ಶುರುವಾಯಿತು ಚಿನ್ನ -ಬೆಳ್ಳಿ ಮಾಸ್ಕ್ ಗಳ ಟ್ರೆಂಡ್, 9 ಮಂದಿ ಆರ್ಡರ್​ ಕೊಟ್ಟಿದ್ದಾರಂತೆ!

|

Updated on: Jul 21, 2020 | 11:26 AM

ತಮಿಳುನಾಡು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೆ ಇದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ದೇಶದಲ್ಲಿ ಕಡ್ಡಾಯವಾಗಿದ್ದು ಜನರು ಮಾಸ್ಕ್ ಧರಿಸುವುದರಲ್ಲಿಯೂ ವಿಭಿನ್ನತೆ ಕೇಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಂಬೈನ ಉದ್ಯಮಿ ಭಾರೀ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಸುದ್ಧಿಯಾಗಿದ್ದ. ಜೊತೆಗೆ ಕಳೆದ ವಾರವಷ್ಟೇ ಒಡಿಸ್ಸಾದ ಉದ್ಯಮಿಯೂ ತನಗೆ ಚಿನ್ನದ ಮೇಲಿರುವ ವ್ಯಾಮೋಹದಿಂದಾಗಿ ಮುಂಬೈನಲ್ಲಿ ಚಿನ್ನದ ಮಾಸ್ಕ್  ಖರೀದಿಸಿದ್ದ. ಈಗ ಅದನ್ನೇ ಉದ್ಯಮವಾಗಿ ಮಾಡಿಕೊಂಡಿರುವ ತಮಿಳುನಾಡಿನ ಕೊಯಂಬತ್ತೂರಿನ ರಾಧಾಕೃಷ್ಣ ಸುಂದರಂ ಆಚಾರ್ಯ ನೆಂಬ […]

ಶುರುವಾಯಿತು ಚಿನ್ನ -ಬೆಳ್ಳಿ ಮಾಸ್ಕ್ ಗಳ ಟ್ರೆಂಡ್, 9 ಮಂದಿ ಆರ್ಡರ್​ ಕೊಟ್ಟಿದ್ದಾರಂತೆ!
Follow us on

ತಮಿಳುನಾಡು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೆ ಇದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ದೇಶದಲ್ಲಿ ಕಡ್ಡಾಯವಾಗಿದ್ದು ಜನರು ಮಾಸ್ಕ್ ಧರಿಸುವುದರಲ್ಲಿಯೂ ವಿಭಿನ್ನತೆ ಕೇಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮುಂಬೈನ ಉದ್ಯಮಿ ಭಾರೀ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಸುದ್ಧಿಯಾಗಿದ್ದ. ಜೊತೆಗೆ ಕಳೆದ ವಾರವಷ್ಟೇ ಒಡಿಸ್ಸಾದ ಉದ್ಯಮಿಯೂ ತನಗೆ ಚಿನ್ನದ ಮೇಲಿರುವ ವ್ಯಾಮೋಹದಿಂದಾಗಿ ಮುಂಬೈನಲ್ಲಿ ಚಿನ್ನದ ಮಾಸ್ಕ್  ಖರೀದಿಸಿದ್ದ.

ಈಗ ಅದನ್ನೇ ಉದ್ಯಮವಾಗಿ ಮಾಡಿಕೊಂಡಿರುವ ತಮಿಳುನಾಡಿನ ಕೊಯಂಬತ್ತೂರಿನ ರಾಧಾಕೃಷ್ಣ ಸುಂದರಂ ಆಚಾರ್ಯ ನೆಂಬ ಚಿನ್ನದ ಕುಶಲ ಕರ್ಮಿಯೊಬ್ಬರು ಚಿನ್ನ ಮತ್ತು ಬೆಳ್ಳಿಯ ಮಾಸ್ಕ್ ತಯಾರಿಕೆಗೆ ಮುಂದಾಗಿದ್ದಾರೆ.

18 ಕ್ಯಾರೆಟ್ ಚಿನ್ನವನ್ನು ಬಳಸಿಕೊಂಡು ತಯಾರಿಸಿದ ಮಾಸ್ಕ್ ಗೆ 2.75 ಲಕ್ಷ ಬೆಲೆ ನಿಗದಿ ಮಾಡಿದ್ದು, ಇನ್ನು ಬೆಳ್ಳಿಯ ಮಾಸ್ಕ್ ಗೆ 15,000 ರೂ ಬೆಲೆ ನಿಗದಿ ಮಾಡಿದ್ದಾರೆ. ಜೊತೆಗೆ ಈಗಾಗಲೇ 9 ಮಾಸ್ಕ್ ಗಳನ್ನು ತಯಾರಿಸಿಕೊಡುವಂತೆ ಆರ್ಡರ್ ಕೂಡ ಬಂದಿದೆಯಂತೆ.

Published On - 11:18 am, Tue, 21 July 20