N-95 ಮಾಸ್ಕ್ ಕೊರೊನಾ ತಡೆಯುತ್ತಾ? ಮಾಸ್ಕ್ ಬಳಸುವ ಮುನ್ನ ಇರಲಿ ಎಚ್ಚರಾ
ದೆಹಲಿ: ಮಹಾಮಾರಿ ಕೊರೊನಾದಿಂದ ಜನ ಮುಖ ಮುಚ್ಚಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವು ಬಳಸುತ್ತಿರೋ ಫೇಸ್ ಮಾಸ್ಕ್ ಎಷ್ಟು ಸೂಕ್ತ? ಫೇಸ್ ಮಾಸ್ಕ್ ಧರಿಸುವುದರಿಂದ ವೈರಸ್ ತಡೆಯಬಹುದು. ಆದರೆ N-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸದಿದ್ರೆ ಹೆಮ್ಮಾರಿ ವಕ್ಕರಿಸುತ್ತೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ. N-95 ಮಾಸ್ಕ್ ಬಳಸುವ ಮುನ್ನ ಎಚ್ಚರ ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಎನ್-95 ಮಾಸ್ಕ್ ಬಳಕೆದಾರರು ಮಾಸ್ಕ್ ಬಳಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ N -95 ಮಾಸ್ಕ್ ಗಳು […]
ದೆಹಲಿ: ಮಹಾಮಾರಿ ಕೊರೊನಾದಿಂದ ಜನ ಮುಖ ಮುಚ್ಚಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವು ಬಳಸುತ್ತಿರೋ ಫೇಸ್ ಮಾಸ್ಕ್ ಎಷ್ಟು ಸೂಕ್ತ? ಫೇಸ್ ಮಾಸ್ಕ್ ಧರಿಸುವುದರಿಂದ ವೈರಸ್ ತಡೆಯಬಹುದು. ಆದರೆ N-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸದಿದ್ರೆ ಹೆಮ್ಮಾರಿ ವಕ್ಕರಿಸುತ್ತೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ.
N-95 ಮಾಸ್ಕ್ ಬಳಸುವ ಮುನ್ನ ಎಚ್ಚರ ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಎನ್-95 ಮಾಸ್ಕ್ ಬಳಕೆದಾರರು ಮಾಸ್ಕ್ ಬಳಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ N -95 ಮಾಸ್ಕ್ ಗಳು ಕೊರೊನಾ ವೈರಸ್ ಹರಡದಂತೆ ತಡೆಯುತ್ತೆ. ಆದ್ರೆ ಅದನ್ನ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು ಹಾಗೂ ವಿಲೇವಾರಿ ಮಾಡಬೇಕು. ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು.
ಸಾರ್ವಜನಿಕರು ಎನ್-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಕೆ ಮಾಡ್ತಿಲ್ಲಾ. N-95 ಮಾಸ್ಕ್ಗಳನ್ನ ತಪ್ಪಾಗಿ ಬಳಕೆ ಮಾಡ್ತಾ ಇದ್ದಾರೆ. ಮಾಸ್ಕ್ ಧರಿಸುವ ಮತ್ತು ವಿಲೇವಾರಿ ಮಾರ್ಗಸೂಚಿಗಳನ್ನ ಪಾಲಿಸುವಂತೆ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗರ್ಗ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಹಾಗೂ ಸಾರ್ವಜನಿಕರು ಮನೆಯಲ್ಲಿಯೇ ತಯಾರಿಸಿದ ಬಟ್ಟೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ.