AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪತಿ ಚುನಾವಣೆ ಕುರಿತ ಸಭೆಯಲ್ಲಿ ಶಿವಸೇನಾದ 13 ಸಂಸದರು ಭಾಗಿ; ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ಸಹಮತ

13 ಸಂಸದರು ಖುದ್ದಾಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದ ಮೂವರು ಸಂಜಯ್ ಜಾದವ್, ಸಂಜಯ್ ಮಾಂಡಲಿಕ್ ಮತ್ತು ಹೇಮಂತ್ ಪಾಟಿಲ್ ಸಭೆಗೆ ಬಂದಿಲ್ಲ

ರಾಷ್ಟ್ರಪತಿ ಚುನಾವಣೆ ಕುರಿತ ಸಭೆಯಲ್ಲಿ ಶಿವಸೇನಾದ 13 ಸಂಸದರು ಭಾಗಿ; ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ಸಹಮತ
ಏಕನಾಥ್ ಶಿಂಧೆ
TV9 Web
| Edited By: |

Updated on:Jul 11, 2022 | 6:30 PM

Share

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಶಿವಸೇನಾದ (Shiv Sena) 18 ಲೋಕಸಭಾಸಂಸದರ ಪೈಕಿ 13 ಸಂಸದರು ರಾಷ್ಟ್ರಪತಿ ಚುನಾವಣೆಯ ಬಗ್ಗೆ ಸೋಮವಾರ ನಡೆದ ಮಹತ್ತರವಾದ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಂಸದರು ಬಿಜೆಪಿ ನೇತೃತ್ವದ ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಬೆಂಬಲ ನೀಡಬೇಕು ಎಂದು ಸೂಚಿಸಿರುವುದಾಗಿ ಪಕ್ಷದ ನಾಯಕ ಗಜಾನನ್ ಕಿರೀತ್ಕರ್ ಹೇಳಿದ್ದಾರೆ. ಆದಾಗ್ಯೂ ಸಂಸದ ಮತ್ತು ಶಿವಸೇನಾದ ಮುಖ್ಯ ವಕ್ತಾರ ಸಂಜಯ್ ರಾವುತ್, 18 ಸಂಸದರು ಲೋಕಸಭೆಯಲ್ಲಿದ್ದಾರೆ, 15 ಮಂದಿ ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ಮಹಾರಾಷ್ಟ್ರದ 18 ಲೋಕಸಭಾ ಸಂಸದರು ಮಾತ್ರವಲ್ಲದೆ ದಾದರ್ , ನಾಗರ್ ಹವೇಲಿ ಮತ್ತು ದಾಮನ್ ದಿವು ಕೇಂದ್ರಾಡಳಿತ ಪ್ರದೇಶದಲ್ಲಿ ಶಿವಸೇನಾಗೆ ಕಾಲಾಬೆನ್ ದೇಲ್ಕರ್ ಎಂಬ ಸಂಸದರಿದ್ದಾರೆ.

13 ಸಂಸದರು ಖುದ್ದಾಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದ ಮೂವರು ಸಂಜಯ್ ಜಾದವ್, ಸಂಜಯ್ ಮಾಂಡಲಿಕ್ ಮತ್ತು ಹೇಮಂತ್ ಪಾಟಿಲ್ ಸಭೆಗೆ ಬಂದಿಲ್ಲ. ಆದರೆ ಅವರು ನಾಯಕತ್ವದ ಬೆಂಬಲಕ್ಕೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಹೆಚ್ಚಿನ ಸಂಸದರು ದ್ರೌಪದಿ ಮುರ್ಮು ಅವರಿಗೆ ಪಕ್ಷ ಬೆಂಬಲ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕಿರೀತ್ಕರ್ ಹೇಳಿದ್ದಾರೆ.

ಇದನ್ನೂ ಓದಿ
Image
Sharad Pawar: ಮಹಾ ವಿಕಾಸ್ ಅಘಾಡಿ ಜತೆ ಚುನಾವಣಾ ಮೈತ್ರಿ ಬಗ್ಗೆ ಶರದ್ ಪವಾರ್ ಒಲವು
Image
NDA Leaders Meet: ದೆಹಲಿಯಲ್ಲಿ ಇಂದು ಎನ್​ಡಿಎ ನಾಯಕರ ಸಭೆ, ರಾಷ್ಟ್ರಪತಿ ಚುನಾವಣೆ ಕಾರ್ಯತಂತ್ರ ಚರ್ಚೆ ಸಾಧ್ಯತೆ
Image
ಬೆಂಬಲ ಘೋಷಿಸುವ ಮೂಲಕ ನವೀನ್ ಪಟ್ನಾಯಿಕ್ ರಾಖಿ ಕಟ್ಟಿದ ಸಹೋದರಿಗೆ ಕೊಟ್ಟ ಮಾತು ಉಳಿಸಿದರು: ದ್ರೌಪದಿ ಮುರ್ಮು
Image
ಬುಡಕಟ್ಟು ಜನರ ಮತಕ್ಕಾಗಿ ಮಾತ್ರ ಬಿಜೆಪಿ ದ್ರೌಪದಿ ಮುರ್ಮುರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು: ಮೇಧಾ ಪಾಟ್ಕರ್​​

ಭಾವನಾ ಗವಾಲಿ ಮತ್ತು ಶ್ರೀಕಾಂಕ್ ಶಿಂಧೆ ಸಭೆಗೆ ಹಾಜರಾಗಿಲ್ಲ ಎಂದು ಅವರು ಹೇಳಿದ್ದಾರೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

Published On - 6:03 pm, Mon, 11 July 22