Royal Bengal Raja: ದೇಶದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಟೈಗರ್ “ರಾಜಾ” ನಿಧನ
ಪಶ್ಚಿಮ ಬಂಗಾಳದಲ್ಲಿ ಸೆರೆಯಲ್ಲಿದ್ದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಹುಲಿ, ಅಲಿಪುರ್ದೌರ್ ಜಿಲ್ಲೆಯ ಜಲ್ದಪಾರಾ ಅರಣ್ಯದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೆರೆಯಲ್ಲಿದ್ದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಹುಲಿ, ಅಲಿಪುರ್ದೌರ್ ಜಿಲ್ಲೆಯ ಜಲ್ದಪಾರಾ ಅರಣ್ಯದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹುಲಿಯ 25 ನೇ ಹುಟ್ಟುಹಬ್ಬವನ್ನು ಕಳೆದ ವರ್ಷ ಆಗಸ್ಟ್ 23 ರಂದು ಅರಣ್ಯ ಇಲಾಖೆಯು ಸಂಭ್ರಮದಿಂದ ಆಚರಣೆ ಮಾಡಿ್ತ್ತು. 2008 ರಲ್ಲಿ ಮೊಸಳೆ ದಾಳಿಯಿಂದ ಬದುಕುಳಿದ ನಂತರ ಹೊಸ ಜೀವನವನ್ನು ಪಡೆದಿತ್ತು, ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹುಲಿಯು ಇತ್ತೀಚಿನ ದಿನಗಳಲ್ಲಿ ಗಂಭೀರ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಪಶುವೈದ್ಯರು ಅವರ ಸಾವಿಗೆ ಕಾರಣವನ್ನು ವೃದ್ಧಾಪ್ಯ ಸಂಬಂಧಿತ ಸಮಸ್ಯೆಗಳು ಎಂದು ಹೇಳಿದ್ದಾರೆ. ರಾಯ್ ಪ್ರಕಾರ, ಇದು 25 ವರ್ಷ , 10 ತಿಂಗಳ ವಯಸ್ಸಿನಲ್ಲಿ ಸಾವನ್ನಪ್ಪಿದೆ. ಇದು ರಾಜ್ಯದ ರಾಯಲ್ ಬೆಂಗಾಲ್ ಟೈಗರ್‌ಗಳಲ್ಲಿ ಅತ್ಯಂತ ಹಳೆಯದು ಎಂದಿದ್ದಾರೆ.
ರಾಜಾ ದೇಶದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಹುಲಿಯೇ ಎಂದು ಮೊದಲು ಅಧಿಕಾರಿಗಳು ಹೇಳಿರಲಿಲ್ಲ. ಒಮದು ಹುಲಿಯು ಸಾಮಾನ್ಯವಾಗಿ 20 ವರ್ಷಗಳಿಗಿಂತ ಹೆಚ್ಚು ಬದುಕುವುದಿಲ್ಲ ಎಂದು ಹೇಳಿದರು. 2008 ರಿಂದ ದಕ್ಷಿಣ ಖಯೇರ್‌ಬರಿ ಹುಲಿ ಪಾರುಗಾಣಿಕಾ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದ ರಾಜಾ, ಸುಂದರ್‌ಬನ್ಸ್‌ನ ಕ್ರೀಕ್‌ನಲ್ಲಿ ಈಜುತ್ತಿದ್ದಾಗ ಮೊಸಳೆ ದಾಳಿಯಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿತ್ತು, ಇದು ಕೃತಕ ಕಾಲಿನ ಮೂಲಕ ನಡೆಯುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಜುಲೈ 21 ರಂದು ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಇ.ಡಿ. ಹೊಸ ಸಮನ್ಸ್
ಪ್ರತಿಯೊಂದಕ್ಕೂ ಇದು ಪ್ರತಿಕ್ರಿಯೆ ನೀಡುತ್ತಿತ್ತು, ಜೊತೆಗೆ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಹುಲಿ, ಇದು ಯಾವುದೇ ರೀತಿ ತೊಂದರೆಯನ್ನು ಮಾಡಿಲ್ಲ, ಪಶುವೈದ್ಯರು ನೀಡುತ್ತಿದ್ದ ಪ್ರತಿಯೊಂದು ಚಿಕಿತ್ಸೆಗೂ ಸ್ಪಂದಿಸುತ್ತಿತ್ತು.