಭಿಮಾನಿಗಳಿಗೆ ಬೇಸರ! ಸೆಪ್ಟೆಂಬರ್​ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್

IPL 2021: ಈಗಾಗಲೇ ಬಿಸಿಸಿಐಗೆ ಐಪಿಎಲ್ನಿಂದ ಬರೋಬ್ಬರಿ 2,200 ಕೋಟಿ ನಷ್ಟವಾಗಿದೆ. ಹೀಗಾಗಿ ಈ ನಷ್ಟವನ್ನ ಬರಿಸಲು ಬಿಸಿಸಿಐ ಸೆಪ್ಟೆಂಬರ್ನಲ್ಲಿ ಐಪಿಎಲ್ ನಡೆಸಲು ಮುಂದಾಗಿದೆ.

IPL 2021: ಈ ಸಲ ಕಪ್ ಮಿಸ್ಸಾಯ್ತು.. RCB ಅಭಿಮಾನಿಗಳಿಗೆ ಬೇಸರ! ಸೆಪ್ಟೆಂಬರ್​ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್
ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಡೇವಿಡ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
ಪೃಥ್ವಿಶಂಕರ
|

Updated on:May 06, 2021 | 6:17 PM

Share

ಈ ಸೀಸನ್ ಆರ್ಸಿಬಿ ಪಾಲಿಗೆ ಅಭೂತಪೂರ್ವ ಸೀಸನ್ ಆಗಿತ್ತು. ಈ ಹಿಂದೆ ಯಾವ ಸೀಸನ್ನಲ್ಲೂ ಸಿಗದ ಯಶಸ್ಸು ಕೊಹ್ಲಿ ಪಡೆಗೆ ಸಿಕಿತ್ತು. ಆರಂಭದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲೂ ಗೆಲುವು ದಾಖಲಿಸಿದ ಆರ್ಸಿಬಿ, ಈ ಸಲ ಕಪ್ ಗೆಲ್ಲುವ ಭರಸವೆಯನ್ನೂ ಮೂಡಿಸಿತ್ತು. ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ದಾಖಲಿಸಿದ್ದ ಆರ್ಸಿಬಿ ಭರ್ಜರಿ ಫಾರ್ಮ್ನಲ್ಲಿತ್ತು. ಪ್ಲೇ ಆಫ್ ದೃಷ್ಟಿಯಿಂದ ಆರ್ಸಿಬಿ ಸೇಫ್ ಆಗಿತ್ತು. ಆದ್ರೆ ಅಷ್ಟರಲ್ಲೇ ಐಪಿಎಲ್ಗೆ ಅಪ್ಪಳಿಸಿದ ಕೊರೊನಾ, ಕೊಹ್ಲಿ ಪಡೆ ಮತ್ತು ಆರ್ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ.

ಈ ಸಲ ಕಪ್ ಮಿಸ್ಸಾಯ್ತು.. RCB ಅಭಿಮಾನಿಗಳಿಗೆ ಬೇಸರ! ಈ ಸಲ ಕಪ್ ನಮ್ದೇ ಅನ್ನೋ ಭರವಸೆಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಇನ್ನಿಲ್ಲದ ಬೇಸರವಾಗಿದೆ. ಈ ಸಲ ಕಪ್ ಮಿಸ್ಸಾಯ್ತು.. ಆರ್ಸಿಬಿ ಗೆಲುವಿನ ನಾಗಾಲೋಟ ಮುಂದುವರಿಸಿರುವಾಗಲೇ ಐಪಿಎಲ್ ಮುಂದೂಡಿದ್ದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳು ನೋವು ತೋಡಿಕೊಳ್ಳುತ್ತಿದ್ದಾರೆ.

ಇನ್ನು ಐಪಿಎಲ್ ಸ್ಥಗಿತಗೊಂಡಿದ್ದಕ್ಕೆ ಸೋತು ಸೋತು ಸುಣ್ಣವಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹೈದರಾಬಾದ್ ಅಭಿಮಾನಿಗಳು ಹೇಗೆ ಸಂಭ್ರಮಿಸುತ್ತಿದ್ದಾರೆ ಅನ್ನೋದಕ್ಕೆ ಅಭಿಮಾನಿಯೊಬ್ಬ ಮಾಡಿದ ಈ ಪೋಸ್ಟ್ ಸಾಕ್ಷಿ.

ಹೈದರಾಬಾದ್, ಪಂಜಾಬ್ ಮತ್ತು ಕೆಕೆಆರ್ ತಂಡದ ಅಭಿಮಾನಿಗಳು ಸಂಭ್ರಮಿಸುತ್ತಿರೋ ಫೋಟೋ ವೈರಲ್ ಆಗಿದ್ರೆ, ಆರ್ಸಿಬಿ ಅಭಿಮಾನಿಗಳು ಬೇಸರದ ಮುಖ ಹೊತ್ತಿರುವ ಫೋಟೋಗಳು ವೈರಲ್ ಆಗಿದೆ. ನಿಜಕ್ಕೂ ಈ ಸೀಸನ್ ಸ್ಥಗಿತಗೊಂಡಿದ್ದು ಆರ್ಸಿಬಿ ಅಭಿಮಾನಿಗಳಿಗೆ ಇನ್ನಿಲ್ಲದ ಬೇಸರವನ್ನುಂಟು ಮಾಡಿದೆ..

