Agniveer Reservation: ದೇಶದ ಗಡಿ ಕಾಯುವ ಅಗ್ನಿವೀರರಿಗೆ ರೈಲ್ವೆ ಉದ್ಯೋಗದಲ್ಲಿ ಮೀಸಲಾತಿ

ದೇಶದ ಗಡಿ ಕಾಯುವ ಅಗ್ನಿವೀರ(Agniveer)ರಿಗೆ ಭಾರತೀಯ ರೈಲ್ವೆಯು ಭರ್ಜರಿ ಉಡುಗೊರೆ ನೀಡಿದೆ, ರೈಲ್ವೆ ಇಲಾಖೆ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.15ರಷ್ಟು ಮೀಸಲಿಡುವುದಾಗಿ ತಿಳಿಸಿದೆ.

Agniveer Reservation: ದೇಶದ ಗಡಿ ಕಾಯುವ ಅಗ್ನಿವೀರರಿಗೆ ರೈಲ್ವೆ ಉದ್ಯೋಗದಲ್ಲಿ ಮೀಸಲಾತಿ
ಅಗ್ನಿವೀರ್
Image Credit source: Punekar News

Updated on: May 12, 2023 | 7:56 AM

ದೇಶದ ಗಡಿ ಕಾಯುವ ಅಗ್ನಿವೀರ(Agniveer)ರಿಗೆ ಭಾರತೀಯ ರೈಲ್ವೆಯು ಭರ್ಜರಿ ಉಡುಗೊರೆ ನೀಡಿದೆ, ರೈಲ್ವೆ ಇಲಾಖೆ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.15ರಷ್ಟು ಮೀಸಲಿಡುವುದಾಗಿ ತಿಳಿಸಿದೆ. ರೈಲ್ವೆ ಇಲಾಖೆಯ ಲೆವೆಲ್​ 1 ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಿರಿಸಲಾಗುತ್ತದೆ, ಲೆವೆಲ್​ 2, ಗೆಜೆಟೆಡ್​ ಅಲ್ಲದ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಿಡಲಾಗುತ್ತದೆ, ಒಟ್ಟು ಶೇ. 15 ಮೀಸಲಾತಿ ಕಲ್ಪಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.

ವಿವಿಧ ಇಲಾಖೆಗಳಲ್ಲಿನ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ ನಡೆಯುವ ನೇರ ನೇಮಕಾತಿಯಲ್ಲಿ ರೈಲ್ವೆಯು ಅಗ್ನಿವೀರರಿಗೆ ಶೇ.15ರಷ್ಟು ಮೀಸಲಾತಿ ನೀಡಲಿದೆ. ಅಗ್ನಿವೀರರಿಗಾಗಿ ರೈಲ್ವೆಯ ಭದ್ರತಾ ಪಡೆಗಳಲ್ಲಿ ಕೂಡ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಗುತ್ತದೆ, ಮೊದಲ ಬ್ಯಾಚ್​ನ ಅಗ್ನಿವೀರರಿಗೆ ವಯೋಮಿತಿಯಲ್ಲಿ 5 ವರ್ಷ ಹಾಗೂ ನಂತರದ ಬ್ಯಾಚ್​ಗಳ ಅಗ್ನಿವೀರರಿಗೆ 3 ವರ್ಷಗಳಷ್ಟು ಸಡಿಲಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: Agniveer Scheme: ಅಗ್ನಿವೀರ್ ಯೋಜನೆಯಡಿ ಭಾರತೀಯ ನೌಕಾಪಡೆಗೆ ಮೊದಲ ಬಾರಿಗೆ 341 ಮಹಿಳೆಯರ ನೇಮಕ

ಕಳೆದ ವರ್ಷ ಕೇಂದ್ರವು ಪ್ರಾರಂಭಿಸಿದ ‘ಅಗ್ನಿಪಥ್’ ನೇಮಕಾತಿ ಯೋಜನೆಯಡಿ, ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಕೇವಲ 25 ಪ್ರತಿಶತದಷ್ಟು ಅಗ್ನಿವೀರ್‌ಗಳನ್ನು ಮಾತ್ರ ಪಡೆಯಲಾಗುತ್ತದೆ ಮತ್ತು ಉಳಿದವರು ನಿವೃತ್ತರಾಗುತ್ತಾರೆ ಎಂಬುದು ಗಮನಾರ್ಹ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:55 am, Fri, 12 May 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us