ಪೇರರಿವಾಲನ್ನಂತೆ ಬಿಡುಗಡೆ ಮಾಡಿ; ರಾಜೀವ್ ಗಾಂಧಿ ಹಂತಕ ರವಿಚಂದ್ರನ್ನಿಂದ ಸುಪ್ರೀಂಗೆ ಮೊರೆ
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಾಲನ್ನಂತೆ ನನ್ನನ್ನೂ ಬಿಡುಗಡೆ ಮಾಡಿ ಎಂದು ರಾಜೀವ್ ಗಾಂಧಿ ಹಂತಕ ರವಿಚಂದ್ರನ್ ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದಾರೆ .
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಅಪರಾಧಿ ಪಿ ರವಿಚಂದ್ರನ್ (P Ravichandran) ಸೋಮವಾರ ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ತನ್ನನ್ನು ಎಜಿ ಪೇರರಿವಾಲನ್ ಅವರಂತೆಯೇ ಬಿಡುಗಡೆ ಮಾಡಬೇಕು ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ. 30 ವರ್ಷಗಳಿಂದ ಜೈಲಿನಲ್ಲಿರುವ ರವಿಚಂದ್ರನ್ ತಮ್ಮ ಪ್ರಕರಣದ ವಿಚಾರಣೆ ನಡೆದು ಬಿಡುಗಡೆ ಆದೇಶ ಬರುವವರೆಗೂ ಮಧ್ಯಂತರ ಜಾಮೀನು ನೀಡಬೇಕು ಎಂದು ಕೇಳಿದ್ದಾರೆ. ಮೇ 18ರಂದು ಸುಪ್ರೀಂಕೋರ್ಟ್ ಪೇರರಿವಾಲನ್ ಬಿಡುಗಡೆಗೆ ಆದೇಶಿದ್ದು , ಈ ಪ್ರಕರಣದಲ್ಲಿ ಇನ್ನೂ 6 ಮಂದಿ ಜೈಲಿನಲ್ಲಿದ್ದಾರೆ. ಇದನ್ನು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ ರವಿಚಂದ್ರನ್, ವಕೀಲ ಆನಂದ ಸೆಲ್ವನ್ ಮೂಲಕ ಮನವಿ ಸಲ್ಲಿಸಿದ್ದಾರೆ. ರವಿಚಂದ್ರನ್ ಜೈಲಿನಲ್ಲಿ ಮಾಡಿದ ಕೆಲಸದ ಸಂಪಾದನೆಯಿಂದ ₹ 20,000ವನ್ನು ಅಮೆರಿಕದ ಹಾರ್ವರ್ಡ್ ಯುನಿವರ್ಸಿಟಿಯ ತಮಿಳು ವಿಭಾಗಕ್ಕೆ ಕೊಟ್ಟಿದ್ದಾರೆ. ಇದು ಅವರೊಬ್ಬ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಎಂಬುದನ್ನು ತೋರಿಸುತ್ತದೆ. ಆತನನ್ನು ಬಿಡುಗಡೆ ಮಾಡಿದರೆ ಜನರಿಗೆ ಯಾವುದೇ ಅಪಾಯವಿಲ್ಲ. 2016ರಿಂದ 2017ರ ವರೆಗೆ ಅವರು ಜೈಲಿನಲ್ಲಿ ದುಡಿದು ಹಣ ಸಂಪಾದಿಸಿದ್ದಾರೆ. ಅವರು ಸಾಮಾಜದಲ್ಲಿ ಕೆಚ್ಚ ಶಕ್ತಿಯಾಗಿರುವುದಿಲ್ಲ ಎಂದು ಮನವಿಯಲ್ಲಿ ಹೇಳಿದೆ.
ರವಿಚಂದ್ರನ್ ಈ ಹಿಂದೆ ತಾನೂ ಸೇರಿದಂತ ಜೈಲಿನಲ್ಲಿರುವ ಇತರ ದೋಷಿಗಳನ್ನು (ರಾಜೀವ್ ಗಾಂಧಿ ಹತ್ಯೆ ಪ್ರಕರಣ) ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದರು.
Published On - 5:37 pm, Mon, 11 July 22