ಸೆಪ್ಟೆಂಬರ್ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್! ಈಗಾಗಲೇ ಬಿಸಿಸಿಐಗೆ ಐಪಿಎಲ್ನಿಂದ ಬರೋಬ್ಬರಿ 2,200 ಕೋಟಿ ನಷ್ಟವಾಗಿದೆ. ಹೀಗಾಗಿ ಈ ನಷ್ಟವನ್ನ ಬರಿಸಲು ಬಿಸಿಸಿಐ ಸೆಪ್ಟೆಂಬರ್ನಲ್ಲಿ ಐಪಿಎಲ್ ನಡೆಸಲು ಮುಂದಾಗಿದೆ. ಅಂದ್ರೆ ಈಗಾಗಲೇ ಐಪಿಎಲ್ನಲ್ಲಿ 29 ಪಂದ್ಯಗಳು ಮುಗಿದಿದ್ವು, ಇನ್ನು 31 ಪಂದ್ಯಗಳು ಮಾತ್ರ ಬಾಕಿಯಿದೆ. ಸೆಪ್ಟೆಂಬರ್ ಹೊತ್ತಿಗೆ ಇಂಗ್ಲೆಂಡ್-ಇಂಡಿಯಾ ಸರಣಿ ಮುಗಿಯುತ್ತೆ. ವಿದೇಶಿ ಆಟಗಾರರು ಟಿ 20 ವಿಶ್ವಕಪ್‌ಗೆ ಸಿದ್ಧವಾಗಲಿದ್ದಾರೆ. ಈ ಸಮಯದಲ್ಲಿ ಐಪಿಎಲ್ ಕಂಪ್ಲೀಟ್ ಮಾಡಲು ಯೋಚನೆ ಮಾಡುತ್ತಿದೆ.

ಸೆಪ್ಟೆಂಬರ್ನಲ್ಲಿ ಐಪಿಎಲ್? ನಾವು ಸೆಪ್ಟೆಂಬರ್ನಲ್ಲಿ ಐಪಿಎಲ್ ನಡೆಸಲು ಯೋಚನೆ ಮಾಡುತ್ತಿದ್ದೇವೆ. ಅಷ್ಟೊತ್ತಿಗಾಗಲೇ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಸರಣಿ ಮುಕ್ತಾಯವಾಗಲಿದೆ. ವಿದೇಶಿ ಆಟಗಾರರು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ಗಾಗಿ ತಯಾರಿ ನಡೆಸಿಕೊಳ್ಳುತ್ತಿರುತ್ತಾರೆ. ಈ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನ ಮುಂದುವರಿಸುವ ಬಗ್ಗೆ ನಾವು ಯೋಜನೆ ರೂಪಿಸುತ್ತಿದ್ದೇವೆ. – ಬಿಸಿಸಿಐ ಮೂಲ

ಸದ್ಯ ಐಪಿಎಲ್ ಅನ್ನ ಮುಂದೂಡಿರುವ ಬಿಸಿಸಿಐಗೆ ರದ್ದು ಮಾಡುವ ಯಾವ ಆಲೋಚನೆಯೂ ಇಲ್ಲ. ಹೀಗಾಗಿ ಅಕ್ಟೋಬರ್ ನವೆಂಬರ್ಗೂ ಮುನ್ನ ಸೆಪ್ಟೆಂಬರ್ ಮಧ್ಯದಲ್ಲಿ ಐಪಿಎಲ್ ಆರಂಭಿಸಲು, ಐಸಿಸಿ ಜೊತೆ ಮಾತುಕತೆ ನಡೆಸೋದಾಗಿ ತಿಳಿಸಿದೆ. ಹಾಗೇ ಐಪಿಎಲ್ನಲ್ಲಿ ವಿದೇಶಿ ಆಟಗಾರರು ಪಾಲ್ಗೊಳ್ಳೊದ್ರಿಂದ, ಬಿಸಿಸಿಐ ವಿದೇಶಿ ಕ್ರಿಕೆಟ್ ಮಂಡಳಿಗಳ ಮನವೊಲಿಸಬೇಕಾಗುತ್ತೆ.

ಯುಎಇನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪ್ಲ್ಯಾನ್! ಸದ್ಯದ ಮಟ್ಟಿಗೆ ಭಾರತದಲ್ಲಿ ಐಪಿಎಲ್ ನಡೆಯುವು ಅನುಮಾನ. ಇನ್ನೂ 3ನೇ ಅಲೆಯ ಭೀತಿ ಇರೋದ್ರಿಂದ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಹೀಗಾಗಿ ಬಿಸಿಸಿಐ ಕಳೆದ ಸೀಸನ್ನಂತೆ, ಈ ಸೀಸನ್ ಅನ್ನ ಯುಎಇನಲ್ಲಿ ಆಯೋಜಿಸಲು ಮುಂದಾಗುವ ಸಾಧ್ಯತೆ ಇದೆ. ಈ ಸೀಸನ್ ಅನ್ನು ಬಿಸಿಸಿಐ ಯುಎಇನಲ್ಲಿ ನಡೆಸಿದ್ರೆ, ಯಾವ ಅಡ್ಡಿ ಆತಂಕಗಳು ಇರುತ್ತಿರಲಿಲ್ಲ. ಆದ್ರೆ ಜಿದ್ದಿಗೆ ಬಿದ್ದ ಬಿಸಿಸಿಐ, ಕೊರೊನಾ ಕೋಲಾಹಲದ ನಡುವೆಯೂ ಇಲ್ಲೇ ಐಪಿಎಲ್ ನಡೆಸಿ ಕೈ ಸುಟ್ಟುಕೊಂಡಿದೆ.

ಇದನ್ನೂ ಓದಿ:IPL 2021: ಐಪಿಎಲ್ ಹಣೆಬರಹವನ್ನು ನಿರ್ಧರಿಸಿತು 10 ನಿಮಿಷಗಳ ಆನ್​ಲೈನ್ ಸಭೆ; ಇಲ್ಲಿದೆ ವಿವರ

Published On - 6:11 pm, Thu, 6 May 21