Corbevax Vaccine: ಕೊವಿಡ್ ಹೆಚ್ಚಳದ ನಡುವೆ 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಬಳಕೆಗೆ ಶಿಫಾರಸು

| Updated By: ಸುಷ್ಮಾ ಚಕ್ರೆ

Updated on: Apr 21, 2022 | 7:06 PM

ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಎರಡು ಕೋವಿಡ್-19 ಲಸಿಕೆಗಳನ್ನು ನೀಡುತ್ತಿದೆ. ಕಾರ್ಬ್​ವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತಿದೆ.

Corbevax Vaccine: ಕೊವಿಡ್ ಹೆಚ್ಚಳದ ನಡುವೆ 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಬಳಕೆಗೆ ಶಿಫಾರಸು
ಕಾರ್ಬ್​ವ್ಯಾಕ್ಸ್​ ಲಸಿಕೆ
Follow us on

ನವದೆಹಲಿ: ಭಾರತದಲ್ಲಿ ಮತ್ತೆ ಕೊವಿಡ್ ಕೇಸುಗಳು ಹೆಚ್ಚುತ್ತಿವೆ. ಹೀಗಾಗಿ, ಕೆಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇದರ ನಡುವೆ DCGIನ ವಿಷಯ ತಜ್ಞರ ಸಮಿತಿ (SEC) 5ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಬಯೋ ಇ ಕಾರ್ಬ್​ವ್ಯಾಕ್ಸ್​ (Corbevax) ಲಸಿಕೆಯ ಬಳಕೆಯನ್ನು ಶಿಫಾರಸು ಮಾಡಿದೆ. 5ರಿಂದ 12 ವರ್ಷದ ಮಕ್ಕಳಲ್ಲಿ ಕಾರ್ಬ್​ವ್ಯಾಕ್ಸ್​ ಲಸಿಕೆಯ ಬಳಕೆಯನ್ನು ಚರ್ಚಿಸಲು ಸಮಿತಿ ಸಭೆ ಸೇರಿತ್ತು.

ನ್ಯೂಸ್ 18 ಈ ಹಿಂದೆ ವರದಿ ಮಾಡಿದಂತೆ 5-12 ವರ್ಷ ವಯಸ್ಸಿನ ಮಕ್ಕಳಲ್ಲಿ ಬಯೋ ಇ ಕಾರ್ಬ್​ವ್ಯಾಕ್ಸ್​ ಲಸಿಕೆಯ ಬಳಕೆಯನ್ನು ಚರ್ಚಿಸಲು ಸಮಿತಿಯು ಸಭೆ ನಡೆಸಿ, ಶಿಫಾರಸುಗಳನ್ನು ಈಗ SECಯಿಂದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಕಳುಹಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅಂತಿಮ ಅನುಮೋದನೆ ನೀಡುವ ಮೊದಲು DCGIಯ ಅನುಮೋದನೆಯನ್ನು ಈಗ ಕಾಯಲಾಗುತ್ತಿದೆ.

ಕಾರ್ಬ್​ವ್ಯಾಕ್ಸ್ ಅನ್ನು ಪ್ರಸ್ತುತ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ. ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಎರಡು ಕೋವಿಡ್-19 ಲಸಿಕೆಗಳನ್ನು ನೀಡುತ್ತಿದೆ. ಭಾರತದಲ್ಲಿ ಮಕ್ಕಳ ಲಸಿಕೆಗಳ ಮೊದಲ ಹಂತದಲ್ಲಿ – ಈ ವರ್ಷ ಜನವರಿ 3ರಂದು ಪ್ರಾರಂಭವಾಯಿತು. ಕೋವಿಡ್ ಲಸಿಕೆಯನ್ನು 15-18 ವರ್ಷ ವಯಸ್ಸಿನ ಮಕ್ಕಳಿಗೆ ಘೋಷಿಸಲಾಯಿತು. ನಂತರ ಇದನ್ನು ಮಾರ್ಚ್ 16ರಿಂದ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ವಿಸ್ತರಿಸಲಾಯಿತು ಎಂದು ನ್ಯೂಸ್​18 ವರದಿ ಮಾಡಿದೆ.

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಅನ್ನು ಪ್ರಸ್ತುತ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಖಾಸಗಿ ಮತ್ತು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಆದರೆ. ಕಾರ್ಬ್​ವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತಿದೆ. Corbevax ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ನೊಂದಿಗೆ ಇಂಟ್ರಾಮಸ್ಕುಲರ್ ಮಾರ್ಗದ ಮೂಲಕ ನಿರ್ವಹಿಸಲಾಗುತ್ತದೆ.

5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯಾಲಾಜಿಕಲ್ ಇ (Biological E) ಸಂಸ್ಥೆಯ ಕಾರ್ಬ್​ವ್ಯಾಕ್ಸ್​ (Corbevax) ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಕೊರೊನಾ ಲಸಿಕೆಯ ಅನುಮೋದನೆಗಾಗಿ ವಿಷಯ ತಜ್ಞರ ಸಮಿತಿಗೆ ಕಂಪನಿಯಿಂದ ಡೇಟಾವನ್ನು ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೆ ವಿಷಯ ತಜ್ಞರ ಸಮಿತಿಯು 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್​ವ್ಯಾಕ್ಸ್‌ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಕಾರ್ಬ್​ವ್ಯಾಕ್ಸ್​ ಲಸಿಕೆಯನ್ನು 5ರಿಂದ 12 ವರ್ಷದೊಳಗಿನವರಿಗಾಗಿ ತಯಾರಿಸಲಾಗಿದೆ. ಈ ಲಸಿಕೆಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ಇರಲಿದೆ. ಇದು ಎರಡು ಡೋಸ್​ನ ಕೊವಿಡ್ ಲಸಿಕೆಯಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಸುಮಾರು 5 ಕೋಟಿ ಬಯೋಲಾಜಿಕಲ್ ಇ ಕಂಪನಿಯ ಕಾರ್ಬ್​ವ್ಯಾಕ್ಸ್​ ಕೊವಿಡ್ ಲಸಿಕೆಗಳನ್ನು ಖರೀದಿಸಿದೆ. ಅವುಗಳನ್ನು ಕೆಲವು ರಾಜ್ಯಗಳಿಗೆ ತಲುಪಿಸಿದೆ.

ಇದನ್ನೂ ಓದಿ: Corbevax: 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲು ಮನವಿ

Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್ ಲಸಿಕೆ ನೀಡಲು ಅನುಮತಿ