Gujarat Flood: ಗುಜರಾತ್‌ನಲ್ಲಿ ಭಾರೀ ಪ್ರವಾಹದಿಂದ 3,000 ಜನರ ಸ್ಥಳಾಂತರ; ಶಾಲಾ-ಕಾಲೇಜುಗಳಿಗೆ ರಜೆ
ಮಳೆಯಿಂದಾಗಿ ಹಲವಾರು ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿರುವುದರಿಂದ ಗುಜರಾತ್‌ನಲ್ಲಿ 3,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಅಹಮದಾಬಾದ್: ಗುಜರಾತ್‌ನಲ್ಲಿ (Gujarat Rain) ಹಲವೆಡೆ ಭಾರೀ ಮಳೆಯಾಗಿದ್ದು, ಕೆಲವು ನದಿಗಳ ನೀರಿನ ಮಟ್ಟದ ಏರಿಕೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಛೋಟೌದೇಪುರ ಸೇರಿದಂತೆ ದಕ್ಷಿಣ ಗುಜರಾತ್‌ನಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಭಾನುವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದುವರೆಗೂ ಪ್ರವಾಹಪೀಡಿತ ಸ್ಥಳಗಳಿಂದ 3,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ.
ಮಳೆಯಿಂದಾಗಿ ಹಲವಾರು ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿರುವುದರಿಂದ ಗುಜರಾತ್‌ನಲ್ಲಿ 3,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವ ಕಡೆ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ.
#WATCH | Gujarat: NDRF teams and local administration carry out relief and rescue works in Valsad after the low-lying areas in the district gets flooded due to heavy rainfall (10.07) pic.twitter.com/4ZPNLzVceS
— ANI (@ANI) July 10, 2022
ದಕ್ಷಿಣ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಕೆಲವು ನದಿಗಳ ನೀರಿನ ಮಟ್ಟ ಏರಿಕೆಗೆ ಕಾರಣವಾಗಿದ್ದು, ವಿವಿಧ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಛೋಟೌದೈಪುರದಲ್ಲಿ 400, ನವಸಾರಿಯಲ್ಲಿ 550 ಮತ್ತು ವಲ್ಸಾದ್‌ನಲ್ಲಿ 470 ಸೇರಿದಂತೆ ಗುಜರಾತ್‌ನಲ್ಲಿ ಒಟ್ಟು 3,250 ಜನರನ್ನು ಸ್ಥಳಾಂತರಿಸಲಾಗಿದೆ. ಹೆಚ್ಚಿನ ಜನರ ಸ್ಥಳಾಂತರಕ್ಕೆ ಸಿದ್ಧರಾಗುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Assam Flood: ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 190ಕ್ಕೆ ಏರಿಕೆ; 40,000 ಮನೆಗಳಿಗೆ ಹಾನಿಯಾಗಿದೆ ಎಂದ ಸಿಎಂ
गुजरात: वलसाड में भारी बारिश के बाद औरंगा नदी का जलस्तर बढ़ा जिससे निचले इलाकों में जलभराव होने के बाद लोग अपने घरों में फंस गए। NDRF की टीमों ने फंसे लोगों को हेलीकॉप्टर की मदद से बचाया। #Valsad #GujaratRains #Gujarat #Flood #NewsUpdate pic.twitter.com/XKq93qg3a8
— Precious Viral (@preciousviral) July 11, 2022
ಗುಜರಾತ್‌ನ ವಲ್ಸಾದ್, ನವಸಾರಿ, ತಾಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಪಾಲ್ಡಿ, ವಸಾನ ಮತ್ತು ಎಲ್ಲಿಸ್ ಸೇತುವೆ ಪ್ರದೇಶಗಳಲ್ಲಿ ಗರಿಷ್ಠ 241.3 ಮಿಮೀ ಮಳೆಯಾಗಿದೆ. ದಕ್ಷಿಣ ಗುಜರಾತ್‌ನ ಜಿಲ್ಲೆಗಳಾದ ಡ್ಯಾಂಗ್, ನವಸಾರಿ ಮತ್ತು ವಲ್ಸಾದ್‌ನಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಹಲವಾರು ಇತರ ಜಿಲ್ಲೆಗಳಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ. ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಿಂದ ದಕ್ಷಿಣದ ತೆಲಂಗಾಣ ರಾಜ್ಯಕ್ಕೆ ಮುಂಗಾರು ಮಾರುತಗಳು ಅಬ್ಬರಿಸುತ್ತಿವೆ. ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ.
Gujarat | Due to flash floods and continuous heavy rainfall, the bridge on the road connecting Panchol and Kumbhiya villages in Tapi district was washed away (10.07) pic.twitter.com/n9m9lBJbay
— ANI (@ANI) July 11, 2022
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯೊಂದಿಗೆ, ಭಾರತೀಯ ಹವಾಮಾನ ಇಲಾಖೆ (IMD) ಹಲವಾರು ನಗರಗಳಿಗೆ ಭಾರೀ ಮಳೆ ಎಚ್ಚರಿಕೆಯನ್ನು ನೀಡಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ನೀಡಲಾಗಿದ್ದು, ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Gujarat Flood: ಗುಜರಾತ್‌ನಲ್ಲಿ ಭಾರೀ ಪ್ರವಾಹ; ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ಜೀವ ಉಳಿಸಿದ ಪೊಲೀಸ್
#WATCH | Gujarat: Flood-like situation worsens in Valsad, as water enters low-lying areas amid heavy rainfall pic.twitter.com/FO8BNCFYja
— ANI (@ANI) July 11, 2022
ಒರ್ಸಾಂಗ್ ನದಿ ಮಟ್ಟದಲ್ಲಿ ಏರಿಕೆಯಾದ ನಂತರ ವಲ್ಸಾದ್‌ನ ಕೆಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಕಾವೇರಿ ಮತ್ತು ಅಂಬಿಕಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನವಸಾರಿ ಜಿಲ್ಲೆಯಲ್ಲಿಯೂ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಗುಜರಾತ್ ರಾಜ್ಯದಲ್ಲಿ 13 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು 16 ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (ಎಸ್‌ಡಿಆರ್‌ಎಫ್) ನಿಯೋಜಿಸಲಾಗಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಎಸ್‌ಡಿಆರ್‌ಎಫ್‌ನ ಒಂದು ತುಕಡಿ ವಡೋದ್ರಾದಿಂದ ಛೋಟೌದೈಪುರಕ್ಕೆ ತೆರಳಿದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
Published On - 3:11 pm, Mon, 11 July 22