ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ: ಬೆಳಗ್ಗೆ 9 ಗಂಟೆಗಲ್ಲ ಬದಲಿಗೆ 7.30ಕ್ಕೆ ಕಚೇರಿಗೆ ಬರಬೇಕು

|

Updated on: May 03, 2023 | 8:02 AM

ಸರ್ಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಭಾರಿ ಬದಲಾವಣೆ ಮಾಡಲಾಗಿದ್ದು, ಇನ್ನುಮುಂದೆ 9-5 ಅಲ್ಲ 7.30ರಿಂದ 2 ಗಂಟೆಯವರೆಗೆ ಕೆಲಸ ಮಾಡಬೇಕು.

ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ: ಬೆಳಗ್ಗೆ 9 ಗಂಟೆಗಲ್ಲ ಬದಲಿಗೆ 7.30ಕ್ಕೆ ಕಚೇರಿಗೆ ಬರಬೇಕು
ಸರ್ಕಾರಿ ಕಚೇರಿ
Image Credit source: The Hans India
Follow us on

ಸರ್ಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇನ್ನುಮುಂದೆ 9-5 ಗಮಟೆಯವರೆಗೆ ಅಲ್ಲ ಬದಲಾಗಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು. ಇದು ಕರ್ನಾಟಕದ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವುದಿಲ್ಲ, ಇಂತಹ ಹೊಸ ಆದೇಶವನ್ನು ಹೊರಡಿಸಿರುವುದು ಪಂಜಾಬ್ ಸರ್ಕಾರ. ಹೊಸ ವೇಳಾಪಟ್ಟಿಯಲ್ಲಿ, ಭಗವಂತ್ ಮಾನ್ ಸರ್ಕಾರವು ಅರ್ಧ ಗಂಟೆ ಊಟದ ವಿರಾಮವನ್ನು ತೆಗೆದುಹಾಕಿದೆ. ಇನ್ನೂ, ನೌಕರರು ಮೊದಲಿಗಿಂತ ಒಂದು ಗಂಟೆ ಕಡಿಮೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪಂಜಾಬ್ ಸರ್ಕಾರವು ವಿದ್ಯುತ್ ವೆಚ್ಚವನ್ನು ಉಳಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಉದ್ಯೋಗಿಗಳಿಗೆ ಹೊಸ ಕಚೇರಿ ಸಮಯವನ್ನು ಘೋಷಿಸಿದೆ. ಹೊಸ ಕೆಲಸದ ಅವಧಿಯು ಜುಲೈ 15 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಇದರ ಪರಿಣಾಮವಾಗಿ ಅಂದಾಜು 40-42 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡೀಗಢದ ಸಿವಿಲ್ ಸೆಕ್ರೆಟರಿಯೇಟ್‌ಗೆ ಬೆಳಿಗ್ಗೆ 7:28 ಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿ ಮುಖ್ಯಮಂತ್ರಿ ಭಗವಂತ್ ಮಾನ್ ಆಗಮಿಸಿದ್ದರು. ಹೊಸ ಕೆಲಸದ ಸಮಯವು ಸರ್ಕಾರಿ ಕಚೇರಿಗಳಲ್ಲಿ ಗರಿಷ್ಠ ಸೂರ್ಯನ ಬೆಳಕನ್ನು ಬಳಸಬಹುದಾಗಿದೆ.

ಮತ್ತಷ್ಟು ಓದಿ: ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು, ನಾವು ನೌಕರರು ಮತ್ತು ಜನರೊಂದಿಗೆ ಮಾತನಾಡಿದ್ದೇವೆ ಮತ್ತು ಅವರು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಕ್ರಮವು ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ ಮತ್ತು ವಿದ್ಯುತ್ ಒಂದು ದೊಡ್ಡ ಸಮಸ್ಯೆ ಎಂದು ಅವರು ಹೇಳಿದರು.

ಸರ್ಕಾರಿ ನೌಕರರು, ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಹಿಡಿದು ಸೂಪರಿಂಟೆಂಡೆಂಟ್‌ಗಳು ಮತ್ತು ಪ್ಯೂನ್‌ಗಳವರೆಗೆ, ಪಂಜಾಬ್‌ನ ಹಲವು ಸ್ಥಳಗಳಲ್ಲಿ ಬೆಳಿಗ್ಗೆ 7:30 ರ ಗಡುವಿನ ಮೊದಲು ತಮ್ಮ ತಮ್ಮ ಕಚೇರಿಗಳಿಗೆ ಹೋಗುತ್ತಿರುವುದು ಕಂಡುಬಂದಿದೆ. ಕ್ಯಾಬಿನೆಟ್ ಮಂತ್ರಿಗಳು ಸಮಯಕ್ಕಿಂತ ಮುಂಚಿತವಾಗಿ ತಮ್ಮ ಕಚೇರಿಗಳನ್ನು ತಲುಪಿದ ಕಾರಣ ಹೊಸ ಟೈಮ್‌ಲೈನ್‌ಗೆ ಬದ್ಧರಾಗಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