ನೂತನ ಸಂಸತ್ ಭವನದ ಮೇಲೆ ಕಂಚಿನಿಂದ ಮಾಡಿದ ಬೃಹತ್ ರಾಷ್ಟ್ರ ಲಾಂಛನ; ಏನಿದರ ವಿಶೇಷತೆ?

ದೇಶದ ವಿವಿಧ ಭಾಗಗಳಿಂದ ಬಂದ 100ಕ್ಕಿಂತಲೂ ಹೆಚ್ಚು ಕಲಾವಿದರು ಈ ವಿನ್ಯಾಸ, ಕರಕುಶಲತೆ ಮತ್ತು ಲಾಂಛನವನ್ನು ನಿರ್ಮಿಸುವುಕ್ಕೆ ಕೈ ಜೋಡಿಸಿದ್ದು, 6 ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಇದಕ್ಕಾಗಿ ಶ್ರಮವಹಿಸಿದ್ದಾರೆ.

ನೂತನ ಸಂಸತ್ ಭವನದ ಮೇಲೆ ಕಂಚಿನಿಂದ ಮಾಡಿದ ಬೃಹತ್ ರಾಷ್ಟ್ರ ಲಾಂಛನ;  ಏನಿದರ ವಿಶೇಷತೆ?
ಬೃಹತ್ ರಾಷ್ಟ್ರ ಲಾಂಛನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 11, 2022 | 8:06 PM

ದೆಹಲಿಯಲ್ಲಿರುವ ನೂತನ ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರ ಲಾಂಛನವನ್ನು(national emblem) ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅನಾವರಣಗೊಳಿಸಿದ್ದಾರೆ. ಈ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪರಿಶುದ್ಧ ಕಂಚಿನಿಂದ ಮಾಡಲಾಗಿದ್ದು, ಒಟ್ಟು 9,500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ವಸ್ತು ಮತ್ತು ಕರಕುಶಲತೆಯ ದೃಷ್ಟಿಯಿಂದ ನೋಡುವುದಾದರೆದೇಶದ ಯಾವುದೇ ಭಾಗದಲ್ಲಿಯೂ ಈ ರೀತಿಯ ರಾಷ್ಟ್ರೀಯ ಲಾಂಛನ ಕಾಣಸಿಗುವುದಿಲ್ಲ. ದೇಶದ ವಿವಿಧ ಭಾಗಗಳಿಂದ ಬಂದ 100ಕ್ಕಿಂತಲೂ ಹೆಚ್ಚು ಕಲಾವಿದರು ಈ ವಿನ್ಯಾಸ, ಕರಕುಶಲತೆ ಮತ್ತು ಲಾಂಛನವನ್ನು ನಿರ್ಮಿಸುವುಕ್ಕೆ ಕೈ ಜೋಡಿಸಿದ್ದು, 6 ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಇದಕ್ಕಾಗಿ ಶ್ರಮವಹಿಸಿದ್ದಾರೆ. ಈ ಲಾಂಛನವನ್ನು ನೆಲಭಾಗದಿಂದ 32 ಮೀಟರ್ ಎತ್ತರದಲ್ಲಿರಿಸಿದ್ದು ಇದನ್ನು ಅಲ್ಲಿ ಸ್ಥಾಪಿಸುವುದೇ ದೊಡ್ಡ ಸವಾಲು ಆಗಿತ್ತು. ಈ ರೀತಿಯ ರಾಷ್ಟ್ರೀಯ ಲಾಂಛನವನ್ನು ನಿರ್ಮಿಸಬೇಕಾದರೆ ಸಮರ್ಪಣೆ, ನಿಖರವಾದ ಮೇಲ್ವಿಚಾರಣೆ,ಅಲ್ಲಿ ಸ್ಥಾಪನೆ ಮಾಡುವುದಕ್ಕೂ ಇರಬೇಕು ಕೌಶಲ. ಇವೆಲ್ಲವೂ ಆತ್ಮ ನಿರ್ಬರ್ ಭಾರತದ ವಿವಿಧ ಅಂಶಗಳನ್ನು ಬಿಂಬಿಸುತ್ತದೆ. ಇದನ್ನು ನೂತನ ಸಂಸತ್ ಕಟ್ಟಡದ ಮೇಲೆ ಇರಿಸಿದಾಗ ಇದು ಜನರಿಗಾಗಿ ಮತ್ತು ಜನರಿಂದ ಎಂಬ ಪ್ರಜಾಪ್ರಭುತ್ವದ ಸಿದ್ಧಾಂತವನ್ನು ಪ್ರತಿನಿಧಿಕರಿಸುತ್ತದೆ.

