ದೇಶದ ಪ್ರತಿಯೊಬ್ಬರಿಗೂ 4000 ರೂ.ನೀಡಲಿದೆಯಾ ಕೇಂದ್ರ ಸರ್ಕಾರ? -ವೈರಲ್ ಆಗುತ್ತಿರುವ ಸಂದೇಶದ ಹಿಂದಿನ ಸತ್ಯ ಇಲ್ಲಿದೆ

| Updated By: Lakshmi Hegde

Updated on: Jul 03, 2021 | 9:22 AM

ಜೂ.28ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೊವಿಡ್​ 19 ಪರಿಹಾರಕ್ಕಾಗಿ ಒಟ್ಟು 8 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಸಂದೇಶ ವೈರಲ್​ ಆಗುತ್ತಿದೆ.

ದೇಶದ ಪ್ರತಿಯೊಬ್ಬರಿಗೂ 4000 ರೂ.ನೀಡಲಿದೆಯಾ ಕೇಂದ್ರ ಸರ್ಕಾರ? -ವೈರಲ್ ಆಗುತ್ತಿರುವ ಸಂದೇಶದ ಹಿಂದಿನ ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ 19 ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ 4000 ರೂಪಾಯಿ ನೀಡುತ್ತಿದೆ..ಹೀಗೊಂದು ವಾಟ್ಸ್​ ಆ್ಯಪ್​ ಸಂದೇಶ ನಿಮಗೂ ಬಂದಿದ್ದರೆ ಅಥವಾ ಫೇಸ್​ಬುಕ್​​ ಸೇರಿ ಇನ್ಯಾವುದೇ ಸೋಷಿಯಲ್​ ಮೀಡಿಯಾ ಫ್ಲಾಟ್​ಫಾರಂನಲ್ಲಿ ನೀವು ಇದನ್ನು ಓದಿದ್ದರೆ ಅದನ್ನು ಅಲ್ಲೇ ನಿರ್ಲಕ್ಷಿಸಿಬಿಡಿ. ಯಾಕೆಂದರೆ ಇದು ಸತ್ಯವಲ್ಲ. ಕೇಂದ್ರ ಸರ್ಕಾರ ಇಂಥ ಹಣಕಾಸು ನೆರವಿನ ಯಾವುದೇ ನಿರ್ಧಾರವನ್ನೂ ಘೋಷಿಸಿಲ್ಲ ಎಂದು ಪಿಐಬಿ (ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೋ) ಟ್ವೀಟ್ ಮಾಡಿದೆ.

ಜೂ.28ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೊವಿಡ್​ 19 ಪರಿಹಾರಕ್ಕಾಗಿ ಒಟ್ಟು 8 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಕೊವಿಡ್​ 19 ನಿಂದ ಸಮಸ್ಯೆಗೊಳಗಾದವರಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಮತ್ತು ಕಳೆದ ವರ್ಷ ಅನುಷ್ಠಾನಕ್ಕೆ ತರಲಾದ ಆತ್ಮನಿರ್ಭರ ಭಾರತದಡಿ ಇರುವ ತುರ್ತು ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​​ನಡಿ 1.5 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದರು. ಹೀಗೆ ಹಣಕಾಸು ಮಂತ್ರಿ ಕೊವಿಡ್ 19 ಹೊಸ ಪ್ಯಾಕೇಜ್​ ಘೋಷಣೆ ಮಾಡಿದ ಬೆನ್ನಲ್ಲೇ ಹೀಗೊಂದು ತಪ್ಪು ಮಾಹಿತಿ ಹರಡಲು ಶುರುವಾಗಿತ್ತು.

ಹಾಗೇ ಕೊರೊನಾ ಮೂರನೇ ಅಲೆ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜುಲೈ 1ರಿಂದ 31ರವರೆಗೆ ದೇಶಾದ್ಯಂತ ಲಾಕ್​ಡೌನ್​ ಹೇರಲಿದ್ದಾರೆ ಎಂಬ ಪೋಸ್ಟ್​ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅದೂ ಕೂಡ ಸುಳ್ಳು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂಥ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದೂ ಪಿಐಬಿ ಟ್ವೀಟ್ ಮಾಡಿದೆ.

ಇದನ್ನೂ ಓದಿ:ಬಾಹುಬಲಿಯೂ ಮಾಡಿರದ ದಾಖಲೆಯನ್ನು ಮಾಡಿದ ‘ಕೆಜಿಎಫ್​ 2’; ಇಲ್ಲಿದೆ ಪಕ್ಕಾ ಲೆಕ್ಕ

Government giving 4000 Rs to all under Covid scheme check here to Know trouth behind this message

Published On - 9:21 am, Sat, 3 July 21