ಪಕ್ಷ ವಿರೋಧಿ ಚಟುವಟಿಕೆ: ಗೋವಾ ಶಾಸಕರಾದ ಕಾಮತ್, ಲೋಬೊರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಮನವಿ

ಪಕ್ಷದ ಸಭೆಗೆ ದಿಗಂಬರ್ ಕಾಮತ್ ಮತ್ತು ಮೈಕಲ್ ಲೋಬೊ ಗೈರು ಹಾಜರಾಗಿದ್ದಕ್ಕೆ ಈ ನಾಯಕರು ಬಿಜೆಪಿ ಜತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸಿದೆ.

ಪಕ್ಷ ವಿರೋಧಿ ಚಟುವಟಿಕೆ: ಗೋವಾ ಶಾಸಕರಾದ ಕಾಮತ್, ಲೋಬೊರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಮನವಿ
ಗೋವಾ ಕಾಂಗ್ರೆಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 11, 2022 | 8:36 PM

ಪಣಜಿ: ಗೋವಾದ ಕಾಂಗ್ರೆಸ್ (Congress )ಶಾಸಕರಾದ ದಿಗಂಬರ್ ಕಾಮತ್ (Digambar Kamat) ಮತ್ತು ಮೈಕಲ್ ಲೋಬೊ (Michael Lobo) ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅನರ್ಹಗೊಳಿಸಲು ಮನವಿ ಮಾಡಿದೆ. ಈ ಇಬ್ಬರು ಶಾಸಕರು ಪಕ್ಷವನ್ನು ಒಡೆಯಲು ಬಿಜೆಪಿ ಜತೆ ಸಂಚುರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಾವು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇವೆ ಎಂದು ಹೇಳಿದ್ದರು. ಇವರಿಬ್ಬರು ನಡೆಸಿದ ಚಟುವಟಿಕೆಗಳು ಪಕ್ಷದ ಸದಸ್ಯತ್ವವನ್ನು ಬಿಡುವಂತೆ ಮಾಡಿದೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಹೇಳಿದ್ದಾರೆ. ಇದರಿಂದಾಗಿ ಸ್ಪೀಕರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಇಬ್ಬರು ಹಿರಿಯ ನಾಯಕರು ಸ್ವಯಂ ಪ್ರೇರಿತವಾಗಿ ಪಕ್ಷದ ಸದಸ್ಯತ್ವ ತ್ಯಜಿಸಿರುವುದರಿಂದ ಅವರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸುತ್ತಿದ್ದೇವೆ. ಯಾವುದೇ ಪಕ್ಷ ವಿರೋಧಿ ಚಟುವಟಿಕೆಯು ಸ್ವಯಂಪ್ರೇರಣೆಯಿಂದ ಸದಸ್ಯತ್ವವನ್ನು ಇಲ್ಲದಾಗಿಸುತ್ತದೆ ಎಂದು 2020 ರ ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತದೆ ಎಂದು ಪಾಟ್ಕರ್ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದ ಸಭೆಗೆ ದಿಗಂಬರ್ ಕಾಮತ್ ಮತ್ತು ಮೈಕಲ್ ಲೋಬೊ ಗೈರು ಹಾಜರಾಗಿದ್ದಕ್ಕೆ ಈ ನಾಯಕರು ಬಿಜೆಪಿ ಜತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್ ಮತ್ತು ಲೊಬೊ ನಮ್ಮ ಮೇಲಿನ ಆರೋಪದಿಂದ ತುಂಬಾ ನೋವಾಗಿದೆ. ನಾವು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ನಾನು ದಿನೇಶ್ ಗುಂಡೂರಾವ್ ಅವರ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಡೆಸ್ಕ್ ಇನ್ ಚಾರ್ಜ್ ಆಫ್ ಗೋವಾ) ಸುದ್ದಿಗೋಷ್ಠಿ ನೋಡಿ ಆಘಾತಕ್ಕೊಳಗಾದೆ. ನನಗೆ ಅತೀವ ನೋವಾಗಿದೆ ಎಂದು ಗೋವಾದ ಮಾಜಿ ಸಿಎಂ ಮತ್ತು ಹಿರಿಯ ಶಾಸಕ ದಿಗಂಬರ್ ಕಾಮತ್ ಹೇಳಿದ್ದಾರೆ.