ಹೇಗಿದೆ ವಿನ್ಯಾಸ?

ರಾಷ್ಟ್ರೀಯ ಲಾಂಛನವನ್ನು ಸಾರಾನಾಥ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪ ಅಶೋಕ ಸಾರಾನಾಥ ಸಿಂಹ ಸ್ತಂಭದಿಂದ ತೆಗೆದುಕೊಳ್ಳಲಾಗಿದೆ. ಸಿಂಹ ಸ್ತಂಭವು ಸ್ತಂಭದ ಮೇಲ್ಭಾಗದಲ್ಲಿರುವ ವೃತ್ತಾಕಾರದ ಶೀರ್ಷ ಫಲಕದ ಮೇಲೆ ನಾಲ್ಕು ದಿಕ್ಕಿಗೆ ಮುಖಮಾಡಿದಂತಿರುವ ನಾಲ್ಕು ಸಿಂಹಗಳ ಮುಖಗಳಿವೆ. ಶೀರ್ಷ ಫಲಕದ ಮೇಲಿನ ಪಟ್ಟಿ ಮೇಲೆ ಉಬ್ಬು ಚಿತ್ರಣದಲ್ಲಿ ಒಂದು ಆನೆ, ಓಡುತ್ತಿರುವ ಕುದುರೆ, ಒಂದು ಗೂಳಿ ಮತ್ತು ಒಂದು ಸಿಂಹದ ಚಿತ್ರವನ್ನು ಕೆತ್ತಲಾಗಿದೆ.ಇವುಗಳನ್ನು ಧರ್ಮ ಚಕ್ರದಿಂದ ಪ್ರತ್ಯೇಕಿಸಲಾಗಿದೆ.

ಇದನ್ನೂ ಓದಿ
Image
Royal Bengal Raja: ದೇಶದ ಅತ್ಯಂತ ಹಳೆಯ ರಾಯಲ್ ಬೆಂಗಾಲ್ ಟೈಗರ್ “ರಾಜಾ” ನಿಧನ
Image
ವರ್ಗಾವಣೆ ಬೆದರಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿದ ಹೈಕೋರ್ಟ್​ ನ್ಯಾಯಮೂರ್ತಿ ಸೀಮಂತ್ ಕುಮಾರ್ ಸಿಂಗ್
Image
ರಾಷ್ಟ್ರಪತಿ ಚುನಾವಣೆ ಕುರಿತ ಸಭೆಯಲ್ಲಿ ಶಿವಸೇನಾದ 13 ಸಂಸದರು ಭಾಗಿ; ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ಸಹಮತ

ಇದನ್ನೂ ಓದಿ: PM Modi Unveils National Emblem: ನೂತನ ಸಂಸತ್​ ಭವನದ ಮೇಲೆ ನರೇಂದ್ರ ಮೋದಿಯಿಂದ ಬೃಹತ್ ರಾಷ್ಟ್ರ ಲಾಂಛನ ಅನಾವರಣ

ರಾಷ್ಟ್ರೀಯ ಲಾಂಛನವನ್ನು ತಯಾರಿಸುವ ಪ್ರಕ್ರಿಯೆ ಹೀಗಿತ್ತು

ಮೊದಲಿಗೆ ಗ್ರಾಫಿಕ್ ಸ್ಕೆಚ್ ಮಾಡಿದ ಮೇಲೆ ಅದನ್ನಾಧರಿಸಿ ಮಣ್ಣಿನ ಮಾದರಿಯನ್ನು ಮಾಡಲಾಯಿತು. ಎಫ್ ಪಿಆರ್ ಮಾದರಿಯನ್ನು ಸಕ್ಷಮ ಅಧಿಕಾರಿಗಳು ಅನುಮೋದಿಸಿದ ನಂತರವೇ ಮಣ್ಣಿನ ಮಾದರಿಯನ್ನು ರಚಿಸಲಾಗಿದೆ. ನಂತರ ಮೇಣದ ಮಾದರಿ ಮಾಡಿ ಆಮೇಲೆ ಕಂಚಿನ ಮಾದರಿ ನಿರ್ಮಿಸಲಾಗಿದೆ

ಮೇಣದ ಎರಕದ ಪ್ರಕ್ರಿಯೆ

ಜೇಡಿಮಣ್ಣಿನ ಅಚ್ಚನ್ನು ಮೊದಲು ತಯಾರಿಸಲಾಗುತ್ತದೆ.ಈ ಅಚ್ಚಿನ ಒಳಭಾಗವನ್ನು ಕರಗಿದ ಮೇಣದಿಂದ ಅಂತಿಮ ಕಂಚಿನ ಅಪೇಕ್ಷಿತ ಮಾದರಿಯ ದಪ್ಪಕ್ಕೆ ಬ್ರಷ್ ಮಾಡಲಾಗುತ್ತದೆ. ಅಚ್ಚನ್ನು ತೆಗೆದ ನಂತರ ಮೇಣದ ಚಿಪ್ಪನ್ನು ಶಾಖ-ನಿರೋಧಕ ಮಿಶ್ರಣದಿಂದ ತುಂಬಿಸಲಾಗುತ್ತದೆ. ಎರಕದ ಸಮಯದಲ್ಲಿ ಕಂಚನ್ನು ಸುರಿಯುವುದಕ್ಕೆ ಮೇಣದ ಕೊಳವೆಗಳನ್ನು ಬಳಸಲಾಗುತ್ತದೆ. ಇವುಗಳನ್ನು ಮೇಣದ ಚಿಪ್ಪಿನ ಹೊರಗಡೆ ಇರಿಸಲಾಗಿದೆ. ಇವುಗಳನ್ನು ಭದ್ರವಾಗಿರಿಸಲು ಲೋಹದ ಪಿನ್ ಗಳನ್ನು ಬಳಸಲಾಗಿದೆ. ಇದಾದ ನಂತರ ತಯಾರಾದ ಮೇಣದ ಅಚ್ಚನ್ನು ಸಂಪೂರ್ಣವಾಗಿ ಶಾಖ-ನಿರೋಧಕ ಫೈಬರ್ ಬಲವರ್ಧಿತ ಪ್ಲಾಸ್ಟಿಕ್ ಪದರಗಳಲ್ಲಿ ಮುಚ್ಚಲಾಗುತ್ತದೆ ಮತ್ತು ಸಂಪೂರ್ಣ ತಲೆಕೆಳಗಾಗಿಸಿ ಒಲೆಯಲ್ಲಿ ಇರಿಸಲಾಗುತ್ತದೆ. ಬಿಸಿ ಮಾಡುವ ಸಮಯದಲ್ಲಿ, ಪ್ಲ್ಯಾಸ್ಟರ್ ಒಣಗುತ್ತದೆ ಮತ್ತು ಮೇಣದ ಕೊಳವೆಗಳಿಂದ ರಚಿಸಲಾದ ನಾಳಗಳ ಮೂಲಕ ಮೇಣವು ಹೊರಹೋಗುತ್ತದೆ. ನಂತರ ಪ್ಲಾಸ್ಟರ್ ಅಚ್ಚನ್ನು ಮರಳಿನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಕರಗಿದ ಕಂಚನ್ನು ನಾಳಗಳ ಮೂಲಕ ಸುರಿಯಲಾಗುತ್ತದೆ. ಇದು ಮೇಣದಿಂದ ಉಳಿದು ಬಿಟ್ಟಿರುವ ಜಾಗವನ್ನು ತುಂಬುತ್ತದೆ. ಇದು ತಣಿದಾಗ ಹೊರಗಿನ ಪ್ಲಾಸ್ಟರ್ ಮತ್ತು ಕವಚವನ್ನು ತೆಗೆದು ಕಂಚಿನ ಅಂತಿಮ ಸ್ಪರ್ಶವನ್ನು ಕೊಡಲಾಗುತ್ತದೆ. ಕೊನೆಯದಾಗಿ ಇದನ್ನು ಪಾಲಿಶ್ ಮಾಡಿ ಇಡಲಾಗುತ್ತದೆ.

Published On - 8:00 pm, Mon, 11 July 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