ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

ದೆಹಲಿ: ಇಂದಿನಿಂದಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆಯಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ನೆಲೆಸಿರುವ 10 ಜನಪತ್ ನಿವಾಸದ ಬಳಿ ಈಗಾಗಲೇ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗಾಂಧಿ ಪರಿವಾರಕ್ಕೆ ಸಿಆರ್​ಪಿಎಫ್​ನ Z+ ಸೆಕ್ಯೂರಿಟಿಯನ್ನು ನೀಡಲಾಗಿದೆ. ಪ್ರಧಾನಿ ಮೋದಿಗೆ ಮಾತ್ರ SPG ಸೆಕ್ಯೂರಿಟಿ: 28 ವರ್ಷಗಳಿಂದ ಗಾಂಧಿ ಪರಿವಾರಕ್ಕೆ ಎಸ್​ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ಈಗ […]

ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ
ಸಾಧು ಶ್ರೀನಾಥ್​

Updated on: Nov 08, 2019 | 10:46 PM

ದೆಹಲಿ: ಇಂದಿನಿಂದಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆಯಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ನೆಲೆಸಿರುವ 10 ಜನಪತ್ ನಿವಾಸದ ಬಳಿ ಈಗಾಗಲೇ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗಾಂಧಿ ಪರಿವಾರಕ್ಕೆ ಸಿಆರ್​ಪಿಎಫ್​ನ Z+ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಪ್ರಧಾನಿ ಮೋದಿಗೆ ಮಾತ್ರ SPG ಸೆಕ್ಯೂರಿಟಿ:

28 ವರ್ಷಗಳಿಂದ ಗಾಂಧಿ ಪರಿವಾರಕ್ಕೆ ಎಸ್​ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ಈಗ ಅವರಿಗೂ ಎಸ್​ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಇದೀಗ ದೇಶದಲ್ಲಿ ಎಸ್​ಪಿಜಿ ರಕ್ಷಣೆಯನ್ನು ಹೊಂದಿರುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.

ಗಾಂಧಿ ಕುಟುಂಬಕ್ಕೆ ಬೆದರಿಕೆ ಇಲ್ಲ:
ಗಾಂಧಿ ಪರಿವಾರಕ್ಕೆ ಈಗ ಯಾವುದೇ ಬೆದರಿಕೆ ಇಲ್ಲ. ಇತ್ತೀಚೆಗೆ ಎಲ್ಲಾ ಭದ್ರತಾ ಏಜೆನ್ಸಿಗಳಿಂದ ಅಭಿಪ್ರಾಯವನ್ನು ಪಡೆದ ಬಳಿಕ ಎಸ್​ಪಿಜಿ ರಕ್ಷಣೆಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಗಾಂಧಿ ಕುಟುಂಬಕ್ಕೆ ಧಕ್ಕೆಯಾಗಲ್ಲ:
ಎಸ್​ಪಿಜಿ (Special Protection Group) ದೇಶದಲ್ಲಿಯೇ ಅತ್ಯುನ್ನತ ಶ್ರೇಣಿಯ ಭದ್ರತೆಯನ್ನು ಹೊದಗಿಸುವ ಸಂಸ್ಥೆಯಾಗಿದೆ. SPG ಭದ್ರತೆಯನ್ನು ಹಿಂಪಡೆಯುವುದರಿಂದ ಯಾವುದೇ ಕಾರಣಕ್ಕೂ ಗಾಂಧಿ ಕುಟುಂಬದ ಭದ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಗಾಂಧಿ ಪರಿವಾರಕ್ಕೆ 28 ವರ್ಷಗಳಿಂದ ಈ ಎಸ್​ಪಿಜಿ ರಕ್ಷಣೆಯನ್ನು ನೀಡಲಾಗುತ್ತಿದೆ. 1988ರ ಎಸ್​ಪಿಜಿ ಕಾಯ್ದೆ ಅಡಿ 1991 ಸೆಪ್ಟೆಂಬರ್​ ತಿಂಗಳಿಂದ ವಿವಿಐಪಿ ಸೆಕ್ಯೂರಿಟಿ ಕೊಡಲಾಗುತ್ತಿತ್ತು.

ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ:
ಇಷ್ಟು ದಿನ ಹಗಲಿರುಳು ಶ್ರಮಿಸಿ ರಕ್ಷಿಸಿದ ಎಸ್​ಜಿಪಿ ಸಹೋದರ ಮತ್ತು ಸಹೋದರಿಯರೇ ಧನ್ಯವಾದ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 

Published On - 5:49 pm, Fri, 8 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us