Bhima Koregaon Case ಭೀಮಾ ಕೊರೆಗಾಂವ್- ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್​​ ಜಾಮೀನು ಅರ್ಜಿ ವಿಚಾರಣೆ ನಾಳೆ

ಪಿ. ವರವರ ರಾವ್ ಅವರು ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

Bhima Koregaon Case ಭೀಮಾ ಕೊರೆಗಾಂವ್- ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್​​ ಜಾಮೀನು ಅರ್ಜಿ ವಿಚಾರಣೆ ನಾಳೆ
ವರವರ ರಾವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 11, 2022 | 4:59 PM

ದೆಹಲಿ: ತೆಲುಗು ಕವಿ, ಭೀಮಾ ಕೊರೆಗಾಂವ್- ಎಲ್ಗಾರ್ ಪರಿಷದ್ (Bhima Koregaon-Elgar Parishad case) ಪ್ರಕರಣದ ಆರೋಪಿ ಪಿ. ವರವರ ರಾವ್ (Varavara Rao) ಅವರು ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ (Supreme Court) ಸೋಮವಾರ ಹೇಳಿದೆ. ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ನ್ಯಾಯಪೀಠವು ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಅವರು ದಾಖಲೆಗಳ ಸಂಕಲನವನ್ನು ದಾಖಲೆಯಾಗಿ ಇರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ ನಂತರ ಅರ್ಜಿ ವಿಚಾರಣೆ ನಾಳೆ ನಡೆಸುವುದಾಗಿ ಹೇಳಿದೆ. ದಾಖಲೆಗಳನ್ನು ಇಲ್ಲಿ ಇರಿಸುವುದಕ್ಕಾಗಿ ಅವಕಾಶ ಕೊಡಿ, ನಾಳೆ ಅದನ್ನು ತೆಗೆದುಕೊಳ್ಳಿ. ಅವರ ಮಧ್ಯಂತರ ರಕ್ಷಣೆ ನಾಳೆವರೆಗೆ ಇದೆ ಎಂದು ನ್ಯಾಯಮೂರ್ತಿ ಎಸ್ ಆರ್ ಭಟ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠಕ್ಕೆ ಮೆಹ್ತಾ ಹೇಳಿದ್ದಾರೆ.

ರಾವ್ ಪರವಾಗಿ ಹಾಜರಾದ ಹಾಜರಾದ ಹಿರಿಯ ವಕೀಲ ಆನಂದ್ ಗ್ರೋವರ್,ಈ ಬಗ್ಗೆ ತನಗೇನೂ ಆಕ್ಷೇಪಣೆ ಇಲ್ಲ ಎಂದು ಹೇಳಿದ್ದಾರೆ. ಇವತ್ತೇ ಮಾಡಬಹುದಾ? ನಾನು ರೆಡಿ, ನನ್ನ ಸ್ನೇಹಿತನೂ ರೆಡಿ . ನಾವು ಇವತ್ತೇ ಮುಗಿಸೋಣ ಎಂದು ಗ್ರೋವರ್ ಹೇಳಿದ್ದಾರೆ. ಆದರೆ ಇಂದು ಮಧ್ಯಾಹ್ನ 2ಗಂಟೆಗೆ ಆಮ್ರಪಾಲಿ ಮನೆ ಖರೀದಿದಾರರ ಪ್ರಕರಣದ ವಿಚಾರಣೆ ಇದೆ. ಹಾಗಾಗಿ ಈ ಪ್ರಕರಣವನ್ನು ಜುಲೈ 12ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಲಲಿತ್ ಹೇಳಿದ್ದಾರೆ.

ಬಾಂಬೆ ಹೈಕತೋರ್ಟ್ ಏಪ್ರಿಲ್ 13ಕ್ಕೆ ನೀಡಿದ ಆದೇಶವನ್ನು ಪ್ರಶ್ನಿಸಿ ವಕೀಲ ನೂಪುರ್ ಕುಮಾರ್ ಮೂಲಕ ರಾವ್ ಮನವಿ ಸಲ್ಲಿಸಿದ್ದರು. ದೂರುದಾರರು 83ರ ಹರೆಯದ ಖ್ಯಾತ ಕವಿ ಮತ್ತು ಭಾಷಣಕಾರರಾಗಿದ್ದಾರೆ. ಅವರು ವಿಚಾರಣೆ ಎದುರಿಸುತ್ತಿದ್ದು, ಈಗಾಗಲೇ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತಿರುವುದರಿಂದ ಮತ್ತು ಅವರ ವಯಸ್ಸನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕೆಂದು ಕೋರುತ್ತಿದ್ದೇವೆ ಎಂದಿದ್ದಾರೆ.

ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಲೆಕ್ಕಿಸದೆ ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಅದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಅವರನ್ನು ಹೈದರಾಬಾದ್ ಗೆ ಶಿಫ್ಟ್ ಮಾಡುವ ಮನವಿಯನ್ನೂ ಹೈಕೋರ್ಟ್ ನಿರಾಕರಿಸಿತ್ತು ಎಂದು ಮನವಿಯಲ್ಲಿ ಹೇಳಿದೆ.

2018 ಆಗಸ್ಟ್ 28ರಂದು ರಾವ್ ಅವರನ್ನು ಹೈದರಾಬಾದ್ ನಲ್ಲಿರುವ ನಿವಾಸದಿಂದ ಬಂಧಿಸಲಾಗಿತ್ತು. ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು 2018 ಜನವರಿ 8ರಂದು ಐಪಿಸಿಯ ವಿವಿಧ ಸೆಕ್ಷನ್ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದರು. ಸುಪ್ರೀಕೋರ್ಟ್ ಆದೇಶದನ್ವಯ ರಾವ್ ಅವರನ್ನು ಮೊದಲಿಗೆ ಗೃಹ ಬಂಧನದಲ್ಲಿರಿಸಲಾಗಿತ್ತು. 2018 ನವೆಂಬರ್ 17ರಂದು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ನಂತರ ತಲೋಜಾ ಜೈಲಿಗೆ ಹಾಕಲಾಗಿತ್ತು. 2021 ಫೆಬ್ರುವರಿ22ರಂದು ವೈದ್ಯಕೀಯ ಆಧಾರದ ಮೇಲೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು 2021 ಮಾರ್ಚ್ 6ರಂದು ಅವರು ಬಂಧಮುಕ್ತರಾಗಿದ್ದರು.

ಜೈಲಿನಲ್ಲಿ ರಾವ್ ಅವರು ಅನುಭವಿಸಿದ ನೋವು ಮತ್ತು ಅವರ ಆರೋಗ್ಯ ಸ್ಥಿತಿಯವ್ಯಾಪಕ ವಿವರಗಳನ್ನು ನೀಡಿದ ರಾವ್, ಫೆಬ್ರವರಿ 22, 2021 ರ ಹೈಕೋರ್ಟ್ ಆದೇಶವು ಅರ್ಜಿದಾರರು ದೀರ್ಘಕಾಲದವರೆಗೆ ವೈದ್ಯಕೀಯ ಜಾಮೀನಿನ ಮೇಲೆ ಮತ್ತು ಶಾಶ್ವತವಾಗಿ ವೈದ್ಯಕೀಯ ಆಧಾರದ ಮೇಲೆ ಇರಬಹುದೆಂದು ಆಲೋಚಿಸಿದೆ ಎಂದು ಹೇಳಿದರು. ಆಕ್ಷೇಪಾರ್ಹ ತೀರ್ಪು ಮತ್ತು ಆದೇಶದಲ್ಲಿ ನ್ಯಾಯಾಧೀಶರು ಹಿಂದಿನ ಆದೇಶವು ಸೀಮಿತ ಅವಧಿಗೆ ಜಾಮೀನು ಮಂಜೂರು ಮಾಡಿದ್ದರಿಂದ ಅದರ ಆಧಾರದ ಮೇಲೆ ಮುಂದುವರಿಯುವಲ್ಲಿ ಗಂಭೀರ ದೋಷವನ್ನು ಎಸಗಿದ್ದಾರೆ. ಜಾಮೀನು ನೀಡಿದ ನಂತರ ದೂರದಾರರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಅವರಿಗೆ ಹೊಕ್ಕುಳಿನ ಹರ್ನಿಯಾ ಇದ್ದು ಅವರಿಗೆ ಸರ್ಜರಿ ಅಗತ್ಯವಿದೆ. ಎರಡೂ ಕಣ್ಣುಗಳ ಕ್ಯಾಟರ್ಯಾಕ್ಟ್ ಚಿಕಿತ್ಸೆಗೊಳಪಡಬೇಕಿದೆ. ಮುಂಬೈಯಲ್ಲಿ ಇದಕ್ಕೆ ತಗಲುವ ವೆಚ್ಚ ಹೆಚ್ಚು ಎಂದು ಅವರು ಇಲ್ಲಿ ಚಿಕಿತ್ಸೆ ಮಾಡಿಕೊಳ್ಳಲಿಲ್ಲ. ಅವರ ನರಸಂಬಂಧಿ ಕಾಯಿಲೆಯೂ ಇದೆ. ಈ ಪರಿಸ್ಥಿತಿಯಲ್ಲಿ ಪ್ರಕರಣದ ವಿಚಾರಣೆಗೆ 10 ವರ್ಷಗಳು ಬೇಕಾಗುತ್ತದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಫಾದರ್ ಸ್ಟಾನ್ ಸ್ವಾಮಿ ಕೂಡಾ ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುವ ಮುನ್ನವೇ ಸಾವಿಗೀಡಾದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Published On - 4:17 pm, Mon, 11 July 22